Ad Widget

Heeraben Modi | ಆರೋಗ್ಯದಲ್ಲಿ ಏರುಪೇರು ಪ್ರಧಾನಿ ಮೋದಿ ತಾಯಿ ಆಸ್ಪತ್ರೆಗೆ ದಾಖಲು : ತಾಯಿ, ಅಪಘಾತಕ್ಕೊಳಗಾದ ಸಹೋದರನಿಗಾಗಿ ಬಿಜೆಪಿ ಕಾರ್ಯಕರ್ತರಿಂದ ಪ್ರಾರ್ಥನೆ : ಶೀಘ್ರ ಗುಣಮುಖಕ್ಕೆ ರಾಹುಲ್ ಗಾಂಧಿ ಶುಭಹಾರೈಕೆ

20221228_144757
Ad Widget

Ad Widget

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ತಾಯಿ  ಹೀರಾಬೆನ್ ಮೋದಿ  (Heeraben Modi) ಅವರನ್ನು ಅಹಮದಾಬಾದ್ ಆಸ್ಪತ್ರೆಗೆ  ದಾಖಲಿಸಲಾಗಿದೆ ಎಂದು NDTV ವರದಿ ಮಾಡಿದೆ.

Ad Widget

Ad Widget

Ad Widget

Ad Widget

ಈ ವರ್ಷದ ಜೂನ್‌ನಲ್ಲಿ 99 ನೇ ವರ್ಷಕ್ಕೆ ಕಾಲಿಟ್ಟ ಹೀರಾಬೆನ್ ಮೋದಿ  ಅವರ ಆರೋಗ್ಯ ಕಳೆದ ರಾತ್ರಿ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Ad Widget

Ad Widget

Ad Widget

Ad Widget

ಪ್ರಧಾನಿ ತಾಯಿ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಯುಎನ್ ಮೆಹ್ತಾ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಹಾಗೂ ರಿಸರ್ಚ್ ಸೆಂಟರ್‌ನ ಹೇಳಿಕೆ ತಿಳಿಸಿದೆ. ಆಸ್ಪತ್ರೆಯು ಬೇರೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.

ನಿನ್ನೆಯಷ್ಟೇ ಕರ್ನಾಟಕದ ಮೈಸೂರಿನಲ್ಲಿ ನಡೆದ ಕಾರು ಅಪಘಾತದಲ್ಲಿ ಪ್ರಧಾನಿ ಸಹೋದರ ಪ್ರಹ್ಲಾದ್ ಮೋದಿ ಹಾಗೂ  ಇತರ ಕುಟುಂಬ ಸದಸ್ಯರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

Ad Widget

Ad Widget

ಮೋದಿ ತಾಯಿ ಅಸ್ವಸ್ಥರಾಗಿರುವುದಕ್ಕೆ ಶೀಘ್ರ ಗುಣಮುಖರಾಗಲೆಂದು ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿ ಶುಭ ಹಾರೈಸಿದ್ದಾರೆ.

ಪ್ರಧಾನಿ ತಾಯಿ ಮತ್ತು ಅಪಘಾತಕ್ಕೊಳಗಾದ ಸಹೋದರನಿಗಾಗಿ ಬಿಜೆಪಿ ಕಾರ್ಯಕರ್ತರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

Ad Widget

Leave a Reply

Recent Posts

error: Content is protected !!
%d bloggers like this: