Ad Widget

government debt report | ದಿನೇ ದಿನೇ ಏರಿಕೆಯಾಗುತ್ತಿದೆ ಭಾರತದ ಸಾಲ : ಹಣಕಾಸು ಸಚಿವಾಲಯ ವರದಿ – 2014 ರಲ್ಲಿ 55 ಲಕ್ಷ ಕೋಟಿ ಇದ್ದ ಸಾಲ 2022ರಲ್ಲಿ 147 ಲಕ್ಷ ಕೋಟಿಗೆ ಏರಿಕೆ

images (25)
Ad Widget

Ad Widget

Ad Widget

ನವದೆಹಲಿ : ಭಾರತದ ಸಾಲ ದಿನೇ ದಿನೇ ಏರಿಕೆಯಾಗುತ್ತಿದೆ. ಈ ಹಣಕಾಸು ವರ್ಷದ ಜೂನ್ ಅಂತ್ಯಕ್ಕೆ 145.72 ಲಕ್ಷ ಕೋಟಿ ರೂ. ಇದ್ದ ಸರಕಾರದ ಒಟ್ಟು ಸಾಲ ಸೆಪ್ಟೆಂಬರ್ ಅಂತ್ಯದ ವೇಳೆಗೆ 147.19 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಹಣಕಾಸು ಸಚಿವಾಲಯದ (government debt report)ವರದಿ ತಿಳಿಸಿದೆ.

Ad Widget

Ad Widget

Ad Widget

Ad Widget

Ad Widget

2014ರಲ್ಲಿ ಕೇಂದ್ರ ಸರ್ಕಾರದ ಮೇಲೆ ಒಟ್ಟಾರೆ 54,90,763 ಕೋಟಿ ರೂಪಾಯಿ ಸಾಲ ಇತ್ತು ಅಂದರೆ ಒಟ್ಟು 55 ಲಕ್ಷ ಕೋಟಿ ಅಂತ ಅಂಕಿಅಂಶವನ್ನು ಕೇಂದ್ರ ಕೊಟ್ಟಿತ್ತು. ಆ ಸಾಲ 2018ರ ಸೆಪ್ಟೆಂಬರ್ ಗೆ 82 ಲಕ್ಷ ಕೋಟಿಗೆ ತಲುಪಿತು. ಇದೀಗ 2022 ಯ ಸೆಪ್ಟೆಂಬರ್ ಗೆ 147 ಲಕ್ಷ ಕೋಟಿಗೆ ತಲುಪಿದೆ. ಅಂದರೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಲೆಕ್ಕಾಚಾರದಂತೆ 2014 ರಿಂದ 2022ಕ್ಕೆ 92 ಲಕ್ಷ ಕೋಟಿ ಸಾಲ ಭಾರತದ ಮೇಲೆ ಏರಿಕೆಯಾಗಿದೆ.

Ad Widget

Ad Widget

Ad Widget

Ad Widget

Ad Widget

ಈ ಮೂಲಕ 2022-23ರ ಎರಡನೇ ತ್ರೈಮಾಸಿಕದಲ್ಲಿ ಸರಕಾರದ ಒಟ್ಟು ಸಾಲ ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ. 1ರಷ್ಟು ಏರಿಕೆಯಾಗಿರುವುದನ್ನು ವರದಿ ತೋರಿಸುತ್ತಿದೆ.

ವರದಿಯ ಪ್ರಕಾರ ಸಾರ್ವಜನಿಕ ಸಾಲವು 2022ರ ಸೆಪ್ಟೆಂಬರ್-ಅಂತ್ಯಕ್ಕೆ ಒಟ್ಟು ಸಾಲದ ಶೇ. 89.1ರಷ್ಟಿದೆ. ಜೂನ್ 30ಕ್ಕೆ ಶೇ. 88.3ರಷ್ಟಿದ್ದ ಈ ಸಾಲದ ಪ್ರಮಾಣ ಸೆಪ್ಟೆಂಬರ್‌ ವೇಳೆಗೆ ಮತ್ತಷ್ಟು ಏರಿಕೆಯಾಗಿದೆ ಎಂದು ಹಣಕಾಸು ಸಚಿವಾಲಯ ಮಂಗಳವಾರ ಬಿಡುಗಡೆ ಮಾಡಿರುವ ಸಾರ್ವಜನಿಕ ಸಾಲ ನಿರ್ವಹಣೆಯ ತ್ರೈಮಾಸಿಕ ವರದಿ ತಿಳಿಸಿದೆ.

Ad Widget

Ad Widget

Ad Widget

Ad Widget

ಬಾಕಿ ಉಳಿದಿರುವ ಸೆಕ್ಯೂರಿಟಿಗಳಲ್ಲಿ ಸುಮಾರು ಶೇ. 29.6ರಷ್ಟು ಸೆಕ್ಯೂರಿಟಿಗಳು 5 ವರ್ಷಗಳಿಗಿಂತ ಕಡಿಮೆ ಅವಧಿಯ ಮೆಚ್ಯೂರಿಟಿಯನ್ನು ಹೊಂದಿವೆ ಎಂದು ವರದಿ ಹೇಳಿದೆ.

ಎರಡನೇ ತ್ರೈಮಾಸಿಕದಲ್ಲಿ ಕೇಂದ್ರ ಸರ್ಕಾರವು ಡೇಟೆಡ್‌ ಸೆಕ್ಯೂರಿಟಿಗಳ ಮೂಲಕ 4,06,000 ಕೋಟಿಗಳನ್ನು ಸಂಗ್ರಹಿಸಿದೆ. ಸಾಲದ ಕ್ಯಾಲೆಂಡರ್‌ನಲ್ಲಿ 4,22,000 ಕೋಟಿ ರೂ.ಗಳ ಅಧಿಸೂಚಿತ ಮೊತ್ತಕ್ಕೆ ವಿರುದ್ಧವಾಗಿ ಈ ಪ್ರಮಾಣದ ಹಣವನ್ನು ಸಂಗ್ರಹಿಸಿದೆ. ಈ ಅವಧಿಯಲ್ಲಿ ಸರಕಾರದ ಮರುಪಾವತಿ ಮೊತ್ತ 92,371.15 ಕೋಟಿ ರೂ.ಗಳಷ್ಟಿತ್ತು.

ಜುಲೈ-ಸೆಪ್ಟೆಂಬರ್ 2022ರ ಅವಧಿಯಲ್ಲಿ ಕೇಂದ್ರ ಸರ್ಕಾರವು ನಗದು ನಿರ್ವಹಣೆ ಬಿಲ್‌ಗಳ ಮೂಲಕ ಯಾವುದೇ ಮೊತ್ತವನ್ನು ಸಂಗ್ರಹಿಸಿಲ್ಲ. ತ್ರೈಮಾಸಿಕದಲ್ಲಿ ರಿಸರ್ವ್ ಬ್ಯಾಂಕ್ ಸರ್ಕಾರಿ ಭದ್ರತೆಗಳಿಗಾಗಿ ಮುಕ್ತ ಮಾರುಕಟ್ಟೆ ಕಾರ್ಯಾಚರಣೆಗಳನ್ನೂ ನಡೆಸಿಲ್ಲ.

ತ್ರೈಮಾಸಿಕದಲ್ಲಿ ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ ಮತ್ತು ಸ್ಪೆಷಲ್ ಲಿಕ್ವಿಡಿಟಿ ಫೆಸಿಲಿಟಿ ಸೇರಿದಂತೆ ಲಿಕ್ವಿಡಿಟಿ ಅಡ್ಜಸ್ಟ್‌ಮೆಂಟ್ ಫೆಸಿಲಿಟಿ (ಎಲ್‌ಎಎಫ್) ಅಡಿಯಲ್ಲಿ ಆರ್‌ಬಿಐ ನಿವ್ವಳ ದೈನಂದಿನ ಸರಾಸರಿ ಲಿಕ್ವಿಡಿಟಿ ಹೀರಿಕೊಳ್ಳುವಿಕೆಯು 1,28,323.37 ಕೋಟಿ ರೂ. ಆಗಿದೆ ಎಂದು ವರದಿ ಹೇಳಿದೆ.

ಹಣದುಬ್ಬರವನ್ನು ನಿಯಂತ್ರಿಸುವ ಉದ್ದೇಶದಿಂದ ಹಣಕಾಸು ನೀತಿ ಸಮಿತಿಯು ಪಾಲಿಸಿ ರೆಪೋ ದರವನ್ನು 100 ಮೂಲ ಅಂಕ ಹೆಚ್ಚಿಸಲು ನಿರ್ಧರಿಸಿದೆ. ಅಂದರೆ, ಶೇ. 4.90ಯಿಂದ ಎರಡನೇ ತ್ರೈಮಾಸಿಕದಲ್ಲಿ ಶೇ. 5.90ಗೆ ಹೆಚ್ಚಿಸಲು ನಿರ್ಧರಿಸಿದೆ. ಕೇಂದ್ರ ಸರ್ಕಾರದ ಸೆಕ್ಯುರಿಟಿಗಳ ಮಾಲೀಕತ್ವದ ಮಾದರಿಯಲ್ಲಿ ಜೂನ್ 30 ರಂದು ಶೇ. 38.04ರಷ್ಟಿದ್ದ ವಾಣಿಜ್ಯ ಬ್ಯಾಂಕ್‌ಗಳ ಪಾಲು ಶೇ. 38.3ಕ್ಕೆ ತಲುಪಿತ್ತು ಎಂದು ಇದು ಸೂಚಿಸಿದೆ.

ವಿದೇಶಿ ವಿನಿಮಯ ಮೀಸಲಿಗೆ ಬಂದಾಗ ಸೆಪ್ಟೆಂಬರ್ 24, 2021ರಂದು 638.64 ಬಿಲಿಯನ್‌ ಡಾಲರ್‌ ಇದ್ದ ಫಾರೆಕ್ಸ್‌ ರಿಸರ್ವ್‌ ಸೆಪ್ಟೆಂಬರ್‌ 30, 2022ರ ವೇಳೆಗೆ 532.66 ಬಿಲಿಯನ್‌ ಡಾಲರ್‌ಗೆ ಕುಸಿತ ಕಂಡಿದೆ ಎಂದು ವರದಿ ಹೇಳಿದೆ.

ಜುಲೈ 1, 2022 ಮತ್ತು ಸೆಪ್ಟೆಂಬರ್ 30, 2022ರ ನಡುವೆ ರೂಪಾಯಿ ಮೌಲ್ಯವು ಶೇಕಡಾ 3.11 ರಷ್ಟು ಕುಸಿದಿದೆ. ಜುಲೈ 1 ರಂದು ಡಾಲರ್ ಎದುರು ರೂಪಾಯಿ ಮೌಲ್ಯವು 79.09 ರಷ್ಟಿತ್ತು, ಅದೀಗ ಸೆಪ್ಟೆಂಬರ್ 30 ರಂದು 81.55ಕ್ಕೆ ಕುಸಿದಿದೆ.

Ad Widget

Leave a Reply

Recent Posts

5 guarantee | ಖಚಿತವಾದ ಪಂಚ ಯೋಜನೆಗಳು: ಬಡವರ-ಮಧ್ಯಮ ವರ್ಗದವರ ಕಲ್ಯಾಣಕ್ಕೆ ಕ್ರಾಂತಿಕಾರಕ ಮುನ್ನುಡಿ ಬರೆದ ಕಾಂಗ್ರೆಸ್ ಸರ್ಕಾರ – ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯರಿಂದ ಘೋಷಣೆ : 5 ಯೋಜನೆಗಳ ಪೂರ್ತಿ ವಿವರ ಇಲ್ಲಿದೆ : ನಳಿನ್, ಸಿ.ಟಿ.ರವಿ, ಬಜರಂಗದಳದ ಪದವಿದರರಿಗೂ ನಮ್ಮ ಯೋಜನೆ ಫ್ರೀ ಎಂದು ಕಾಲೆಳೆದ ಕಾಂಗ್ರೇಸ್..!

error: Content is protected !!
%d bloggers like this: