ಬಂಟ್ವಾಳ : ಡಿ 28 : ಪಾರ್ಸೆಲ್ ನೀಡಲು ಬಂದಿದ್ದ ಅಯ್ಯಪ್ಪ ವೃತದಾರಿಗೆ ಜೀವ ಬೆದರಿಕೆಯೊಡ್ಡಿದ್ದ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಡಿ 28 ರಂದು ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯ ಮೀನು ವ್ಯಾಪಾರಿ ಇಕ್ಬಾಲ್ ಬಂಧಿತ ಆರೋಪಿ
ಅಯ್ಯಪ್ಪ ಮಾಲಾಧಾರಿಯಾಗಿರುವ ಯಶ್ವಿತ್ ಎಂಬವರು ದೂರುದಾರರಾಗಿದ್ದು, ಅವರು ಸ್ನೇಹಿತನ ಜೊತೆ ರಿಕ್ಷಾ ಟೆಂಪೋದಲ್ಲಿ ಪಾರ್ಸೆಲ್ ಸರ್ವೀಸ್ ಮಾಡುವ ಸಂದರ್ಭದಲ್ಲಿ ಘಟನೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಡಿಸೆಂಬರ್ 27ರಂದು ಸಂಜೆ 4.30ಕ್ಕೆ ಪಾರ್ಸೆಲ್ ನೀಡಲೆಂದು ಸ್ನೇಹಿತನೊಂದಿಗೆ ಬಂಟ್ವಾಳದ ಬಿ ಮೂಡ ಗ್ರಾಮದ ಗೂಡಿನಬಳಿ ಎಂಬಲ್ಲಿಗೆ ಪಾರ್ಸೆಲ್ ವಾಹನದಲ್ಲಿ ತೆರಳಿದ್ದ ಸಂದರ್ಭ ಆಕ್ಟೀವಾ ಸ್ಕೂಟರ್‌ನಲ್ಲಿ ಬಂದ ಆರೋಪಿಯು ಅಡ್ಡಗಟ್ಟಿ ಅವಾಚ್ಯವಾಗಿ ನಿಂದಿಸಿದ್ದಲ್ಲದೆ, ಜೀವ ಬೆದರಿಕೆ ಒಡ್ಡಿದ್ದಾನೆಂದು ದೂರಿನಲ್ಲಿ ಆರೋಪಿಸಲಾಗಿದೆ.
ಇದು ನಮ್ಮ ಏರಿಯಾ, ಈ ಭಾಗಕ್ಕೆ ಹಿಂದೂಗಳು ಬರಬಾರದು ಎಂದು ತಿಳಿಸಿ, ಅಯ್ಯಪ್ಪ ವೃತಧಾರಿಗಳ ಬಗ್ಗೆ ನಿಂದನೆಯ ಮಾತುಗಳನ್ನು ಆಡಿ ಜೀವ ಬೆದರಿಕೆ ಒಡ್ಡಿದ್ದಾನೆಂದು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.