ಬೆಂಗಳೂರು (ಡಿ.27) : ಯುವಕನೊಬ್ಬ ಪಡೆದ ಹಣ ವಾಪಸ್ಸು ನೀಡಿಲ್ಲವೆಂದು ತಂಡವೊಂದು ಆತನನ್ನು ಅಪಹರಣ ಮಾಡಿ , ಅಮಾನುಷವಾಗಿ ಹಲ್ಲೆ ನಡೆಸಿ ಕೊಂದು ಬಳಿಕ ಶವವನ್ನ ಚಾರ್ಮುಡಿ ಘಾಟ್ನಲ್ಲಿ ಬಿಸಾಡುವ ಮೂಲಕ ಪೈಶಾಚಿಕ ಕೃತ್ಯ ಎಸಗಿದ ಘಟನೆಯನ್ನು 9 ತಿಂಗಳ ಬಳಿಕ ಬೆಂಗಳುರು ಪೊಲೀಸರು ಭೇದಿಸಿದ್ದಾರೆ. ಯವಕನಿಗೆ ಹಂತಕರು ಹೃದಯ ಶೂನ್ಯರಂತೆ ಭೀಭತ್ಸವಾಗಿ ಹಲ್ಲೆ ನಡೆಸುವ ವಿಡಿಯೋ ಲೀಕ್ ಆಗಿತ್ತು. ಆ ಬಳಿಕ ಈ ಭಯಾನಕ ಘಟನೆ ಪೊಲೀಸರ ಗಮನಕ್ಕೆ ಬಂದಿತ್ತು. ವಿಡಿಯೋ ಬಹಿರಂಗವಾಗುತ್ತಲೇ ಸುಮೋಟೊ ಪ್ರಕರಣ ದಾಖಲಿಸಿದ ಪೊಲೀಸರು ಕೃತ್ಯದ ಆಳಕ್ಕೆ ಇಳಿದು ತನಿಖೆ ನಡೆಸಿ ಮುಚ್ಚಿ ಹೋಗಿದ ಕೊಲೆಯನ್ನು ಬೆಳಕಿಗೆ ತಂದಿದ್ದಾರೆ.
ಚಿಕ್ಕಬಳ್ಳಾಪುರ ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಪರ ಸಂಘಟನೆಗಳ ಒಕ್ಕೂಟ) ರಾಜ್ಯ ಅಧ್ಯಕ್ಷ ಎಚ್ ಜಿ ವೆಂಕಟಾಚಲಪತಿ, ಅವರ ಪುತ್ರ ಎ ವಿ ಶರತ್ ಕುಮಾರ್, ಸಹಚರರಾದ ಆರ್ ಶ್ರೀಧರ್, ಕೆ ಧನುಷ್, ಯಲಹಂಕದ ಎಂ ಪಿ ಮಂಜುನಾಥ್ ಬಂಧಿತರು. ಬೆಂಗಳೂರು ನಗರ ಕೋಣನಕುಂಟೆಯ ಹರಿನಗರ ನಿವಾಸಿ ಎಚ್ ಶರತ್ ಹತ್ಯೆಯಾದ ಯುವಕ.
ಮೂಲಗಳ ಪ್ರಕಾರ ಶರತ್ ಎಸ್ಸಿ ಎಸ್ಟಿ ಅಭಿವೃದ್ದಿ ನಿಗಮದಿಂದ ಸಬ್ಸಿಡಿ ದರದಲ್ಲಿ ಕಾರು ಕೊಡಿಸುವುದಾಗಿ ಚಿಕ್ಕಬಳ್ಳಾಪುರ ಹಾಗೂ ಯಲಹಂಕದ ಹಲವು ನಿವಾಸಿಗಳಿಂದ ಒಟ್ಟು ಸುಮಾರು 20 ಲಕ್ಷ ಹಣ ಪಡೆದು ವಂಚಿಸಿದ್ದ. ಸುವುದಾಗಿ ಚಿಕ್ಕಬಳ್ಳಾಪುರ ಹಾಗೂ ಯಲಹಂಕ ನಿವಾಸಿಗಳಿಂದ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದರು. ಕಾರನ್ನು ಕೊಡಿಸದ ಕಾರಣಕ್ಕೆ ಗ್ರಾಹಕರು ಆತನ ವಿರುದ್ಧ ತಿರುಗಿ ಬಿದ್ದು, ವಂಚನೆ ಪ್ರಕರಣ ದಾಖಲಿಸಿದ್ದರು.
ಅಲ್ಲದೇ ಮೋಸ ಹೋದವರು ಹಣ ವಾಪಸ್ ಕೊಡಿಸುವಂತೆ ಚಿಕ್ಕಬಳ್ಳಾಪುರ ಕರ್ನಾಟಕ ರಕ್ಷಣಾ ವೇದಿಕೆ ವೆಂಕಟಾಚಲಪತಿ ಬಳಿ ಕೇಳಿಕೊಂಡಿದ್ದರು. ಹಣ ವಾಪಸ್ಸು ಮಾಡಲು ಸುಫಾರಿ ಪಡೆದ ಆರೋಪಿಗಳು ಹಣ ವಾಪಸ್ಸು ಮಾಡುವಂತೆ ಹಲವು ಸಲ ಶರತ್ ನನ್ನು ಬೆದರಿಸಿದ್ದಾರೆ. ಆದರೂ ಶರತ್ ಹಣ ಹಿಂತಿರುಗಿಸಿರಲಿಲ್ಲ. ಶರತ್ ವರ್ತನೆಯಿಂದ ರೋಸಿ ಹೋಗಿದ್ದ ಆರೋಪಿಗಳು, ಮಾರ್ಚ್ ತಿಂಗಳ ಒಂದು ದಿನ ಶರತ್ ಮೈಸೂರಿನಿಂದ ಬೆಂಗಳೂರಿಗೆ ಬಂದು ಬನಶಂಕರಿ ಬಸ್ ನಿಲ್ದಾಣದ ಬಳಿ ನಡೆದು ಹೋಗ್ತಿದ್ದ ವೇಳೆ ಆತನನ್ನು ಕಾರಿನಲ್ಲಿ ಕಿಡ್ನಾಪ್ ಮಾಡಿದ್ರು.
#Visualsaredisturbing : A man named Sharath was brutally beaten and killed by loan sharks. 6 months after the murder- cops have cracked the case. Family believed he had left the state for work. Incident took place in #Bengaluru 's konankunte. #Karnataka pic.twitter.com/rETe0pSPDO
— Imran Khan (@KeypadGuerilla) December 28, 2022
ಬಳಿಕ ನೇರವಾಗಿ ಗೌರಿಬಿದನೂರಿನ ಫಾರ್ಮ್ ಹೌಸ್ ಗೆ ಕರೆದೊಯ್ತು ಅಲ್ಲಿನ ಕೋಣೆಯೊಂದ್ರಲ್ಲಿ ಕೂಡಿ ಹಾಕಿ ನಗ್ನಗೊಳಿಸಿ ಹಲ್ಲೆ ಮಾಡಿದ್ರು. ಅಷ್ಟು ಸಾಲದು ಅನ್ನೊ ರೀತಿ ಮರಕ್ಕೆ ನೇತಾಕಿಯೂ ಮನ ಬಂದಂತೆ ಹಲ್ಲೆ ಮಾಡಿದ್ದಾರೆ. ಈ ಕೃತ್ಯವನ್ನು ಆರೋಪಿಗಳ ಪೈಕಿ ಓರ್ವ ವಿಡಿಯೋ ಕೂಡ ಮಾಡಿಕೊಂಡಿದ್ದ. ಈ ವಿಡಿಯೋವನ್ನು ಇಲ್ಲಿ ಹಾಕಲಾಗಿದ್ದು ದುರ್ಬಲ ಹೃದಯದವರು ನೋಡದಿರುವುದೆ ಉತ್ತಮ. ಇದೇ ವೇಳೆ ಹಲ್ಲೆಯಿಂದ ತೀವ್ರ ಗಾಯಗೊಂಡಿದ್ದ ಶರತ್ ಸಾವನ್ನಪ್ಪಿದ್ದು, ಶವವನ್ನ ಮೂಟೆಯಲ್ಲಿ ತುಂಬಿದ್ದ ಹಂತಕರು ಚಾರ್ಮಾಡಿಘಾಟ್(Charmady Ghat) ನಲ್ಲಿ ಬಿಸಾಡಿ ವಾಪಸ್ಸಾಗಿದ್ರು.
ಅಲ್ಲದೆ, ಶರತ್ ಮೊಬೈಲ್ ಕಸಿದುಕೊಂಡಿದ್ದ ಆರೋಪಿಗಳು “ತಾನು ಕೆಲಸದ ಸಲುವಾಗಿ ಹೊರ ರಾಜ್ಯಕ್ಕೆ ಹೋಗುತ್ತಿದ್ದೇನೆ. ಯಾರೂ ನನ್ನ ಹುಡುಕಬೇಡಿ” ಎಂದು ಪೋಷಕರಿಗೆ ಮೆಸೇಜ್ ಮಾಡಿ, ಲಾರಿಯೊಂದರ ಒಳಗೆ ಮೊಬೈಲ್ ಎಸೆದಿದ್ದರು ಎನ್ನಲಾಗಿದೆ.
ಬಳಿಕ ಶರತ್ ಪೋಷಕರಿಗೆ ಮೃತ ಶರತ್ ಫೋನ್ ನಿಂದಲೇ ಕರೆ ಮಾಡಿದ್ದ ಹಂತಕರು, ನನಗೆ ಸಾಲ ಹೆಚ್ಚಾಗಿದೆ. ನಾನು ಊರು ಬಿಟ್ಟು ಹೋಗ್ತಿದ್ದೇನೆ. ಸೆಟೆಲ್ ಆದ್ಮೇಲೆ ಬರ್ತೇನೆ ಅಂತೇಳಿ ಫೋನ್ ಸ್ವಿಚ್ ಆಫ್ ಮಾಡಿ ಲಾರಿ ಮೇಲೆ ಎಸೆದಿದ್ರು.
ಮನೆಯವರು ಮಗ ದುಡಿಯಲು ಹೋಗಿದ್ದಾನೆ ಅಂದುಕೊಂಡಿದ್ದರು. ಇತ್ತ ಆರೋಪಿಗಳು ಯಾರಿಗೂ ಅನುಮಾನ ಬರದಂತೆ 9 ತಿಂಗಳಿಂದ ಆರಾಮಾಗಿ ಜೀವನ ಸಾಗಿಸ್ತಿದ್ರು. ಆದ್ರೆ, ಅವ್ರೇ ಮಾಡಿಕೊಂಡಿದ್ದ ಹಲ್ಲೆಯ ದೃಶ್ಯಗಳು ದಿನಕಳೆದಂತೆ ಹತ್ಯೆಯಲ್ಲಿ ಭಾಗಿಯಾಗಿದ್ದ ಆರೋಪಿಯೊಬ್ಬನಿಂದ ಲೀಕ್ ಆಗಿತ್ತು. ಅದು ಒಬ್ಬರಿಂದ ಒಬ್ಬರ ಮೊಬೈಲ್ ಗೆ ಹರಿದು ಕೊನೆಗೆ ಪೊಲೀಸ್ರ ಕೈ ಸೇರಿತ್ತು.
ಈ ವಿಡಿಯೋ(Video) ಸೋಷಿಯಲ್ಮೀಡಿಯಾ(Social media)ಗಳಲ್ಲಿ ಹರಿದಾಡುತ್ತ ಕೊನೆಗೆ ಕಬ್ಬನ್ ಪಾರ್ಕ್(Cubbon park) ಸಬ್ ಡಿವಿಷನ್ ಎಸಿಪಿಗೂ ತಲುಪಿತ್ತು. ವಿಡಿಯೋ ನೋಡಿ ಶಾಕ್ ಆದ ಪೊಲೀಸ್ರು ಏನೋ ಆಗಿದೆ ಅನ್ನೋ ಅನುಮಾನದಲ್ಲಿ ಸುಮೋಟೊ ಕೇಸ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.ಆಗ ಯುವಕನನ್ನು ಅಪಹರಿಸಿ ಆತನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ಕೊಲೆ ಮಾಡಿರುವುದು ಹಾಗೂ ಶವವನ್ನು ನಿರ್ಜನ ಪ್ರದೇಶದಲ್ಲಿ ಬಿಸಾಡಿರುವುದು ಪತ್ತೆಯಾಗಿದೆ. ಹಂತಕರನ್ನ ಬಂಧಿಸಿದ ಪೊಲೀಸರು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.