Connect with us

ದಕ್ಷಿಣ ಕನ್ನಡ

Sullia Angara | ಅಧಿವೇಶನದಲ್ಲಿ ಮೀನುಗಾರರ ಬಗ್ಗೆ ಮಠಂದೂರು ಕೇಳಿದ ಪ್ರಶ್ನೆಗೆ ಸಿದ್ದರಾಮಯ್ಯ ಸಹಿತ ವಿಪಕ್ಷದವರ ತೀವ್ರ ತರಾಟೆಗೆ ಒಳಗಾದ ಸಚಿವ ಅಂಗಾರ

Ad Widget

Ad Widget

ಬೆಂಗಳೂರು: ಕರಾವಳಿಯ ಮೀನುಗಾರರಿಗೆ ಸರ್ಕಾರದಿಂದ ಕೊಡಲಾಗುತ್ತಿರುವ ಸಬ್ಸಿಡಿ ಸೀಮೆ ಎಣ್ಣೆ (Fisherman Problem) ವಿಚಾರವಾಗಿ ಬೆಳಗಾವಿ ಅಧಿವೇಶನದಲ್ಲಿ ರಾಜ್ಯ ಸರ್ಕಾರವನ್ನು ಹಾಗೂ ಸಚಿವ ಅಂಗಾರ (Angara Sullia) ಅವರನ್ನು ಪ್ರತಿಪಕ್ಷ ನಾಯಕರು ಹಿಗ್ಗಾಮುಗ್ಗಾ ತರಾಟೆಗೆತ್ತಿಕೊಂಡ ಘಟನೆ ನಡೆದಿದೆ. ಕೊನೆಗೆ ಹೇಳಿದ ಉತ್ತರವನ್ನು ನಾಲ್ಕು ಬಾರಿ ಹೇಳಿದಾಗ ಸಭಾಧ್ಯಕ್ಷರೇ ಮನವಿ ಮಾಡಿ ವಿಪಕ್ಷ ನಾಯಕರನ್ನು ಸಮಾಧಾನ ಪಡಿಸಿದ ಘಟನೆ ನಡೆದಿದೆ.

Ad Widget

Ad Widget

Ad Widget

Ad Widget

ಮೀನುಗಾರರ ಸಮಸ್ಯೆ ವಿಚಾರವಾಗಿ ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಪರವಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಪ್ರಶ್ನೆ ಕೇಳುತ್ತಾ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಈ ಭಾಗದಲ್ಲಿ ನಾಡ ದೋಣಿಯಲ್ಲಿ ಮೀನುಗಾರಿಕೆ ಮಾಡುವ ಬಡ ಮೀನುಗಾರರಿದ್ದಾರೆ. ಅವರಿಗೆ ವರ್ಷದ 10 ತಿಂಗಳು, ಮೀನುಗಾರಿಕೆಗಾಗಿ ಒಬ್ಬನಿಗೆ ತಿಂಗಳಿಗೆ 300 ಲೀ, ನಂತೆ ಸೀಮೆ ಎಣ್ಣೆಯನ್ನು ಸಬ್ಸಿಡಿಯಲ್ಲಿ ಕೇಂದ್ರ ಸರ್ಕಾರ ಒದಗಿಸುತ್ತಿದೆ. ಆದರೆ, ಮೀನುಗಾರಿಕೆ ಆರಂಭಗೊಂಡು 5 ತಿಂಗಳಾದರೂ ಕೇವಲ ಒಂದು ತಿಂಗಳ ಸಬ್ಸಿಡಿ ಸೀಮೆ ಎಣ್ಣೆಯನ್ನು ಮಾತ್ರವೇ ಒದಗಿಸಿದ್ದಾರೆ. ಬಾಕಿ ನಾಲ್ಕು ತಿಂಗಳ ಸೀಮೆ ಎಣ್ಣೆ ಒದಗಿಸಿಲ್ಲ ಎಂದರು.

Ad Widget

Ad Widget

Ad Widget

ಸಚಿವ ಅಂಗಾರರು ಉತ್ತರ ನೀಡುವ ವೇಳೆ ಕೇಂದ್ರದಿಂದ 18 ಸಾವಿರದ 618 ಕಿ.ಲೋ. ಲೀಟರ್ ಸೀಮೆ ಎಣ್ಣೆ ಕೇಂದ್ರದಿಂದ ಬರಬೇಕಿತ್ತು. ಕೇಂದ್ರ ಸರ್ಕಾರ ಬಿಡುಗಡೆ ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಇದಕ್ಕೆ ಬದಲಿ ವ್ಯವಸ್ಥೆಗೆ ಇಂಡಸ್ಟ್ರಿಯಲ್ ಸಬ್ಸಿಡಿ ಕೊಡುವಂತೆ ಮುಖ್ಯಮಂತ್ರಿ ಬಳಿ ಮನವಿ ಮಾಡಿದ್ದೇನೆ ಎಂದರು.

Ad Widget

ಆಗ ಮಧ್ಯಪ್ರವೇಶಿಸಿದ ಮಾಜಿ ಸಿಎಂ ಸಿದ್ದರಾಮಯ್ಯ , ಕೇಂದ್ರ ಸರ್ಕಾರದಿಂದ ಯಾಕೆ ಬಿಡುಗಡೆಯಾಗಿಲ್ಲ. 5 ತಿಂಗಳಿನಿಂದ ಸರ್ಕಾರ ಯಾಕೆ ನೀಡಿಲ್ಲ. ಸೀಮೆಎಣ್ಣೆ ಕೊಡಲಾಗದಿದ್ದರೆ ಅಧಿಕಾರ ಯಾಕೆ ನಡೆಸ್ತಿರಾ ಎಂದು ಪ್ರಶ್ನಿಸಿದರು.ಆಗ ಮತ್ತೇ ಮಠಂದೂರುರವರಿಗೆ ನೀಡಿದ ಉತ್ತರವನ್ನೇ ಅಂಗಾರರು ಸಿದ್ದರಾಮಯ್ಯವರಿಗೂ ನೀಡಿದರು.

Ad Widget

Ad Widget

ಆ ನಡುವೆ ಮೀನುಗಾರರ ಪರ ಮಾತನಾಡಿದ ವಿಪಕ್ಷ ಸದಸ್ಯ ದೇಶಂಪಾಡೆ, ಸಿಎಂ ದಿನ ಸಿಗೊದಿಲ್ವ, ರಿಕ್ವೆಸ್ಟ್ ಅಂದರೆ ಏನಾರ್ಥ ಕೇಳಿದರು.

ಯು.ಟಿ ಖಾದರ್ ಮಾತನಾಡುತ್ತಾ, ಸೀಮೆಎಣ್ಣೆ ವಿಚಾರದಲ್ಲಿ ಸ್ಪಷ್ಟತೆ ಕೊಡುತ್ತೇನೆ. ಇದರಲ್ಲಿ ಗೊಂದಲವಾಗುವುದು ಬೇಡ, ಕೇಂದ್ರ ಸರ್ಕಾರ ಮೀನುಗಾರರಿಗೆ ಸೀಮೆ ಎಣ್ಣೆ ಕೊಡುವಂತಹ ಕಾನೂನೇ ಇಲ್ಲ, ಕೊಡುವುದೇ ಇಲ್ಲ. ಕೇಂದ್ರ ಸರ್ಕಾರ ಡೊಮೆಸ್ಟಿಕ್ ಯೂಸ್ ಗೆ ಮಾತ್ರವೇ ಸೀಮೆ ಎಣ್ಣೆ ಕೊಡುತ್ತದೆ. ಮುಂಚೆ ಏನಿತ್ತು, ಕೇಂದ್ರ ಸರ್ಕಾರ ಕೊಡುತ್ತಿದ್ದ ಸೀಮೆ ಎಣ್ಣೆಯನ್ನು ನಾವು ಸಬ್ಸಿಡಿಯಾಗಿ ಸ್ವಲ್ಪ ಮೀನುಗಾರರಿಗೆ ಕೊಡುತ್ತಿತ್ತು. ಈಗ ಎಲ್ಲ ಮನೆಗಳಿಗೂ ಗ್ಯಾಸ್ ಬಂದಿದೆ. ಹಾಗಾಗಿ ಕೇಂದ್ರ ಸರ್ಕಾರ ನಮಗೆ ಕೊಡಬೇಕಾದ ಸೀಮೆ ಎಣ್ಣೆಯನ್ನು ಕಡಿತಗೊಳಿಸಿ, ಬೇರೆ ಯಾರಿಗೂ ಕೊಡಬಾರದು ಅಂತ ಸ್ಪಷ್ಟವಾದ ನಿರ್ದೇಶನ ಕೊಟ್ಟಿದ್ದಾರೆ. ನೀವು ರಾಜ್ಯದಿಂದ ಬಿಡುಗಡೆ ಮಾಡಿ ಮೀನುಗಾರರಿಗೆ ಸೀಮೆ ಎಣ್ಣೆ ಕೊಡಿ. ಕೇಂದ್ರದಿಂದ ಸೀಮೆ ಎಣ್ಣೆ ಬರುವುದೇ ಇಲ್ಲ. ಪ್ರಾಬ್ಲಂ ಏನು ಅನ್ನೋದನ್ನೇ ನೋಡದೇ ಬರೇ ಕೇಂದ್ರ ಕೇಂದ್ರ ಅಂತ ಹೇಳಿದ್ರೆ ಆಗುದಿಲ್ಲ ಎಂದು ತರಾಟೆಗೆತ್ತಿಕೊಂಡರು.

ಆಗ ಮತ್ತೇ ಅಂಗಾರರು , ಮೊದಲು ಮಠಂದೂರಿಗೆ ಹೇಳಿದ ಉತ್ತರವನ್ನೇ ಹೇಳಿದಾಗ ವಿಪಕ್ಷಗಳು ತರಾಟೆಗೆ ತೆಗೆದುಕೊಂಡವು. ಮೀನುಗಾರರಿಗೆ ಸೀಮೆ ಎಣ್ಣೆ ಒಂದು ವಾರದಲ್ಲಿ ಕೊಡಬೇಕೆಂದು ಸಿದ್ದರಾಮಯ್ಯ ಒತ್ತಾಯಿಸಿದರು.

ಕೊನೆಗೆ ವಿಧಾನಸಭಾ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ , ಸಿದ್ದರಾಮಯ್ಯ, ಖಾದರ್ ರಲ್ಲಿ ಮನವಿ ಮಾಡುತ್ತಾ, ಅಂಗಾರರು ನಾಲ್ಕು ಬಾರಿ ಯಾವಾ ಉತ್ತರ ಕೊಟ್ಟಿದ್ದಾರೆ ಎಂದು ಸದನ ಗಮನಿಸಿದೆ. ಒಂದೇ ಉತ್ತರ ಅವರು ಕೊಟ್ಟಿರುವುದು . ಇವಗ ಬೇರೆ ಚರ್ಚೆ ಮಾಡುವ ಎಂದು ಮೀನುಗಾರರ ಸೀಮೆಎಣ್ಣೆ ಚರ್ಚೆಗೆ ವಿರಾಮ ನೀಡಿದರು.

Click to comment

Leave a Reply

ಸುಳ್ಯ

 Kukke subrahmnya Temple ಕುಕ್ಕೆ ಸುಬ್ರಹ್ಮಣ್ಯ ಭಕ್ತರ ಗಮನಕ್ಕೆ :  ಡಿ.8ರಿಂದ 24ರ ತನಕ ಕ್ಷೇತ್ರದಲ್ಲಿ ಪ್ರಧಾನ ಸೇವೆ ಸಹಿತ ಹಲವು ಸೇವೆಗಳು ಅಲಭ್ಯ,  ವ್ಯತ್ಯಯ – ಇಲ್ಲಿದೆ ಮಾಹಿತಿ

Ad Widget

Ad Widget

ಶ್ರೀ ಕ್ಷೇತ್ರದ  ಜಾತ್ರೋತ್ಸವದ ಹಿನ್ನಲೆ ಇಲ್ಲಿನ  ಪ್ರಧಾನ ಸೇವೆಗಳಲ್ಲಿ  ಒಂದಾದ ಸರ್ಪ ಸಂಸ್ಕಾರವು ಡಿ.8ರಿಂದ 24ರ ತನಕ ನೆರವೇರುವುದಿಲ್ಲ. ಇತರ ಸೇವೆಗಳು ಎಂದಿನಂತೆ ನೆರವೇರುತ್ತದೆ. ಲಕ್ಷದೀಪೋತ್ಸವ, ಚೌತಿ, ಪಂಚಮಿ ಮತ್ತು ಷಷ್ಠಿ ದಿನ ಕೆಲವೊಂದು ಸೇವೆಗಳು ನೆರವೇರುವುದಿಲ್ಲ. ಭಕ್ತಾದಿಗಳು ಸಹಕರಿಸಬೇಕು ಎಂದು ದೇವಳದ ಪ್ರಕಟಣೆ ತಿಳಿಸಿದೆ.  

Ad Widget

Ad Widget

Ad Widget

Ad Widget

ಪ್ರಾರ್ಥನೆ, ಆಶ್ಲೇಷ ಬಲಿ ಸೇವೆಯಲ್ಲಿ ವ್ಯತ್ಯಯ:

Ad Widget

Ad Widget

Ad Widget

ಲಕ್ಷದೀಪೋತ್ಸವ (ಡಿ.12), ಚೌತಿ (ಡಿ.16), ಪಂಚಮಿ (ಡಿ.17) ದಿನದಂದು ರಾತ್ರಿ ಹೊತ್ತಿನಲ್ಲಿ ಪ್ರಾರ್ಥನೆ ಸೇವೆ ಇರುವುದಿಲ್ಲ. ಚಂಪಾಷಷ್ಠಿ (ಡಿ.18) ದಿನದಂದು ಮಧ್ಯಾಹ್ನ ಪ್ರಾರ್ಥನೆ ಸೇವೆ ನಡೆಯುವುದಿಲ್ಲ. ಚಂಪಾಷಷ್ಠಿ ದಿನ ಆಶ್ಲೇಷ ಬಲಿ ಮತ್ತು ನಾಗಪ್ರತಿಷ್ಠೆ ಸೇವೆಗಳು ನೆರವೇರುವುದಿಲ್ಲ.

Ad Widget

 ಲಕ್ಷದೀಪೋತ್ಸವ (ಡಿ.12), ಚೌತಿ  (ಡಿ.16), ಪಂಚಮಿ (ಡಿ.18) ಮತ್ತು ಕೊಪ್ಪರಿಗೆ ಇಳಿಯುವ ದಿನ (ಡಿ.24) ದಂದು ಮಹಾಭಿಷೇಕ ಸೇವೆ ನಡಯುವುದಿಲ್ಲ. ಡಿ.10ರಿಂದ ಡಿ.24ರ ತನಕ ಸಾಯಂಕಾಲದ ಆಶ್ಲೇಷ ಬಲಿ ಸೇವೆ ನೆರವೇರುವುದಿಲ್ಲ.

Ad Widget

Ad Widget

Kukke Shri Subrahmanya Temple ದಕ್ಷಿಣ  ಭಾರತದ ಪ್ರಸಿದ್ದ ನಾಗಕ್ಷೇತ್ರದಲ್ಲಿ ನಾಳೆ (ಡಿ 9) ಮೂಲ ಮೃತಿಕಾ  ಪ್ರಸಾದ ವಿತರಣೆ – ಇಲ್ಲಿದೆ  ವರ್ಷಕ್ಕೊಮ್ಮೆ ಮಾತ್ರ ಹುತ್ತದಿಂದ ತೆಗೆಯುವ ಈ  ಪ್ರಸಾದದ ಮಹತ್ವ  

ಚಂಪಾಷಷ್ಠಿ ಜಾತ್ರೋತ್ಸವವು ಡಿ.10 ರಿಂದ 24ರ ತನಕ ನಡೆಯಲಿದ್ದು, ಜಾತ್ರೋತ್ಸವದ ಪ್ರಧಾನ ದಿನಗಳಾದ ಲಕ್ಷದೀಪ, ಚೌತಿ, ಪಂಚಮಿ ಮತ್ತು ಷಷ್ಠಿಯಂದು ಮಾತ್ರ ಕೆಲವೊಂದು ಸೇವೆಗಳನ್ನು ನೆರವೇರಿಸಲು ಅವಕಾಶಗಳು ಇರುವುದಿಲ್ಲ. ಆದರೆ ಇತರ ದಿನಗಳಲ್ಲಿ ಆಶ್ಲೇಷ ಬಲಿ, ಪಂಚಾಮೃತ ಮಹಾಭಿಷೇಕ, ಶೇಷಸೇವೆ, ಕಾರ್ತಿಕಪೂಜೆ, ಮಹಾಪೂಜೆ, ತುಲಾಭಾರ, ನಾಗಪ್ರತಿಷ್ಠೆ ಮೊದಲಾದುವುಗಳು ಎಂದಿನಂತೆ ನೆರವೇರಲಿದೆ. ಸರ್ಪಸಂಸ್ಕಾರ ಮತ್ತು ಸಂಜೆಯ ಆಶ್ಲೇಷ ಬಲಿ ಸೇವೆಗಳು ಮಾತ್ರ ಡಿ.24ರ ತನಕ ನೆರವೇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ.9 ದರುಶನದಲ್ಲಿ ವ್ಯತ್ಯಯ: ಡಿ.9ರಂದು ಮೂಲಮೃತ್ತಿಕಾ ಪ್ರಸಾದ ತೆಗೆಯು ಪವಿತ್ರ ಕಾರ್ಯದ ಕಾರಣ ಭಕ್ತಾದಿಗಳಿಗೆ ಬೆಳಗ್ಗಿನಿಂದ ಮಧ್ಯಾಹ್ನ 2 ಗಂಟೆಯ ತನಕ ದೇವರ ದರುಶನ ಹಾಗೂ ಸೇವಾದಿಗಳನ್ನು ನೆರವೇರಿಸಲು ಅವಕಾಶ ಇರುವುದಿಲ್ಲ, 2 ಗಂಟೆಯ ನಂತರ ದೇವರ ದರ್ಶನಕ್ಕೆ ಹಾಗೂ ಆಯ್ದ ಸೇವೆಗಳನ್ನು ನೆರವೇರಿಸಲು ಅವಕಾಶವಿದೆ

Continue Reading

ಸುಳ್ಯ

Kukke Shri Subrahmanya Temple ದಕ್ಷಿಣ  ಭಾರತದ ಪ್ರಸಿದ್ದ ನಾಗಕ್ಷೇತ್ರದಲ್ಲಿ ನಾಳೆ (ಡಿ 9) ಮೂಲ ಮೃತಿಕಾ  ಪ್ರಸಾದ ವಿತರಣೆ – ಇಲ್ಲಿದೆ  ವರ್ಷಕ್ಕೊಮ್ಮೆ ಮಾತ್ರ ಹುತ್ತದಿಂದ ತೆಗೆಯುವ ಈ  ಪ್ರಸಾದದ ಮಹತ್ವ  

Ad Widget

Ad Widget

Kukke Shri Subrahmanya Temple ಡಿಸೆಂಬರ್ 06;  ದಕ್ಷಿಣ ಭಾರತದ ಪ್ರಸಿದ್ದ ನಾಗಕ್ಷೇತ್ರ ಕುಕ್ಕೆ   ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈ ವಾರಾಂತ್ಯದಲ್ಲಿ  ದರ್ಶನ ಮತ್ತು ವಿವಿಧ ಸೇವೆಗಳು ಅರ್ಧ ದಿನದ ಕಾಲ ಲಭ್ಯವಿರುವುದಿಲ್ಲ ಎಂದು ದೇವಾಲಯದ ಆಡಳಿತ ಮಂಡಳಿ ಹೇಳಿದೆ.  

Ad Widget

Ad Widget

Ad Widget

Ad Widget

ದೇವಳದಲ್ಲಿ 2023-24ನೇ ಸಾಲಿನ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಪೂರಕವಾಗಿ ಡಿ.9ರಂದು ಮೂಲಮೃತ್ತಿಕಾ ಪ್ರಸಾದ ತೆಗೆಯುವ ಪವಿತ್ರ ಕಾರ್ಯ ಇರಲಿದೆ. ಈ ಹಿನ್ನಲೆಯಲ್ಲಿ ಆ ದಿನ ಭಕ್ತಾದಿಗಳಿಗೆ ಬೆಳಗ್ಗಿನಿಂದ ಮಧ್ಯಾಹ್ನ 2 ಗಂಟೆಯ ತನಕ ದೇವರ ದರುಶನ ಹಾಗೂ ಸೇವಾದಿಗಳನ್ನು ನೆರವೇರಿಸಲು ಅವಕಾಶ ಇರುವುದಿಲ್ಲ. 2 ಗಂಟೆಯ ನಂತರ ದೇವರ ದರ್ಶನಕ್ಕೆ ಹಾಗೂ ಆಯ್ದ ಸೇವೆಗಳನ್ನು ನೆರವೇರಿಸಲು ಅವಕಾಶವಿದೆ

Ad Widget

Ad Widget

Ad Widget

ಕುಕ್ಕೆ ಸುಬ್ರಮಣ್ಯದಲ್ಲಿ “ಮೂಲಮೃತಿಕಾ” ಪ್ರಸಾದಕ್ಕೆ ಹೆಚ್ಚಿನ ಮಹತ್ವವಿದೆ. ಮೂಲಸ್ಥಾನವಾದ ಕುಕ್ಕೆ ಸುಬ್ರಮಣ್ಯ ದೇವಳದ ಗರ್ಭಗುಡಿಯಿಂದ ತೆಗೆಯುವ ಕ್ಷೇತ್ರದ ಅತ್ಯಂತ ಪವಿತ್ರ ಪ್ರಸಾದ. ಯಾವುದೇ ದೇವಾಲಯದಲ್ಲಿ ಸಹ ಈ ಮಾದರಿ ಪ್ರಸಾದ ಸಿಗುವುದಿಲ್ಲ. ವರ್ಷಕ್ಕೆ ಒಂದು ಬಾರಿ ಮಾತ್ರ ಈ ಪ್ರಸಾದ ತೆಗೆಯಲಾಗುತ್ತದೆ.

Ad Widget

ಕ್ಷೇತ್ರದ ಮೂಲಸ್ಥಾನವಾದ ಗರ್ಭಗುಡಿಯಿಂದ ಈ ಮೂಲಮೃತಿಕಾ ಪ್ರಸಾದವನ್ನು ತೆಗೆದು ಭಕ್ತರಿಗೆ ನೀಡಲಾಗುತ್ತದೆ. ಈ ಪ್ರಸಾದವು ರೋಗ ನಿರೋಧಕ ಶಕ್ತಿ ಹೊಂದಿದೆ ಎಂಬುದು ಭಕ್ತರ ನಂಬಿಕೆಯಾಗಿದೆ.  ಈ ಮೃತ್ತಿಕೆ ಪ್ರಸಾದ ಸಂತಾನಕಾರಕ, ಚರ್ಮ ರೋಗಗಳ ಪರಿಹಾರಕ್ಕೆ ದಿವ್ಯ ಔಷಧ ಎಂಬುದು ಭಕ್ತರ ನಂಬಿಕೆ. ಮೃತ್ತಿಕಾ ಪ್ರಸಾದವನ್ನು ಶುಭ ಕಾರ್ಯಗಳ ಒಳಿತಿಗೂ, ವ್ಯಾಧಿಗಳ ನಿವಾರಣೆಗೂ ಭಕ್ತರು ಬಳಸುತ್ತಾರೆ.

Ad Widget

Ad Widget

ಸಾವಿರಾರು ಭಕ್ತರು ಮೂಲಮೃತಿಕಾ ಪ್ರಸಾದವನ್ನು ತೆಗೆದುಕೊಂಡು ಹೋಗಲು ಕುಕ್ಕೆ ಸುಬ್ರಮಣ್ಯ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಶುಭ ಕಾರ್ಯಗಳ ಸಂದರ್ಭದಲ್ಲಿ, ರೋಗಗಳ ನಿವಾರಣೆಗೆ ಸಹ ಈ ಪ್ರಸಾದವನ್ನು ಬಳಕೆ ಮಾಡುತ್ತಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ದ ಧಾರ್ಮಿಕ ಕ್ಷೇತ್ರ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವು ಕರ್ನಾಟಕ ರಾಜ್ಯದ ಸುಬ್ರಹ್ಮಣ್ಯಂ ಗ್ರಾಮದಲ್ಲಿ ಬರುತ್ತದೆ. ಪ್ರಕೃತಿಯ ಸೌಂದರ್ಯದಲ್ಲಿ ನೆಲೆಸಿರುವ ಈ ಭವ್ಯವಾದ  ದೇವಾಲಯವು ಗ್ರಾಮದ ಹೃದಯಭಾಗದಲ್ಲಿದೆ. ಪ್ರಕೃತಿ ನದಿಗಳು, ಕಾಡುಗಳು ಮತ್ತು ಪರ್ವತಗಳಿಂದ ಸುತ್ತುವರೆದಿರುವ ಈ ದೇವಾಲಯವು ತನ್ನ ಅನನ್ಯ ಸೌಂದರ್ಯವನ್ನು ಬಹಿರಂಗಪಡಿಸುತ್ತದೆ .ಪ್ರತಿನಿತ್ಯ ನೂರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ವಾರಾಂತ್ಯ, ಸರ್ಕಾರಿ ರಜೆ ದಿನಗಳಲ್ಲಿ ದೇವಾಲಯಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ.

Continue Reading

ಮಂಗಳೂರು

Interfaith Marriage ಮಂಗಳೂರು :  ಭಿನ್ನಕೋಮಿನ ಜೋಡಿ ವಿವಾಹ?

Ad Widget

Ad Widget

ಸುರತ್ಕಲ್, ಡಿ. 7: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಭಿನ್ನ ಕೋಮಿನ ಜೋಡಿಯೊಂದು ನಾಪತ್ತೆಯಾಗಿದ್ದು, ಅವರಿಬ್ಬರು ವಿವಾಹವಾಗಿದ್ದಾರೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಈ ಎರಡು ಕುಟುಮಬದ ಮೂಲಗಳಿಂದ ಈ ಬಗ್ಗೆ ಯಾವುದೇ ಖಚಿತತೆ ದೊರಕಿಲ್ಲ

Ad Widget

Ad Widget

Ad Widget

Ad Widget

ಸುರತ್ಕಲ್‌   7ನೇ ಬ್ಲಾಕ್ ಕಾಟಿಪಳ್ಳದ ಯುವಕ ಪ್ರಶಾಂತ್ ಭಂಡಾರಿ (31) ಹಾಗೂ 3ನೇ ಬ್ಲಾಕ್ ಆಶ್ರಯ ಕಾಲನಿಯನಿವಾಸಿ ಆಯೇಷಾ (19) ಡಿ. 1ರಂದು ನಾಪತ್ತೆಯಾಗಿದ್ದರು ಎನ್ನಲಾಗಿದೆ. , ಇದೀಗ ಅವರು ವಿವಾಹವಾಗಿದ್ದಾರೆ ಎನ್ನುವ ಫೋಟೋವನ್ನು  ಅವರಿಬ್ಬರ ಆಪ್ತರು  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ.

Ad Widget

Ad Widget

Ad Widget

 ಆಯೇಷಾ ತನ್ನ ಹೆಸರನ್ನು ಅಕ್ಷತಾ ಎಂದು ಬದಲಾಯಿಸಿಕೊಂಡಿದ್ದಾರೆ ಎಂದು ಕೂಡ ವೈರಲ್‌ ಮೆಸೇಜ್‌ ನಲ್ಲಿ ಹೇಳಲಾಗಿದೆ. ಯುವತಿ ನಾಪತ್ತೆಯಾದ ಬಗ್ಗೆ   ಆಯೇಷಾ ತಂದೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

Ad Widget

ಯುವತಿ ಕುಟುಂಬ ಮೂಲತಃ ಕಾರವಾರದ ಮುಂಡಗೋಡದವರಾಗಿದ್ದು, ಈಕೆಯ ತಂದೆ ಸ್ಥಳೀಯವಾಗಿ ಉದ್ಯೋಗದಲ್ಲಿದ್ದಾರೆ. ಅವರ ಪತ್ತೆಗಾಗಿ ಪೊಲೀಸರು ಕಾರ್ಯೋನ್ಮುಖರಾಗಿದ್ದಾರೆ.

Ad Widget

Ad Widget

Continue Reading

Trending

error: Content is protected !!