ಸುಳ್ಯ ಕುರುಂಜಿಭಾಗ್ ಸಮೀಪ ಇರುವ ಬಿ ಸಿ ಎಂ ಹಾಸ್ಟೆಲ್ ನಲ್ಲಿ ಬಾಲಕಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಡಿ 27 ರಂದು ಮಧ್ಯಾಹ್ನ ನಡೆದಿದೆ.
ಸುಳ್ಯದ ಶಾರದಾ ಹೆಣ್ಮಕ್ಕಳ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿಯ ವಿದ್ಯಾರ್ಥಿನಿ ಸೋನಿಯಾ (18) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಈಕೆ ಬೆಂಗಳೂರು ರಾಮನಾಥ ಪುರದ, ಕಾರಮಂಗಲ ಮಾರ್ಲಮಂಗಲ ಗ್ರಾಮದ ಪುರುಷೋತ್ತಮ – ರೀನಾ ದಂಪತಿಗಳ ಪುತ್ರಿ.ಆಕೆ ಸುಳ್ಯದ ಬಿ ಸಿ ಎಂ ಹಾಸ್ಟೆಲ್ ನಲ್ಲಿದ್ದುಕೊಂಡು ಓದುತ್ತಿದ್ದಳು.
ಸೋಮವಾರದಂದು ಸೋನಿಯಾ ಕಾಲೇಜಿಗೆ ಹೋಗದೇ ಹಾಸ್ಟೇಲ್ ನಲ್ಲಿ ಉಳಿದುಕೊಂಡಿದ್ದಳು. ಮದ್ಯಾಹ್ನ ಆಕೆಯ ರೂಂ ನಲ್ಲಿದ್ದ ಇನ್ನೊಬ್ಬಳು ವಿದ್ಯಾರ್ಥಿನಿ ಊಟದ ತಟ್ಟೆ ತರಲೆಂದು ರೂಂ ಗೆ ಹೋದಾಗ ಬಾಗಿಲು ಹಾಕಿತ್ತು. ಬಾಗಿಲು ತಟ್ಟಿದ್ದರೂ ಬಾಗಿಲು ತೆರೆದಿರಲಿಲ್ಲ, ಆಕೆ ಮಲಗಿರಬಹುದು ಎಂದು ಭಾವಿಸಿದ ರೂಮ್ ಮೇಟ್ ಪಕ್ಕದ ಕೊಠಡಿಯ ಗೆಳತಿಯ ತಟ್ಟೆಯಲ್ಲಿ ಊಟ ಮುಗಿಸಿದ್ದಾಳೆ.
ರೂಮ್ ಮೇಟ್ ಮತ್ತೆ ರೂಮಿಗೆ ಬಂದಾಗಲೂ ಬಾಗಿಲು ತೆರೆಯದೇ ಇದ್ದ ಕಾರಣ ಸಂಶಯಗೊಂಡ ವಿದ್ಯಾರ್ಥಿನಿ ವಾರ್ಡನ್ ಗೆ ಮಾಹಿತಿ ನೀಡಿದ್ದಾಳೆ. ಇಲಾಖೆಯ ಸಿಬ್ಬಂದಿಗಳು ಬಂದು ಬಾಗಿಲು ಒಡೆದು ನೋಡಿದಾಗ ವಿದ್ಯಾರ್ಥಿನಿ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಪೋಲಿಸ್ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ, ಎಸ್ ಐ ದಿಲೀಪ್ ಕುಮಾರ್ ಸ್ಥಳಕ್ಕೆ ಆಗಮಿಸಿ ಪರಿಶಿಲನೆ ನಡೆಸಿದ್ದಾರೆ. ಈಕೆ ತಂದೆ, ತಾಯಿ ರೀನಾರನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.