ತ್ರಿಶೂರ್: ಆಕಸ್ಮಿಕವಾಗಿ ತಮ್ಮ ಬ್ಯಾಂಕ್ ಖಾತೆಗೆ ಜಮೆಯಾದ 2.44 ಕೋಟಿ ರೂ.ವನ್ನು ಬೇಕಾಬಿಟ್ಟಿಯಾಗಿ ಖರ್ಚು ಮಾಡಿದ ಯುವಕರು ಜೈಲು ಸೇರಿದ್ದಾರೆ.
ಡಿಸೆಂಬರ್ 18 ಮತ್ತು 19ರಂದು ಪುದುತಲಮುರ ಬ್ಯಾಂಕ್ ಸಿಬ್ಬಂದಿಗಳಿಂದ ತಪ್ಪು ನಡೆದಿದೆ.ಬೇರೆ ಬ್ಯಾಂಕ್‌ನೊಂದಿಗೆ ವಿಲೀನಕ್ಕೆ ಸಿದ್ಧತೆ ನಡೆಯುತ್ತಿರುವಂತೆ ಯುವಕರ ಖಾತೆಗೆ ಹಣ ಜಮೆಯಾಗಿದ.ತಮ್ಮ ಖಾತೆಗೆ ತಪ್ಪಾಗಿ ಬಂದ ಹಣದಲ್ಲಿ ಯುವಕರು ಐಫೋನ್ ಖರೀದಿಸಿ, ಬ್ಯಾಂಕ್ ಸಾಲ ತೀರಿಸಿ, ಆನ್‌ಲೈನ್ ವ್ಯಾಪಾರ ಮಾಡುವ ಮೂಲಕ ಒಂದೇ ರಾತ್ರಿಯಲ್ಲಿ ಕೆಲವೇ ಗಂಟೆಗಳಲ್ಲಿ ಎಲ್ಲಾ ಹಣ ಖರ್ಚು ಮಾಡಿದ್ದಾರೆ.ಬ್ಯಾಂಕ್ ನವರ ತಪ್ಪಿನಿಂದ ಖಾತೆಗೆ ಹಣ ಜಮೆಯಾಗಿರುವುದನ್ನು ಅರಿತ ಯುವಕರು ಬೇಕೆಂದೇ ಎಲ್ಲಾ ಹಣವನ್ನು ಖರ್ಚು ಮಾಡಿದ್ದಾರೆ.
ಬ್ಯಾಂಕ್ ನವರಿಗೆ ತಮ್ಮ ತಪ್ಪು ಅರಿವಾದಾಗ ಯುವಕರ ಖಾತೆಯಲ್ಲಿ ಒಂದು ರೂಪಾಯಿಯೂ ಉಳಿದಿರಲಿಲ್ಲ. ಇದರಿಂದ ಬ್ಯಾಂಕ್ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.ದೂರಿನ ಆಧಾರದ ಮೇಲೆ ತ್ರಿಶೂರ್ ಅರಿಂಬೂರ್ ನಿವಾಸಿ ನಿತಿನ್ ಮತ್ತು ಮನು ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಇವರಲ್ಲಿ ಒಬ್ಬರ ಖಾತೆಗೆ 2.44 ಕೋಟಿ ರೂ.ಜಮೆಯಾಗಿದೆ.ಈ ರೀತಿ ಬ್ಯಾಂಕ್ ಸಿಬ್ಬಂದಿಗಳ ತಪ್ಪಿನಿಂದ ಖಾತೆ ಬದಲಿ ಹಲವರ ಖಾತೆಗೆ ಹಣ ಜಮೆಯಾಗುತ್ತಿದ್ದರೂ ಅನೇಕರು ಬ್ಯಾಂಕ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.ಆದರೆ ಯುವಕರು ಬ್ಯಾಂಕಿಗೆ ತಿಳಿಸುವ ಬದಲು ಮಾಡಿದ ಮೊದಲ ಕೆಲಸವೆಂದರೆ ತಮ್ಮ ಹೆಸರಿನಲ್ಲಿರುವ ವೈಯಕ್ತಿಕ ಸಾಲವನ್ನು ತೀರಿಸಿದ್ದಾರೆ.4 ಲಕ್ಷ ರೂ.ಬೆಲೆಯ ಆ ಕ್ಯಾ ಪಲ್ ಐಫೋನ್‌ನ ಇತ್ತೀಚಿನ ಮಾದರಿಯ ನಾಲ್ಕು ಫೋನ್‌ಗಳನ್ನು ಖರೀದಿಸಿದ್ದಾರೆ.ಇದರಲ್ಲಿ ಎರಡನ್ನು ಸ್ನೇಹಿತರಿಗೆ ಉಡುಗೊರೆಯಾಗಿ ನೀಡಿದ್ದಾರೆ.ಬಳಿಕ ವಿವಿಧ ಖಾತೆಗಳಿಂದ ಆನ್ ಲೈನ್ ವಹಿವಾಟಿನಲ್ಲಿ ತೊಡಗಿಸಿ ಲಕ್ಷಗಟ್ಟಲೆ ಹಣ ಹೂಡಿಕೆ ಮಾಡಿದ್ದಾರೆ.
ಆನ್‌ಲೈನ್‌ನಲ್ಲಿ ಬ್ಯಾಂಕ್ ಖಾತೆ ತೆರೆಯುವ ಮೂಲಕ 19 ಬ್ಯಾಂಕ್‌ಗಳ 54 ಖಾತೆಗಳಿಗೆ ಮೊತ್ತವನ್ನು ವರ್ಗಾಯಿಸಲಾಗಿದೆ.ಆನ್‌ಲೈನ್‌ನಲ್ಲಿ 171 ವಹಿವಾಟುಗಳನ್ನು ಮಾಡಲಾಗಿದೆ.ಬ್ಯಾಂಕಿನವರು ಪರಿಶೀಲನೆ ನಡೆಸಿ ತಪ್ಪು ಪತ್ತೆ ಹಚ್ಚಿ ಹಣ ವಾಪಸ್ ಪಡೆಯುವ ಮುನ್ನ ಆದಷ್ಟು ಬೇಗ ಎಲ್ಲ ಹಣವನ್ನೂ ಖರ್ಚು ಮಾಡಲು ಯುವಕರ ಪೈಪೋಟಿ ನಡೆಸಿದ್ದಾರೆ. ಬ್ಯಾಂಕ್ ಮ್ಯಾನೇಜರ್ ದೂರಿನಂತೆ ಯುವಕರನ್ನು ಬಂಧಿಸಲಾಗಿದೆ.ತ್ರಿಶೂರ್ ಸಿಟಿ ಸೈಬರ್ ಕ್ರೈಂ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಎ.ಎ.ಅಶ್ರಫ್ ನೇತೃತ್ವದ ತಂಡ ಪ್ರಕರಣದ ತನಿಖೆ ನಡೆಸುತ್ತಿದೆ.