ಮಂಗಳೂರು: ಮಾಜಿ ಬಿಜೆಪಿ ನಾಯಕ, ಸಮಾಜ ಸೇವಕ , ಧಾರ್ಮಿಕ ಸಾಮಾಜಿಕ ಮುಂದಾಳು ರೈ ಎಸ್ಟೇಟ್ ಮಾಲಕ ಅಶೋಕ್ ರೈ ಕೋಡಿಂಬಾಡಿಯವರಿಗೆ ಕಾಂಗ್ರೇಸ್ ಹೈಕಮಾಂಡ್ ನಿಂದ ಬುಲಾವ್ ಬಂದಿದೆ. ಡಿ.26 ರಂದು ದ.ಕ ಜಿಲ್ಲಾ ಕಾಂಗ್ರೇಸ್ ಕಚೇರಿಯಲ್ಲಿ ಹೈಕಮಾಂಡ್ ನ ಮಟ್ಟದ ವೀಕ್ಷಕರ ಮಾತುಕತೆಗೆ ಅಶೋಕ್ ಕುಮಾರ್ ರೈಯವರಿಗೆ ಆಹ್ವಾನ ಬಂದಿದೆ.
‘ನಿಖರ ನ್ಯೂಸ್ ‘ ಗೆ ಉನ್ನತ ಮೂಲಗಳಿಂದ ಮಾಹಿತಿ ದೊರೆತಿದ್ದು , ಮಂಗಳೂರಿನ ಜಿಲ್ಲಾ ಕಾಂಗ್ರೇಸ್ ಕಚೇರಿಗೆ ಅಶೋಕ್ ಕುಮಾರ್ ರೈ ಉನ್ನತ ಮಟ್ಟದ ವೀಕ್ಷಕರ ಆಂತರಿಕ ಸಭೆ ಅಹ್ವಾನಿಸಿದ್ದಾರೆ. ಇದಕ್ಕೆ ಸಕಾರತ್ಮಕವಾಗಿ ಪ್ರತಿಕ್ರಿಯಿಸಿರುವ ಅಶೋಕ್ ರೈಯವರು ಸೋಮವಾರ ಮಧ್ಯಾಹ್ನ ಕಾಂಗ್ರೇಸ್ ಕಚೇರಿಗೆ ತೆರಳಿ ಸಭೆಯಲ್ಲಿ ಭಾಗವಹಿಸಿದ್ದಾರೆಂದು ಮೂಲಗಳು ತಿಳಿಸಿವೆ .
ಡಿ.26 ರ ಮಧ್ಯಾಹ್ನ ವೀಕ್ಷಕರಾಗಿ ಆಗಮಿಸಿದ ರಾಜ್ಯ ಕಾಂಗ್ರೇಸ್ ನಾಯಕ ಮಧು ಬಂಗಾರಪ್ಪ ಹಲವು ಪ್ರಮುಖ ನಾಯಕರ ಸಮ್ಮುಖದಲ್ಲಿ ಅಶೋಕ್ ಕುಮಾರ್ ರೈ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭ ಅವಕಾಶ ಕೊಟ್ಟರೆ ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಅಶೋಕ್ ಕುಮಾರ್ ರೈಯವರು ವೀಕ್ಷಕರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಅಶೋಕ್ ಕುಮಾರ್ ರೈ ಯವರು ಕಳೆದೊಂದು ದಶಕದಿಂದ ಪುತ್ತೂರಿನಲ್ಲಿ ತನ್ನ ರೈ ಎಸ್ಟೇಟ್ ಚಾರಿಟೇಬಲ್ ಟ್ರಸ್ಟ್ ಮೂಲಕ ಹಲವು ಜನಪರ ಕೆಲಸಗಳನ್ನು ಹಾಗೂ ಜನರಿಗೆ ಸಹಾಯಹಸ್ತ ಚಾಚುವ ಕಾರ್ಯ ಮಾಡುತ್ತಿದ್ದಾರೆ. ಇತ್ತಿಚೆಗೆ ಪುತ್ತೂರಿನಲ್ಲಿ ಆವರು ಟ್ರಸ್ಟ್ ನ ಫಲಾನುಭವಿಗಳ ಬೃಹತ್ ಸಭೆ ಆಯೋಜಿಸಿದ್ದು ಇದರಲ್ಲಿ ಮೂವತ್ತು ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು ಎಂದು ಅಂದಾಜಿಸಲಾಗಿದೆ.
ಈ ಬೃಹತ್ ಸಮಾವೇಶದ ಬಳಿಕ ಅಶೋಕ್ ಕುಮಾರ್ ರೈವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು . ಅಶೋಕ್ ಕುಮಾರ್ ರೈ ವಯರು ಕಾಂಗ್ರಸ್ ಸೇರಿದ್ದಾರೆ ಪುತ್ತೂರಿನಲ್ಲಿ ಪಕ್ಷ ಬಲಿಷ್ಟವಾಗಲಿದೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಪುತ್ತೂರಿನಿಂದ 13 ಮಂದಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಮುಂದಿನ ವಿಧಾನ ಸಭೆ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿದವರನ್ನು ಹೊರತು ಪಡಿಸಿಯೂ ಕಾಂಗ್ರಸ್ ಗೆಲ್ಲುವ ಕುದುರೆಗೆ ಟಿಕೆಟ್ ನೀಡುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ . ಹೀಗಾಗಿ ಪುತ್ತೂರಿನಲ್ಲಿ ಅಶೋಕ್ ಕುಮಾರ್ ರೈ ಯವರಿಗೆ ಟಿಕೆಟ್ ಸಿಗುವ ಸಾದ್ಯತೆಯನ್ನು ನಿರಾಕರಿಸುವಂತಿಲ್ಲ.
ಅಶೋಕ್ ಕುಮಾರ್ ರೈ ಯವರು ಎರಡು ವರ್ಷಗಳ ಹಿಂದಿನವರೆಗೂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರು . ಮಾಜಿ ಮುಖ್ಯಮಂತ್ರಿ, ಹಿರಿಯ ಬಿಜೆಪಿ ಮುಖಂಡ ಸದಾನಂದ ಗೌಡರವರ ನಿಕಟವರ್ತಿಗಳಲ್ಲಿ ಅವರು ಒಬ್ಬರು. ಈ ಸಭೆಯ ಬಳಿಕ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಸಾದ್ಯತೆಗಳು ಅಧಿಕಗೊಂಡಿವೆ.