Ad Widget

ಉಬ್ಬು ಹಲ್ಲು – ಕೇರಳದ ಯುವಕನಿಗೆ ಸರಕಾರಿ ಉದ್ಯೋಗ ನಿರಾಕರಣೆ : ಉದ್ಯೋಗ ಸೌಂದರ್ಯ ಸ್ಪರ್ಧೆಯಲ್ಲ : ಶಾಸಕರ ಆಕ್ರೋಶ

WhatsApp Image 2022-12-26 at 19.34.28
Ad Widget

Ad Widget

Ad Widget

ಪಾಲಕ್ಕಾಡ್:   ಹಲ್ಲು ಹೊರ ಚಾಚಿರುವುದಾಗಿ (ಉಬ್ಬು ಹಲ್ಲು) ಸರಕಾರಿ ವೈದ್ಯರು ವೈದ್ಯಕೀಯ ಪ್ರಮಾಣ ಪತ್ರ ನೀಡಿದ ಕಾರಣ  ಕೇರಳದ ಬುಡಕಟ್ಟು ಯುವಕನಿಗೆ ಪಿಎಸ್‌ಸಿ ಕೆಲಸ ನಿರಾಕರಿಸಿರುವ ಆರೋಪವೊಂದು ಕೇಳಿ ಬಂದಿದೆ. ಅರಣ್ಯ ಇಲಾಖೆಯಲ್ಲಿ ಬೀಟ್ ಫಾರೆಸ್ಟ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದ  ಅಟ್ಟಪ್ಪಾಡಿ ಪುತ್ತೂರು ಪಂಚಾಯಿತಿ ನಿವಾಸಿ ಯುವಕ  ಮುತ್ತು ಉದ್ಯೋಗದಿಂದ ವಂಚಿರಾದವರು.   ಬಡ ಕುಟುಂಬಕ್ಕೆ ಸೇರಿದ ಮುತ್ತುವಿನ ಸರಕಾರಿ ನೌಕರಿಯ ಬಹು ದಿನಗಳ ಕನಸು ನನಸಾಗದೆ ಉಳಿದಿದೆ.

Ad Widget

Ad Widget

Ad Widget

Ad Widget

Ad Widget

ಮುತ್ತು, ಪಿಎಸ್‌ಸಿಯ ವಿಶೇಷ ನೇಮಕಾತಿ ಅಡಿಯಲ್ಲಿ ಅರಣ್ಯ ಇಲಾಖೆಯ ಬೀಟ್ ಫಾರೆಸ್ಟ್ ಹುದ್ದೆಗೆ ಅರ್ಜಿ ಸಲ್ಲಿಸಿದರು.ನ.3ರಂದು ನಡೆದ ಲಿಖಿತ ಪರೀಕ್ಷೆ ಮತ್ತು ನಂತರ ನಡೆದ ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರುಆದರೆ ಸಂದರ್ಶನಕ್ಕೆ ಅಧಿಸೂಚನೆ ಬಂದಿರಲಿಲ್ಲ.ಪಾಲಕ್ಕಾಡ್‌ ಜಿಲ್ಲಾ ಪಿಎಸ್‌ಸಿ ಕಚೇರಿಯಲ್ಲಿ ವಿಚಾರಿಸಿದಾಗ, ವೈದ್ಯಕೀಯ ಪ್ರಮಾಣಪತ್ರದಲ್ಲಿ ಹಲ್ಲು ಹೊರ ಚಾಚಿರುವುದಾಗಿ ನಮೂದಿಸಿದ್ದರಿಂದ ಕೆಲಸ ಲಭಿಸದಿರುವುದು ತಿಳಿದುಬಂದಿದೆ.

Ad Widget

Ad Widget

Ad Widget

Ad Widget

Ad Widget

ಚಿಕ್ಕ ಪ್ರಾಯದಲ್ಲಿ ಬಿದ್ದು ಮುತ್ತುವಿನ ಹಲ್ಲಿಗೆ ಹಾನಿಯಾಗಿದೆ.ಹಲ್ಲಿನ ಸಮಸ್ಯೆ ನಿವಾರಣೆಗೆ ಸುಮಾರು 18,000 ರೂ.ಬೇಕಾಗಿದ್ದು ಹಣವಿಲ್ಲದ ಕಾರಣ ಸಮಸ್ಯೆ ಪರಿಹರಿಸಲಾಗಿಲ್ಲ ಎಂದು ಮುತ್ತುವಿನ ಪೋಷಕರು ತಿಳಿಸಿದ್ದಾರೆ.ಮುತ್ತುವಿನ ದೂರನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಅರಣ್ಯ ಸಚಿವ ಎ.ಕೆ.ಶಶೀಂದ್ರನ್ ತಿಳಿಸಿದ್ದಾರೆ.ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಸಚಿವ ಕೆ.ರಾಧಾಕೃಷ್ಣನ್ ಮಾಹಿತಿ ನೀಡಿದ್ದಾರೆ.

ಹಲ್ಲು ಹಿರ ಚಾಚಿಕೊಂಡಿದೆ ಎಂಬ ಕಾರಣಕ್ಕೆ ಕೆಲಸ ನಿರಾಕರಿಸುವುದು ಸರಿಯಲ್ಲ‌ ಎಂದು ಮನ್ನಾರ್ಕ್ಕಾಡ್ ಶಾಸಕ ಶಂಶುದ್ದೀನ್ ಹೇಳಿದ್ದಾರೆ.  ನಡೆದಿರುವುದು ಸೌಂದರ್ಯ ಸ್ಪರ್ಧೆಯಲ್ಲ.ಈ ಕುರಿತು ಪಿಎಸ್‌ಸಿ ಹಾಗೂ ಸರಕಾರದೊಂದಿಗೆ ಚರ್ಚಿಸಲಾಗುವುದು.ಮುತ್ತುವಿಗೆ ಕೆಲಸ ನೀಡಬೇಕು ಎಂದು ಶಾಸಕರು ಒತ್ತಾಯಿಸಿದ್ದಾರೆ.ಇದೇ ವೇಳೆ ಮುತ್ತುವಿನ ಹೊರ ಚಾಚಿದ ಹಲ್ಲನ್ನು ಸರಿಪಡಿಸಲು ಉಚಿತ ಚಿಕಿತ್ಸೆ ನೀಡಲು ದಂತ ವೈದ್ಯರೊಬ್ಬರು ಮುಂದೆ ಬಂದಿದ್ದಾರೆ.

Ad Widget

Ad Widget

Ad Widget

Ad Widget
Ad Widget

Leave a Reply

Recent Posts

5 guarantee | ಖಚಿತವಾದ ಪಂಚ ಯೋಜನೆಗಳು: ಬಡವರ-ಮಧ್ಯಮ ವರ್ಗದವರ ಕಲ್ಯಾಣಕ್ಕೆ ಕ್ರಾಂತಿಕಾರಕ ಮುನ್ನುಡಿ ಬರೆದ ಕಾಂಗ್ರೆಸ್ ಸರ್ಕಾರ – ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯರಿಂದ ಘೋಷಣೆ : 5 ಯೋಜನೆಗಳ ಪೂರ್ತಿ ವಿವರ ಇಲ್ಲಿದೆ : ನಳಿನ್, ಸಿ.ಟಿ.ರವಿ, ಬಜರಂಗದಳದ ಪದವಿದರರಿಗೂ ನಮ್ಮ ಯೋಜನೆ ಫ್ರೀ ಎಂದು ಕಾಲೆಳೆದ ಕಾಂಗ್ರೇಸ್..!

error: Content is protected !!
%d bloggers like this: