Ad Widget

Uppinangady Horse | ಉಪ್ಪಿನಂಗಡಿ: ಕುದುರೆಗೆ ಬಸ್ ಡಿಕ್ಕಿ – ಸ್ಥಳದಲ್ಲೇ ಕುದುರೆ ಸಾವು : ಸವಾರ ಸಚಿನ್ ಮೂಳೆಮುರಿತ – ಕುದುರೆಯ ಮೃತದೇಹ ಮಡಿಲಲ್ಲಿಟ್ಟುಕೊಂಡು ಬಿಕ್ಕಿಬಿಕ್ಕಿ ಅತ್ತ ಮಾಲಕರ ಪುತ್ರ ಸಮರ್

InShot_20221225_190809838
Ad Widget

Ad Widget

Ad Widget

ಉಪ್ಪಿನಂಗಡಿ, ಡಿ.25: ಕುದುರೆಯೊಂದಕ್ಕೆ ಸರಕಾರಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಕುದುರೆ (Uppinangady Horse) ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ಪೆದಮಲೆ ಎಂಬಲ್ಲಿ ರವಿವಾರ ನಡೆದಿದ್ದು, ಕುದುರೆ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

Ad Widget

Ad Widget

Ad Widget

Ad Widget

Ad Widget

ಉದ್ಯಮಿ ಪಿಲಿಗೂಡು ಮೋನು ಎಂಬವರಿಗೆ ಸೇರಿದ ಕುದುರೆ ಇದಾಗಿದ್ದು, ಇವರ ಪುತ್ರ ಬೆಳಗ್ಗಿನ ಹೊತ್ತು ಕುದುರೆಯಲ್ಲಿ ಗುರುವಾಯನಕೆರೆ- ಉಪ್ಪಿನಂಗಡಿ ರಾಜ್ಯ ಹೆದ್ದಾರಿಯಲ್ಲಿ ರೈಡಿಂಗ್ ಹೊರಟಿದ್ದರು. ಈ ವೇಳೆ ಈತನ ಪರಿಚಯದ ಅಡಿಕೆ ವರ್ತಕ ಸಚಿನ್ ಎಂಬಾತ ತಾನೊಮ್ಮೆ ಕುದುರೆ ಸವಾರಿ ಮಾಡುತ್ತೇನೆಂದು ಕೇಳಿದ್ದಾರೆ. ಅದರಂತೆ ಸಚಿನ್ ಕುದುರೆ ಸವಾರಿ ಹೊರಟಿದ್ದರು.

Ad Widget

Ad Widget

Ad Widget

Ad Widget

Ad Widget

ಕುದುರೆ ಓಡುತ್ತಿದ್ದ ಸಂದರ್ಭ ಪೆದಮಲೆ ಬಳಿಯ ತಿರುವಿನಲ್ಲಿ ಧರ್ಮಸ್ಥಳದಿಂದ ಉಪ್ಪಿನಂಗಡಿಗೆ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಇದರಿಂದ ಸಚಿನ್ ಕುದುರೆಯ ಮೇಲಿನಿಂದ ಎಸೆಯಲ್ಪಟ್ಟಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್ ಢಿಕ್ಕಿಯಿಂದ ತಲೆಗೆ ಗಂಭೀರ ಗಾಯಗೊಂಡ ಕುದುರೆ ಕುಸಿದು ಹೊರಳಾಡಿ ಪ್ರಾಣ ಬಿಟ್ಟಿದೆ.

 ಕುದುರೆ ಬಿದ್ದ ಸಂದರ್ಭ ಕುದುರೆಯನ್ನು ಮಡಿಲಲ್ಲಿ ಮಲಗಿಸಿ ಆರೈಕೆ ಮಾಡುತ್ತಿದ್ದ ಕುದುರೆಯ ಯಜಮಾನ ಮೋನ್ ಪಿಲಿಗೂಡು ಪುತ್ರ ಸಮರ್ ಅಳು ಸ್ಥಳದಲ್ಲಿದ್ದವರ ಕಣ್ಣಲ್ಲೂ ಕಣ್ಣೀರು ಭರಿಸಿತು.

Ad Widget

Ad Widget

Ad Widget

Ad Widget

ಸಚಿನ್  ಬಳಿ ಕೂಡಾ ಕುದುರೆಯೊಂದಿದ್ದು, ಅವರು ಕೂಡಾ ಕುದುರೆ ಸವಾರಿಯ ಹವ್ಯಾಸವುಳ್ಳವರಾಗಿದ್ದಾರೆ. ಮೂಳೆ ಮುರಿತಕ್ಕೊಳಗಾಗಿರುವ ಸಚಿನ್ ಅವರನ್ನು ಚಿಕಿತ್ಸೆಗೆಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

Ad Widget

Leave a Reply

Recent Posts

5 guarantee | ಖಚಿತವಾದ ಪಂಚ ಯೋಜನೆಗಳು: ಬಡವರ-ಮಧ್ಯಮ ವರ್ಗದವರ ಕಲ್ಯಾಣಕ್ಕೆ ಕ್ರಾಂತಿಕಾರಕ ಮುನ್ನುಡಿ ಬರೆದ ಕಾಂಗ್ರೆಸ್ ಸರ್ಕಾರ – ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯರಿಂದ ಘೋಷಣೆ : 5 ಯೋಜನೆಗಳ ಪೂರ್ತಿ ವಿವರ ಇಲ್ಲಿದೆ : ನಳಿನ್, ಸಿ.ಟಿ.ರವಿ, ಬಜರಂಗದಳದ ಪದವಿದರರಿಗೂ ನಮ್ಮ ಯೋಜನೆ ಫ್ರೀ ಎಂದು ಕಾಲೆಳೆದ ಕಾಂಗ್ರೇಸ್..!

error: Content is protected !!
%d bloggers like this: