ಬೆಂಗಳೂರು: ಕರ್ನಾಟಕ ರತ್ನ ಡಾ. ರಾಜ್‌ಕುಮಾರ್ ಕುಟುಂಬ ಹಾಗೂ ಪುನೀತ್ ರಾಜ್ ಕುಮಾರ್ ಕುರಿತು ಬೇಕಾಬಿಟ್ಟಿಯಾಗಿ ಕೆಟ್ಟದಾಗಿ ಮಾತಾಡಿದ್ದ ಆರೋಪದ ಮೇಲೆ ಹಿಂದೂ ಸಂಘಟನೆಯ ಮುಖಂಡ ಪುನೀತ್ ಕೆರೆಹಳ್ಳಿ(Punith Kerehalli) ಕನ್ನಡಪರ ಹೋರಾಟಗಾರರು ಧರ್ಮದೇಟು ಕೊಟ್ಟಿದ್ದಾರೆ.
ಸದ್ಯ ಕೆರೆಹಳ್ಳಿಗೆ ಗೂಸಾ ಕೊಟ್ಟಿರುವ ವಿಡಿಯೋ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಇಂದು ಚಾಮರಾಜಪೇಟೆಯಲ್ಲಿ ರಾಜ್‌ಕುಮಾರ್ ಫ್ಯಾಮಿಲಿ ಬಗ್ಗೆ ಹಗುರವಾಗಿ ಮಾತಾನಾಡುತ್ತೀಯಾ ಎಂದು ಕ್ಷಮೆ ಕೇಳು ಎಂದು ಕನ್ನಡಪರ ಹೋರಾಟಗಾರ ಶಿವಕುಮಾರ್ ಟೀಂನಿಂದ ಪುನೀತ್ ಕೆರೆಹಳ್ಳಿಗೆ ಆಗ್ರಹಿಸಿದ್ದಾರೆ. ಆದರೆ ಏಟು ಪುನೀತ್ ಕೆರೆಹಳ್ಳಿ ಮಾತ್ರ ನಾನ್ಯಾಕೇ ಕ್ಷಮೆ ಕೇಳಲಿ ಎಂದು ಮೂಗಿನ ನೇರಕ್ಕೆ ಮಾತನಾಡಿದ್ದಾನೆ. ಆಗ ಮಾತಿಗೆ ಮಾತು ಬೆಳೆದು ಕನ್ನಡಪರ ಹೋರಾಟಗಾರರು ಕೆರೆಹಳ್ಳಿಗೆ ಹೊಡೆತ ಕೊಟ್ಟಿದ್ದಾರೆ.
ಸದ್ಯ ಕೆರೆಹಳ್ಳಿಗೆ ಗೂಸಾ ಕೊಟ್ಟಿರುವ ವಿಡಿಯೋ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಇಂದು ಚಾಮರಾಜಪೇಟೆಯಲ್ಲಿ ರಾಜ್‌ಕುಮಾರ್ ಫ್ಯಾಮಿಲಿ ಬಗ್ಗೆ ಹಗುರವಾಗಿ ಮಾತಾನಾಡುತ್ತೀಯಾ ಎಂದು ಕ್ಷಮೆ ಕೇಳು ಎಂದು ಕನ್ನಡಪರ ಹೋರಾಟಗಾರ ಶಿವಕುಮಾರ್ ಟೀಂನಿಂದ ಪುನೀತ್ ಕೆರೆಹಳ್ಳಿಗೆ ಆಗ್ರಹಿಸಿದ್ದಾರೆ.
ಇತ್ತೀಚೆಗೆ ಹೊಸಪೇಟೆಯಲ್ಲಿ ನಡೆದ ಘಟನೆ ಬಗ್ಗೆ ದಿ. ಪುನೀತ್ ರಾಜಕುಮಾರ್ ವಿರುದ್ಧ ಪುನೀತ್ ಕೆರೆಹಳ್ಳಿ ಹಗುರವಾಗಿ ಮಾತನಾಡಿದ್ದ ಎಂದು ಶಿವಕುಮಾರ್ ಮತ್ತಿತರರು ಆರೋಪಿಸಿದ್ದು ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ. ಆದರೆ ನಾನ್ಯಾಕೆ ಕ್ಷಮೆ ಕೇಳಬೇಕು ಎಂದು ಪುನೀತ್ ವಾದಿಸಿದ್ದು, ವಾಗ್ವಾದ ವಿಕೋಪಕ್ಕೆ ಹೋಗಿ ಹೊಯ್‌ಕೈ ನಡೆದಿದ್ದು, ಈ ಕುರಿತ ವಿಡಿಯೋ ಕೂಡ ಹರಿದಾಡಲಾರಂಭಿಸಿದೆ.
ಡಾ.ರಾಜಕುಮಾರ್ ಕುಟುಂಬದ ಬಗ್ಗೆ ನೀನು ಹೇಗೆ ಮಾತಾಡಿದೆ ಅಂತ ಫೇಸ್‌ಬುಕ್‌ನಲ್ಲಿ ಕನ್ನಡಪರ ಮುಖಂಡ ಶಿವಕುಮಾರ್ ನಾಯ್ಕ ಪ್ರಶ್ನಿಸಿದ್ದು, ಬಳಿಕ ಇಬ್ಬರ ಮಧ್ಯೆ ಫೋನ್‌ನಲ್ಲಿ ಮಾತುಕತೆ ನಡೆದಿದೆ. ಆಗ ನಾನು ಚಾಮರಾಜಪೇಟೆಗೆ ಬಂದಿದ್ದೇನೆ ಬಾ ಎಂದು ಪುನೀತ್ ಕೆರೆಹಳ್ಳಿ ಕರೆದಿದ್ದು, ಅಲ್ಲಿಗೆ ಶಿವಕುಮಾರ್ ಮತ್ತು ತಂಡ ಹೋಗಿದ್ದು, ಅಲ್ಲಿ ಈ ಪ್ರಕರಣ ನಡೆದಿದೆ. ಸದ್ಯ ಪುನೀತ್ ಕೆರೆಹಳ್ಳಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಚಾಮರಾಜಪೇಟೆ ಪೊಲೀಸರಿಂದ ವಿಚಾರಣೆ ನಡೆಸುತ್ತಿದ್ದಾರೆ.