Soft Skill Training ಪುತ್ತೂರು:ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ನಡೆದ 6 ದಿನಗಳ”ಮೃದು ಕೌಶಲ್ಯ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಡಿ 17 ರಂದು ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ಪಾಲಿಟೆಕ್ನಿಕ್‌ನ ಅಧ್ಯಕ್ಷರಾದ ವಿಶ್ವೇಶ್ವರ ಭಟ್ ಬಂಗಾರಡ್ಕ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ “ವಿದ್ಯಾರ್ಥಿನಿಯರಿಗಾಗಿ ಆಯೋಜಿಸಿದ ಈ ತರಬೇತಿ ಕಾರ್ಯಕ್ರಮದ ಪ್ರಯೋಜನವನ್ನು ಪಡೆದ ನೀವೆಲ್ಲರೂ ಉತ್ತಮ ಅವಕಾಶಗಳನ್ನು ಪಡೆಯಿರಿ” ಎಂದು ಶುಭಹಾರೈಸಿದರು.
ಅತಿಥಿಗಳಾದ ಜಿಲ್ಲಾ ಕೌಶಲ್ಯ ತರಬೇತಿ ಅಧಿಕಾರಿಗಳಾದ ಶ್ರೀ ರೋಹಿತ್ ಮಾತನಾಡುತ್ತಾ “ನಿಮ್ಮಲ್ಲಿರುವ ಕೌಶಲ್ಯವನ್ನು ತೋರ್ಪಡಿಸಲು ಇರುವ ಅವಕಾಶವನ್ನು ಉಪಯೋಗಿಸಿಕೊಂಡಾಗ ನಿಮ್ಮ ಏಳಿಗೆ ಸಾಧ್ಯ” ಎಂದರು.
“ನಾಂದಿ ಪೌಂಡೇಶನ್”ನ ತರಬೇತುದಾರರು ಶ್ರೀ ಶ್ರೀನಿವಾಸ್ ಕುಲಕರ್ಣಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಶುಭಹಾರೈಸಿ ಅಭಿನಂದಿಸಿದರು .ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು . ತರಬೇತಿ ಪಡೆದ 30 ವಿದ್ಯಾರ್ಥಿನಿಯರಲ್ಲಿ ಸುಪ್ರೀತ, ಚೈಶ್ಮ,ಶೃತಿ,ಖುಷಿ,ಕಾವ್ಯ,ಶಿಶಿರ,ಸ್ವಪ್ನ ಮೊದಲಾದವರು ತರಬೇತಿಯ ಬಗ್ಗೆ ಉತ್ತಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಈಶ್ವರಚಂದ್ರ,ರವಿ ಮುಂಗ್ಲಿಮನೆ ಮತ್ತು ಉಷಾ ಭಟ್ ಮುಳಿಯ ಭಾಗವಹಿಸಿದ್ದರು. ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀ ಮುರಳೀದರ್ ಎಸ್., ಶಿಕ್ಷಕವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಶ್ರೀನಿಧಿ ತಂಡದವರು ಪ್ರಾರ್ಥಿಸಿದರು,ಮನೀಶ ಅತಿಥಿಗಳನ್ನು ಸ್ವಾಗತಿಸಿದರು,ಖುಷಿ ಧನ್ಯವಾದ ಸಮರ್ಪಿಸಿದರು ಹಾಗೂ ಅದಿತಿ ನಿರೂಪಿಸಿದರು