ಕಾಸರಗೋಡು: ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯ 19 ವರ್ಷದ ಯುವತಿಗೆ ಮಾದಕ ವಸ್ತು ನೀಡಿ ಸಾಮೂಹಿಕ ಅತ್ಯಾಚಾರಗೈದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಘಟನೆಗೆ ಸಂಬಂಧಿಸಿ ಕಾಞಂಗಾಡ್ ಮೂಲದ ಮಹಿಳೆಯನ್ನು ಕಸ್ಟಡಿಗೆ ಪಡೆಯಲಾಗಿದೆ.
ಮಧೂರು ಪಟ್ಲ ನಿವಾಸಿ ಶೈನಿತ್ ಕುಮಾರ್ (30), ಉಪ್ಪಳ ಮಂಗಲ್ಪಾಡಿ ನಿವಾಸಿ ಮೋಕ್ಷಿತ್ ಶೆಟ್ಟಿ (43), ಉಳಿಯತ್ತಡ್ಕದ ಬಾಡಿಗೆ ಮನೆಯಲ್ಲಿ ವಾಸಿಸುವ ಪ್ರಶಾಂತ್ (27) ಎಂಬವರನ್ನು ಬಂಧಿಸಲಾಗಿದೆ. ಕಾಸರಗೋಡು ವಿದ್ಯಾನಗರ ಮಹಿಳಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪಿ.ಚಂದ್ರಿಕಾ ನೇತೃತ್ವದಲ್ಲಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.ಕಾಞಂಗಾಡ್ ನಿವಾಸಿ ಜಾಸ್ಮಿನ್ ಎಂಬ ಮಹಿಳೆಯನ್ನು ಕಸ್ಟಡಿಗೆ ಪಡೆಯಲಾಗಿದೆ.ಘಟನೆಯಲ್ಲಿ ಇನ್ನೂ ಹಲವು ಮಂದಿ ಭಾಗಿಯಾಗಿದ್ದಾರೆಂದು ಹೇಳಲಾಗುತ್ತಿದೆ.ಯುವತಿಯ ಹೇಳಿಕೆ ಆಧರಿಸಿ ಪ್ರಕರಣದಲ್ಲಿ ಭಾಗಿಯಾದ ಇತರ ಆರೋಪಿಗಳ ಪತ್ತೆ ಕಾರ್ಯ ನಡೆಸಲಾಗುತ್ತಿದೆ.
ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಯುವತಿ ದೌರ್ಜನ್ಯಕ್ಕೊಳಗಾಗಿದ್ದಾಳೆ.ಯುವತಿಯ ಸ್ನೇಹಿತನೂ ಈ ಪ್ರಕರಣದಲ್ಲಿ ಆರೋಪಿಯಾಗಿರುವುದಾಗಿ ಹೇಳಲಾಗಿದೆ. ಯುವತಿ ಎಂಟನೇ ತರಗತಿಯಲ್ಲಿ ಕಲಿಯುತ್ತಿದ್ದಾಗಲೇ ಆತ ಆಕೆಯೊಂದಿಗೆ ಸ್ನೇಹದಲ್ಲಿದ್ದು, ಹತ್ತನೇ ತರಗತಿಯ ಬಳಿಕ ಆತನನ್ನು ದೂರ ಮಾಡಿದ್ದಾಳೆ.ಇದರಿಂದ ಆಕೆಯ ಸಂಬಂಧಿಕೆಯಾದ ಓರ್ವ ಮಹಿಳೆಯ ಸಹಾಯ ದೊಂದಿಗೆ ಯುವತಿಯನ್ನು ಮತ್ತೆ ಬಲೆಗೆ ಹಾಕಿಕೊಂಡ ಯುವಕ ಆಕೆಯನ್ನು ಪುಸಲಾಯಿಸಿ ವಿವಿಧೆಡೆ ಕರೆದೊಯ್ದು ಮಾದಕವಸ್ತು ನೀಡಿ ಅತ್ಯಾಚಾರ ನಡೆಸಿದ್ದಾನೆಂದು ದೂರಲಾಗಿದೆ.
ಚೆರ್ಕಳ, ಕಾಸರಗೋಡು, ಮಂಗಳೂರು, ತೃಶೂರು ಮೊದಲಾದೆಡೆಗಳ ವಸತಿ ಗೃಹಗಳಿಗೆ ಕರೆದೊಯ್ದು ಅತ್ಯಾಚಾರ ನಡೆಸಿರುವುದಾಗಿ ಹೇಳಲಾಗಿದೆ.ಇತ್ತೀಚೆಗೆ ಕಾಸರಗೋಡಿನ ವಸತಿಗೃಹದಲ್ಲಿ ಯುವತಿಗೆ ನಾಲ್ಕು ಮಂದಿ ಸೇರಿ ದೌರ್ಜನ್ಯಗೈದಿದ್ದು, ಅಸ್ವಸ್ಥಳಾದ
ಕಾಣಿಸಿಕೊಂಡ ಯುವತಿಯನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.ಅಲ್ಲಿ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ.