ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ನೆಲ್ಲಿಗುಡ್ಡೆ ಜರಿಮೂಲೆ ಸಮೀಪ ಗುಂಡಿಯೊಂದರಲ್ಲಿ ಮೃತದೇಹವೊಂದು ಪತ್ತೆಯಾದ ಘಟನೆ ಡಿ 21 ರಂದು ಬೆಳಿಗ್ಗೆ ನಡೆದಿದೆ. ಮೃತ ದೇಹದ ಅನತಿ ದೂರದಲ್ಲಿ ಮೊಬೈಲ್ ಹಾಗೂ ಟ್ರಾವೆಲ್ ಬ್ಯಾಗ್ ಕೂಡ ಕಾಣಿಸಿದೆ
ವಾಡಿಕೆಯಂತೆ ಸೊಪ್ಪು ಸೌದೆ ತರಲು ಗುಡ್ಡಕ್ಕೆ ಹೋದ ಸ್ಥಳೀಯ ನಿವಾಸಿಗಳಿಗೆ ಮೊದಲು ಗುಡ್ಡದಲ್ಲಿ ಮೊಬೈಲ್ ಕಾಣಿಸಿದೆ. ಹೀಗಾಗಿ ಅಕ್ಕಪಕ್ಕ ಪರಿಶೀಲನೆ ನಡೆಸಿದಾಗ ಪಕ್ಕದಲ್ಲಿ ಮೃತದೇಹ ಕೂಡ ಪತ್ತೆಯಾಗಿದೆ. ಇದನ್ನು ನೋಡಿದ ಸೊಪ್ಪು ಹಾಗೂ ಸೌದೆಗೆ ಬಂದವರು ಭಯಭೀತರಾಗಿ ಓಡಿಹೋಗಿದ್ದಾರೆನ್ನಲಾಗಿದೆ.
ಮೃತ ದೇಹ ಸಂಪೂರ್ಣವಾಗಿ ಕೊಳೆತು ಹೋಗಿದ್ದು , ಕೇವಲ ಅಸ್ತಿ ಪಂಜರ ಮಾತ್ರ ಪತ್ತೆಯಾಗಿದೆ. ಮೃತದೇಹ ನೆಲದಲ್ಲಿ ಬಿದ್ದುಕೊಂಡಿದ್ದು ಅದರ ಪಕ್ಕದಲ್ಲಿರುವ ಮರದಲ್ಲಿ ಬಳ್ಳಿಯೊಂದು ನೇತಾಡುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಇದೊಂದು ಕೊಲೆಯೋ ಅಥಾವ ಆತ್ಮಹತ್ಯೆಯೂ ಎನ್ನುವ ಸಂಶಯ ಸ್ಥಳೀಯರಿಗೆ ಕಾಡುತ್ತಿದೆ
ಎನ್ನಲಾಗಿದೆ. ಆದರೇ ಈ ಬಗ್ಗೆ ಮಾಹಿತಿ ಪಡೆಯಲು ಮಾಧ್ಯಮ ಪ್ರತಿನಿಧಿಗಳು ವಿಟ್ಲ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದರೇ ಈ ಬಗ್ಗೆ ಮಾಹಿತಿಯಿಲ್ಲ ಎಂದು ಪೊಲೀಸರು ಪ್ರತಿಕ್ರಿಯಿಸಿದ್ದು ಅಚ್ಚರಿ ಹಾಗೂ ಆಘಾತಕ್ಕೆ ಕಾರಣವಾಗಿದೆ.

