Ad Widget

SabarimalaYatra | ಜಮ್ಮು ಕಾಶ್ಮೀರದ ವೈಷ್ಣೋದೇವಿಯಿಂದ ಶಬರಿಮಲೆಗೆ ಮಂಗಳೂರಿನ ಪ್ರಭಾತ್ ಕರಿಯಪ್ಪ ಪೂಜಾರಿಯಿಂದ ಪಾದಯಾತ್ರೆ : ಕೇರಳ ಪ್ರವೇಶವಾಗುವಾಗ ಸರ್ವಧರ್ಮಿಯರಿಂದ ಸ್ವಾಗತ

IMG-20221219-WA0008
Ad Widget

Ad Widget

Ad Widget

ಜಮ್ಮು ಕಾಶ್ಮೀರ ವೈಷ್ಣೋದೇವಿಯಿಂದ ಕೇರಳದ ಶಬರಿಮಲೆಗೆ (SabarimalaYatra) ಪಾದಯಾತ್ರೆ ಮಾಡುತ್ತಿರುವ ಮಂಗಳೂರಿನ ಪ್ರಭಾತ್ ಕರಿಯಪ್ಪ ಪೂಜಾರಿ ಇವರಿಗೆ ಮಂಜೇಶ್ವರ ತಾಲೂಕು ನಾಗರಿಕರಿಂದ ಕೇರಳ ರಾಜ್ಯಕ್ಕೆ ಹೊಸಂಗಡಿಯಲ್ಲಿ ಸರ್ವಧರ್ಮಿಯಂದಲೂ ಸ್ವಾಗತ ದೊರೆಯಿತು.

Ad Widget

Ad Widget

Ad Widget

Ad Widget

Ad Widget

ಲೋಕದ ಸಮಸ್ತ ಜೀವ ರಾಶಿಗಳಿಗೆ ಸನ್ಮಂಗಳ ಉಂಟುಮಾಡಲು ಮಂಗಳೂರಿನ ಪ್ರಭಾತ್ ಎಂಬವರು ಜಮ್ಮು ಕಾಶ್ಮೀರದ ವೈಷ್ಣೋದೇವಿಯಿಂದ ಇರುಮುಡಿ ಕಟ್ಟಿ ಶಬರಿಮಲೆಗೆ ಪಾದಯಾತ್ರೆ ಆರಂಭಿಸಿದ್ದರು ಇಂದು ಕೇರಳ ರಾಜ್ಯವನ್ನು ಪ್ರವೇಶಿಸಿದ್ದಾರೆ, ಆ ಪ್ರಯುಕ್ತ ಮಂಜೇಶ್ವರ ತಾಲೂಕಿನ ವಿವಿಧ ರಾಜಕೀಯ ಸಾಮಾಜಿಕ ಧಾರ್ಮಿಕ ನೇತಾರರು ಹೊಸಂಗಡಿಯಲ್ಲಿ ಅವರನ್ನು ಹಾರ್ದಿಕವಾಗಿ ಸ್ವಾಗತಿಸಿದರು, ಹೊಸಂಗಡಿ ಅಯ್ಯಪ್ಪ ಭಜನಾ ಮಂದಿರದ ಅಯ್ಯಪ್ಪ ಸ್ವಾಮಿಗಳು ಪಾದಯಾತ್ರೆ ಮಾಡುತ್ತಿರುವ ಪ್ರಭಾತ್ ಅವರನ್ನು ಬರಮಾಡಿಕೊಂಡರು.

Ad Widget

Ad Widget

Ad Widget

Ad Widget

Ad Widget

ನಾಗರಿಕರ ಪರವಾಗಿ ಮಾತನಾಡಿದ ಸಾಮಾಜಿಕ ನೇತಾರ ಡಿಎಂಕೆ ಮೊಹಮ್ಮದವರು ಸಮಸ್ತ ಜೀವ ರಾಶಿಗಳಿಗೆ ಸನ್ಮಂಗಳ ಉಂಟುಮಾಡಲು ಪ್ರಭಾತ್ ಅವರು ನಡೆಸುತ್ತಿರೋ ಈ ಪಾದಯಾತ್ರೆಯೂ ತುಂಬಾ ಶ್ಲಾಘನೀಯವಾಗಿದ್ದು ಸಮಸ್ತ ನಾಗರಿಕರ ಪರವಾಗಿ ಪ್ರಭಾತ್ ಅವರನ್ನು ಕೇರಳ ರಾಜ್ಯಕ್ಕೆ ಸ್ವಾಗತಿಸುತ್ತಾ ಅವರ ಪಾದಯಾತ್ರೆಯು ಸುಲಭ ರೀತಿಯಲ್ಲಿ ನಡೆದು ಶಬರಿಮಲೆಯ ಸ್ವಾಮಿ ಅಯ್ಯಪ್ಪನ ದಿವ್ಯ ದರ್ಶನ ಉತ್ತಮ ರೀತಿಯಲ್ಲಿ ಆಗಲಿ ಎಂದು ಹಾರೈಸಿದರು.

Ad Widget

Ad Widget

Ad Widget

Ad Widget

ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಸೋಮಶೇಖರ್ ಜಿ ಎಸ್, ಉದಯ್ ಪಾವಳ ಗುರುಸ್ವಾಮಿ, ಲಕ್ಷ್ಮಣ ಪ್ರಭು ಕುಂಬಳೆ, ಜೆಸ್ಸಿ ಹೊಸಂಗಡಿ, ಜೌರ ಕಡಂಬಾರು, ಸೋಮಪ್ಪ ಮೀಂಜ, ದಿವಾಕರ ಮಜೀರ್ಪಳ್ಳ, ಹನೀಫ್ ಮಂಜೇಶ್ವರ, ರಾಜೇಶ್ ಅಮ್ಮ ಲಾಟರಿ, ರಾಜು ಅಮ್ಮ ಲಾಟರಿ, ಪೃಥ್ವಿರಾಜ್ ಶೆಟ್ಟಿ ಕುಂಬಳೆ, ಇರ್ಶಾದ್ ಮಂಜೇಶ್ವರ, ಭರತ್, ಪ್ರಮೋದ್ ,ಅಝರ್, ಕಮಲೇಶ್, ಬಾಲಸ್ವಾಮಿ, ಸಾಬು ಚೆರ್ತಲ ಮುಂತಾದವರು ಭಾಗವಹಿಸಿದರು.

Ad Widget

Leave a Reply

Recent Posts

5 guarantee | ಖಚಿತವಾದ ಪಂಚ ಯೋಜನೆಗಳು: ಬಡವರ-ಮಧ್ಯಮ ವರ್ಗದವರ ಕಲ್ಯಾಣಕ್ಕೆ ಕ್ರಾಂತಿಕಾರಕ ಮುನ್ನುಡಿ ಬರೆದ ಕಾಂಗ್ರೆಸ್ ಸರ್ಕಾರ – ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯರಿಂದ ಘೋಷಣೆ : 5 ಯೋಜನೆಗಳ ಪೂರ್ತಿ ವಿವರ ಇಲ್ಲಿದೆ : ನಳಿನ್, ಸಿ.ಟಿ.ರವಿ, ಬಜರಂಗದಳದ ಪದವಿದರರಿಗೂ ನಮ್ಮ ಯೋಜನೆ ಫ್ರೀ ಎಂದು ಕಾಲೆಳೆದ ಕಾಂಗ್ರೇಸ್..!

error: Content is protected !!
%d bloggers like this: