Ad Widget

BigCinema Puttur | ಜಿ.ಎಲ್ ವನ್ ಮಾಲ್ ನಲ್ಲಿ ಪುತ್ತೂರಿನ ಮೊದಲ ಮಲ್ಟಿಪ್ಲೆಕ್ಸ್ ‘ಭಾರತ್ ಸಿನಿಮಾ’ ಶುಭಾರಂಭ : ಪುತ್ತೂರಿಗೆ ಹಲವು ಪ್ರಥಮಗಳನ್ನು ನೀಡಿದ ಜಿ.ಎಲ್ ಗ್ರೂಪ್ಸ್ ವತಿಯಿಂದ ಮತ್ತೊಂದು ಕೊಡುಗೆ | ನೂತನ ಮಲ್ಟಿಪ್ಲೆಕ್ಸ್ ಗೆ ಉತ್ತಮ ರೀವ್ಯೂ

InShot_20221221_213814108
Ad Widget

Ad Widget

Ad Widget

ಪುತ್ತೂರು: ಪುತ್ತೂರು ಪೇಟೆಗೆ ಹಲವು ಪ್ರಥಮಗಳನ್ನು ನೀಡಿದ ಪ್ರತಿಷ್ಠಿತ ಜಿ.ಎಲ್ ಗ್ರೂಪ್‌ ನ ವತಿಯಿಂದ ಪುತ್ತೂರಿಗೆ ಪ್ರಪ್ರಥಮ ಮಲ್ಟಿಪ್ಲೆಕ್ಸ್ (BigCinema Puttur) ಡಿ.21 ರಂದು ಉದ್ಘಾಟನೆಗೊಂಡಿದೆ.

Ad Widget

Ad Widget

Ad Widget

Ad Widget

Ad Widget

ಪುತ್ತೂರಿನ ಪ್ರಪ್ರಥಮ ಲಾಡ್ಜ್ ಜಿ.ಎಲ್ ಕಾಂಪ್ಲೆಕ್ಸ್ ನ ರಾಮ ಲಾಡ್ಜ್ , ನಂತರ ಜಿಎಲ್ ಟ್ರೇಡ್ ಸೆಂಟರ್ , ಇದೀಗ ಪುತ್ತೂರಿನ ಪ್ರಥಮ ಜಿ.ಎಲ್ ವನ್ ಮಾಲ್ ಜಿ.ಎಲ್ ಗ್ರೂಪ್ ವತಿಯಿಂದ ಪುತ್ತೂರಿಗೆ ದೊರಕಿದೆ.

Ad Widget

Ad Widget

Ad Widget

Ad Widget

Ad Widget

ಜಿ.ಎಲ್ ವನ್ ಮಾಲ್ ನಲ್ಲಿ ಭಾರತ್ ಸಿನೆಮಾ ಮಲ್ಟಿಪ್ಲೆಕ್ಸ್ ಉದ್ಘಾಟನೆ ನಂತರ ಮಾತನಾಡಿದ ಜಿ.ಎಲ್ ಗ್ರೂಪ್ ನ ಆಡಳಿತ ನಿರ್ದೇಶಕ ಬಲರಾಮ ಆಚಾರ್ಯ , ಪುತ್ತೂರಿನಿಂದ ಮಂಗಳೂರಿಗೆ ಸಿನೆಮಾ ನೋಡುವ ಉದ್ದೇಶಕ್ಕಾಗಿಯೇ ಹೋಗುವ ಜನರಿಗೆ ಹೊಸತನ ನೀಡಬೇಕೆಂಬ ಪ್ರಯತ್ನದಲ್ಲಿದ್ದೆವು. ಇದಕ್ಕೆ ಪೂರಕವಾಗಿ ಭಾರತ್ ಸಿನೆಮಾದ ಮಲ್ಟಿಪ್ಲೆಕ್ಸ್ ಸಿಕ್ಕಿದೆ. ಸುಮಾರು 1ಲಕ್ಷ ಚ. ಅಡಿ ಇರುವ ಮಾಲ್ ನಲ್ಲಿ ಫೆಬ್ರುವರಿ ಅಂತ್ಯದಲ್ಲಿ ಎಲ್ಲಾ ಮಳಿಗೆಗಳು ಜನರಿಗೆ ಸಿಗಲಿದೆ ಎಂದು ಜಿ. ಎಲ್. ವನ್ ಮಾಲ್ ಹೇಳಿದರು.

ಪುಡ್ ಕೋರ್ಟ್ ಹಾಗೂ ಒಂದು ಸ್ಕ್ರೀನ್ ಮಲ್ಟಿಪ್ಲೆಕ್ಸ್ ಮಾಡುವ ಆಲೋಚನೆ ಇತ್ತು. ಆದರೆ ಸದ್ಯ ಮೂರು ಸ್ಕ್ರೀನ್ ಮಲ್ಟಿಪ್ಲೆಕ್ ಇದೆ. ಸ್ಥಳೀಯ ಹಾಗೂ ಬ್ರಾಂಡೆಡ್ ಉತ್ಪನ್ನಗಳ ಮಳಿಗಳು ಇರಲಿದೆ.

Ad Widget

Ad Widget

Ad Widget

Ad Widget

ಅಂತರರಾಷ್ಟ್ರೀಯ ಗುಣಮಟ್ಟದ ಮಲ್ಟಿಪ್ಲೆಕ್ಸ್ ಆಗಿದ್ದು, ದಕ್ಷಿಣ ಕನ್ನಡಕ್ಕೆ ಮೊದಲ ಬಾರಿ ಪರಿಚಯಿಸಿದ ಸೌಂಡ್ ಹಾಗೂ ಪ್ರಾಜೆಕ್ಟರ್ ವೀಕ್ಷಕರಿಗೆ ವಿಶೇಷ ಅನುಭ ನೀಡಲಿದೆ. ಒಟ್ಟು 473 ಮಂದಿಗೆ ಸಿನಿಮಾ ಆಸ್ವಾಧಿಸುವ ಅವಕಾಶವಿದೆ ಎಂದರು.

ರಾಜೇಶ್ವರಿ ಬಲರಾಮ ಆಚಾರ್ಯ, ಲಕ್ಷ್ಮೀಕಾಂತ ಆಚಾರ್ಯ, ವೇದಾ ಲಕ್ಷ್ಮೀಕಾಂತ, ಸುದನ್ವ ಆಚಾರ್ಯ, ಮೇಘ ಸುದನ್ವ, ಭಾರತ ಸಿನೆಮಾದ ನಿರ್ದೇಶಕರಾದ ಆನಂದ ಪೈ, ಬಾಲಕೃಷ್ಣ ಶೆಟ್ಟಿ, ಸುಧೀರ್ ಪೈ, ಸುಧಾ ಬಿ. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಉಚಿತ ಸ್ಕ್ರೀನಿಂಗ್ : ಸ್ಕ್ರೀನ್ 1 ಒಂದರಲ್ಲಿ ಕನ್ನಡದ ಕಾಂತಾರ ಹಾಗೂ ಸ್ಕ್ರೀನ್ ಮೂರರಲ್ಲಿ ಹಿಂದಿಯ ದೃಶ್ಯಂ 2 ಪ್ರದರ್ಶನವಾಯಿತು. ಉದ್ಘಾಟನೆಯ ಅಂಗವಾಗಿ ಎರಡೂ ಸ್ಕ್ರೀನಿಂಗ್ ಉಚಿತವಾಗಿ ಪ್ರದರ್ಶನ ವ್ಯವಸ್ಥೆ ಮಾಡಲಾಗತ್ತು. ಗಣ್ಯರು ಹಾಗೂ ಬಲರಾಮ ಆಚಾರ್ಯ ಕುಟುಂಬ ಮೂದಲ ಪ್ರದರ್ಶನವನ್ನು ಆಸ್ವಾಧಿಸಿದರು.

ಮಲ್ಟಿಪ್ಲೆಕ್ಸ್ ಬಗ್ಗೆ ರೀವ್ಯೂ: ಪುತ್ತೂರಿನ ಭಾರತ್ ಸಿನಿಮಾ ಮಲ್ಟಿಪ್ಲೆಕ್ಸ್ ನ ಮೊದಲ ದಿನದ ಪ್ರದರ್ಶನದ ನಂತರ ಸಿನಿಮಾ ವೀಕ್ಷಿಸಿದವರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ಈ ಟಾಕೀಸ್ ನಲ್ಲಿ ಅದ್ಭುತವಾದ ಸೌಂಡ್ ಎಫೆಕ್ಟ್ ಇದೆ ಎಂದಿದ್ದಾರೆ. ಸೀಟಿಂಗ್ ಸೌಲಭ್ಯ ಆರಾಮದಾಯಕವಾಗಿದೆ ಎಂದಿದ್ದಾರೆ.

ಸೀಟಿಂಗ್ ಹಾಗೂ ಬುಕ್ಕಿಂಗ್ : ಜಿ. ಎಲ್. ವನ್ ಮಾಲಿನ ಎರಡನೇ ಮಹಡಿಯಲ್ಲಿ ಭಾರತ್ ಸಿನೆಮಾ ಇದ್ದು, ಸ್ಕ್ರೀನ್ 1ರಲ್ಲಿ 177 ಆಸನ, 2 ಹಾಗೂ 3ರಲ್ಲಿ ತಲಾ 148 ಆಸನದ ವ್ಯವಸ್ಥೆಯಿದೆ. ಈಗಾಗಲೇ ಸ್ಕ್ರೀನಿಂಗ್ ಬುಕ್ಕಿಂಗ್ ಆರಂಭವಾಗಿದ್ದು, ಟಿಕೆಟ್ ಬುಕ್ ಮೈ ಶೋ ನಲ್ಲಿ ಲಭ್ಯವಿದೆ.

Ad Widget

Leave a Reply

Recent Posts

5 guarantee | ಖಚಿತವಾದ ಪಂಚ ಯೋಜನೆಗಳು: ಬಡವರ-ಮಧ್ಯಮ ವರ್ಗದವರ ಕಲ್ಯಾಣಕ್ಕೆ ಕ್ರಾಂತಿಕಾರಕ ಮುನ್ನುಡಿ ಬರೆದ ಕಾಂಗ್ರೆಸ್ ಸರ್ಕಾರ – ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯರಿಂದ ಘೋಷಣೆ : 5 ಯೋಜನೆಗಳ ಪೂರ್ತಿ ವಿವರ ಇಲ್ಲಿದೆ : ನಳಿನ್, ಸಿ.ಟಿ.ರವಿ, ಬಜರಂಗದಳದ ಪದವಿದರರಿಗೂ ನಮ್ಮ ಯೋಜನೆ ಫ್ರೀ ಎಂದು ಕಾಲೆಳೆದ ಕಾಂಗ್ರೇಸ್..!

error: Content is protected !!
%d bloggers like this: