Ad Widget

ಬೆಳಂದೂರು – ಅಕ್ರಮ ತಳ್ಳುಗಾಡಿ ತೆರವು : ಇಓ ನವೀನ್ ಭಂಡಾರಿ ಮತ್ತು ಪಿಡಿಓಗೆ ಜೀವ ಬೆದರಿಕೆ : ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ , ಕೊಲೆ ಬೆದರಿಕೆ ಪ್ರಕರಣ ದಾಖಲು

InShot_20221221_073133705
Ad Widget

Ad Widget

Ad Widget

ಪುತ್ತೂರು: ಬೆಳಂದೂರು ಗ್ರಾಮ
ಪಂಚಾಯತ್ ‌ ವ್ಯಾಪ್ತಿಯ ಕ್ಯಾಮಣ ಗ್ರಾಮದ ಅಂಕಜಾಲು ಎಂಬಲ್ಲಿನ ಅಕ್ರಮ ತಳ್ಳುಗಾಡಿಯನ್ನು ತೆರವು ಮಾಡಿರುವುದಕ್ಕೆ ಪುತ್ತೂರು ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ನವೀನ್‌ ಕುಮಾರ್ ಭಂಡಾರಿ ಮತ್ತು ಗ್ರಾ.ಪಂ ಪ್ರಭಾರ ಅಭಿವೃದ್ಧಿ ಅಧಿಕಾರಿ ನಾರಾಯಣ ಕೆ. ಅವರಿಗೆ ವಾಟ್ಸ್ಆ್ಯಪ್ ಕರೆ ಮೂಲಕ ಜೀವ ಬೆದರಿಕೆಯೊಡ್ಡಿರುವ ಕುರಿತು ಬೆಳ್ಳಾರೆ ಪೊಲೀಸ್‌ ಠಾಣೆಯಲ್ಲಿ, ಕರ್ತವ್ಯಕ್ಕೆ ಅಡ್ಡಿ ಮತ್ತು ಕೊಲೆ ಬೆದರಿಕೆ ಆರೋಪದಡಿ ಪ್ರಕರಣ ದಾಖಲಾಗಿದೆ.

Ad Widget

Ad Widget

Ad Widget

Ad Widget

ಅಂಕಜಾಲು ಎಂಬಲ್ಲಿ ಅಬ್ದುಲ್ ರಜಾಕ್ ಬಿನ್ ಶೇಖಬ್ಬ ಎಂಬವರ ಅಕ್ರಮ ತಳ್ಳುಗಾಡಿಯನ್ನು ಪೊಲೀಸ್ ಬಂದೋಬಸ್ತ್ ನಲ್ಲಿ ನ.30ಕ್ಕೆ ತೆರವುಗೊಳಿಸಲಾಗಿತ್ತು.

Ad Widget

Ad Widget

Ad Widget

Ad Widget

ಡಿ.5ಕ್ಕೆ ಅನಾಮಧೇಯ ವ್ಯಕ್ತಿಯೊಬ್ಬರು ವಾಟ್ಸಪ್ ಕರೆ ಮಾಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾರಾಯಣ ಕೆ. ಮತ್ತು ಪುತ್ತೂರು ತಾಲೂಕು ಪಂಚಾಯತ್‌ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ‘ತಳ್ಳುಗಾಡಿ ವ್ಯಾಪಾರಿಗೆ ಬೇರೆ ವ್ಯವಸ್ಥೆ ಮಾಡದಿದ್ದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ.ನಿನ್ನ ಹಾಗೂ ಇ.ಒ ನವೀನ್ ಭಂಡಾರಿಯವರ ಮೊಬೈಲ್ ನಂಬರ್ ಹೊರ ದೇಶದಲ್ಲಿ ಎಲ್ಲರಲ್ಲೂ ಹರಿದಾಡುತ್ತಿದೆ. ಇದರಿಂದ ನಿಮ್ಮಿಬ್ಬರಿಗೆ ತೊಂದರೆಯಾಗಲಿದೆ’ ಎಂದು ಜೀವ ಬೆದರಿಕೆಯೊಡ್ಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ .

ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಈ ರೀತಿ ಕೊಲೆ ಬೆದರಿಕೆ ಹಾಕುವ ಮೂಲಕ ಅಡ್ಡಿಪಡಿಸಿರುವುದರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

Ad Widget

Ad Widget

ಈ ಕುರಿತು ಕಡಬ ಹಾಗೂ ಪುತ್ತೂರಿನ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ನವೀನ್ ಭಂಡಾರಿ ಅವರು ಬೆಳ್ಳಾರೆ ಪೊಲೀಸ್‌ ಠಾಣೆಗೆ ನೀಡಿದ ದೂರಿನಂತೆ ‘ಸರಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಮತ್ತು ಕೊಲೆ ಬೆದರಿಕೆ’ ಆರೋಪದಡಿ ಪ್ರಕರಣ ದಾಖಲಾಗಿದೆ.

Ad Widget

Leave a Reply

Recent Posts

Belthangady | ಕುತಂತ್ರಿ ಬುದ್ದಿ ಬಿಟ್ಟು ಚುನಾವಣೆಯನ್ನು ಚುನಾವಣೆಯ ರೀತಿ ಎದುರಿಸಿ – ಜನಾರ್ಧನ ಪೂಜಾರಿಗೆ ಹಿಂದೂ ವಿರೋಧಿಯೆಂದು ಅಪಪ್ರಚಾರ ಮಾಡಿದ ತಂಡವೇ ಬೆಳ್ತಂಗಡಿಯ ರಕ್ಷಿತ್ ಶಿವರಾಂ ಗೂ ಮಾಡುತ್ತಿದೆ : ಖಡಕ್ ಎಚ್ಚರಿಕೆ ಕೊಟ್ಟ ‘ನಮ ಬಿಲ್ಲವೆರ್’

error: Content is protected !!
%d bloggers like this: