Ad Widget

Jolly Ride | ಬೆಳ್ತಂಗಡಿ: ಕದ್ದ ಬೈಕಿನಲ್ಲಿ ಯುವಕ-ಯುವತಿಯ ಜಾಲಿ ರೈಡ್

Screenshot_20221218-101040_Facebook
Ad Widget

Ad Widget

Ad Widget

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಖಾಸಗಿ ಬಸ್‌ ನಿಲ್ದಾಣದ ಬಳಿ ಕಾಲೇಜು ವಿದ್ಯಾರ್ಥಿಯೋರ್ವ ನಿಲ್ಲಿಸಿದ್ದ ಬೈಕ್‌ ಕಳ್ಳತನ ಮಾಡಿದ ಘಟನೆ ಡಿ. 16ರಂದು ನಡೆದಿದೆ. ಕದ್ದ ಬೈಕಿನಲ್ಲಿ ಯುವಕ ಯುವತಿ ಜಾಲಿ ರೈಡ್(Jolly Ride) ಹೋಗಿದ್ದಾರೆ ಎನ್ನಲಾದ ಸಿಸಿಟಿವಿ ದೃಶ್ಯ ವೈರಲ್ ಆಗಿದೆ

Ad Widget

Ad Widget

Ad Widget

Ad Widget

ಮೂಡುಬಿದಿರೆ ಖಾಸಗಿ ಕಾಲೇಜೊಂದರ ವಿದ್ಯಾರ್ಥಿ ಶಿಶಿಲ ಗ್ರಾಮದ ಕಂಚಿನಡ್ಕ ನಿವಾಸಿ ಜೀವನ್‌ ಅವರು ಸಂಬಂಧಿಕರ ಮನೆಯಾದ ಧರ್ಮಸ್ಥಳದಿಂದ ಕಾಲೇಜು ತೆರಳುತ್ತಿದ್ದರು. ಅಂತೆಯೇ ಡಿ. 16ರಂದು ಬೆಳಗ್ಗೆ ಧರ್ಮಸ್ಥಳದಲ್ಲಿ ತನ್ನ ಬೈಕ್‌ ಅನ್ನು ನಿಲುಗಡೆಗೊಳಿಸಿ ಕಾಲೇಜಿಗೆ ತೆರಳಿದ್ದರು.

Ad Widget

Ad Widget

Ad Widget

Ad Widget

ಮಧ್ಯಾಹ್ನ ಕಾಲೇಜಿನಿಂದ ವಾಪಸ್‌ ಬಂದಾಗ ಬೈಕ್‌ ನಾಪತ್ತೆಯಾಗಿತ್ತು. ಕಳವಾದ ಬೈಕ್‌ ಮೌಲ್ಯ ಅಂದಾಜು 15,000 ರೂ. ಆಗಬಹುದೆಂದು ಅಂದಾಜಿಸಲಾಗಿದ್ದು, ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕದ್ದ ಬೈಕ್‌ನಲ್ಲಿ ಓರ್ವ ಹುಡುಗ ಹಾಗೂ ಹುಡುಗಿ ಹೋಗುತ್ತಿರುವ ದೃಶ್ಯ ಸಿಸಿ ಕೆಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Ad Widget

Ad Widget
ವಸಂತ ಬಂಗೇರರ ಭಾಷಣ
Ad Widget

Leave a Reply

Recent Posts

error: Content is protected !!
%d bloggers like this: