ಬೆಂಗಳೂರು: ಇತ್ತೀಚೆಗೆ ಕರಾವಳಿ ಮೂಲದ ಬೇಕರಿ ವ್ಯವಹಾರ ನಡೆಸುತ್ತಿದ್ದ ಬೆಂಗಳೂರಿನ ಯುವಕರಿಗೆ ಪುಡಿ ರೌಡಿಗಳು ಹಲ್ಲೆಗೈದ ಬಗ್ಗೆ ಭಾರಿ ಆಕ್ರೋಶ ತಣ್ಣಗಾಗುವ ಮೊದಲೇ ಬೆಂಗಳೂರಿನಲ್ಲಿ (Bangalore Rowdism) ಬೆಳ್ತಂಗಡಿಯ (Belthangady) ಮೀನಿನ ವ್ಯಾಪಾರಿಗಳಿಗೆ ರೌಡಿಯೋರ್ವ ತಲುವಾರು ದಾಳಿಯಾಗಿದ್ದು, ಯುವಕ ಅದೃಷ್ಟವಶಾತ್ ಪಾರಗಿದ್ದಾನೆ.
ಮೀನಿನ ಅಂಗಡಿ ವ್ಯವಹಾರ ನಡೆಸುವ ಬೆಳ್ತಂಗಡಿ ಮೂಲದ ಹುಡುಗರ ಮೇಲೆ ಲೋಕಲ್ ಪುಡಿ ರೌಡಿಯೋರ್ವ ಡಿ.17ರಂದು ತಲುವಾರು ಬೀಸಿ ವಾಹನಗಳನ್ನು ಜಖಂಗೊಳಿಸಿದ್ದಾನೆ.
ಬಣಸವಾಡಿ ಪೊಲೀಸ್ ಠಾಣಾ ಸರಹದ್ದಿನಲ್ಲಿ ಈ ಘಟನೆ ನಡೆದಿದ್ದು, ರೌಡಿ ಹಫ್ತಾಕ್ಕಾಗಿ ಬೇಡಿಕೆ ಇಟ್ಟಿದ್ದ ನೀಡದ್ದಕ್ಕೆ ತಲುವಾರು ಬೀಸಿದ್ದಾನೆ ಎನ್ನಲಾಗಿದೆ.
ಪುಡಿ ರೌಡಿಯ ರಂಪಾಟ ಸಿಸಿಟಿವಿ ನಲ್ಲಿ ಸೆರೆಯಾಗಿದ್ದು, ತಲುವಾರು ಬೀಸಿದಾಗ ಯುವಕ ಅದೃಷ್ಟವಶಾತ್ ಪಾರಾಗಿದ್ದಾನೆ. ನಂತರ ಎರಡು ಸ್ಕೂಟರನ್ನು ಜಖಂಗೊಳಿಸಿದ ಪುಡಿ ರೌಡಿ, ಮೀನು ಸಾಗಟದ ಟ್ರೇಗಳನ್ನೆಲ್ಲ ಪುಡಿಗೈದಿದ್ದಾನೆ.
ಬೆಂಗಳೂರಿನ ರೌಡಿಶೀಟರ್ ಗಳ ಹಾವಾಳಿ ವಿಪರೀತ ಏರಿಕೆಯಾಗುತ್ತಿದೆ. ಒಮ್ಮೆ ರೌಡಿಗಳು ಬಂಧನವಾಗ್ತಾರೆ, ಹೊರಗೆ ಬರ್ತಾರೆ ಮತ್ತೆ ಅದೇ ಕಸುಬು ಶುರು ಮಾಡ್ತಾರೆ.ರೌಡಿ ಶೀಟರ್ ಎಂಬ ಮುದ್ರೆ ಬಿದ್ದರೆ ಅಂತೂ ಏರಿಯಾದಲ್ಲಿ ಇವರ ಖದರೇ ಬೇರೆಯಿರುತ್ತದೆ ನಂತರ ರಾಜಕೀಯ ಬೆಂಗಾವಲು ಸಿಗ್ತದೆ ಎನ್ನುವ ಉದ್ದೇಶದಿಂದಲೇ ಈ ಫೀಲ್ಡಿಗೆ ಇಳಿಯುತ್ತಾರೆ. ಇಂತಹ ರೌಡಿಗಳ ವಿರುದ್ಧ ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು.
ಹಲವು ಘಟನೆಗಳಾದರೂ ಸರ್ಕಾರ ಮೌನವಾಗಿರುವುದರ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.