ಪುತ್ತೂರು:ಹಾರಾಡಿ ಶಾಲಾ ಬಳಿ ರಸ್ತೆ ದಾಟುತ್ತಿದ್ದ ವಿದ್ಯಾರ್ಥಿಯೊಬ್ಬರಿಗೆ ಪುತ್ತೂರು ಶಾಸಕರ ಕಾರು ಡಿಕ್ಕಿಯಾದ (Puttur Accident) ಘಟನೆ ಡಿ.16 ರಂದು ನಡೆದಿದೆ.
ಪುತ್ತೂರಿನ ಪಡೀಲು ಸಮೀಪದ ಹಾರಾಡಿ ಶಾಲಾ ವಿದ್ಯಾರ್ಥಿ ಶಾಲೆಯ ಬಳಿ ರಸ್ತೆ ದಾಟುತ್ತಿದ್ದ ವೇಳೆ ಉಪ್ಪಿನಂಗಡಿ ಕಡೆಯಿಂದ ಪುತ್ತೂರಿಗೆ ಬರುತ್ತಿದ್ದ ಶಾಸಕ ಸಂಜೀವ ಮಠಂದೂರು ಅವರ ಕಾರು ಆತನಿಗೆ ಡಿಕ್ಕಿಯಾಗಿದೆ.
ಗಾಯಗೊಂಡ ವಿದ್ಯಾರ್ಥಿಯನ್ನು ಅದೇ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿ ಬಳಿಕ ಶಾಲೆಗೆ ಬಿಡಲಾಗಿದೆ ಎಂದು ತಿಳಿದು ಬಂದಿದೆ.
ಪುತ್ತೂರು – ಉಪ್ಪಿನಂಗಡಿ ರಸ್ತೆ ಚತುಷ್ಪಥವಾದ ಬಳಿಕ ವಾಹನ ದಟ್ಟಣೆ ಹೆಚ್ಚಾಗಿದ್ದು ಶಾಲಾ ವಿದ್ಯಾರ್ಥಿಗಳು ರಸ್ತೆ ದಾಟುವ ವೇಳೆ ರಸ್ತೆ ವಿಭಜಕದಲ್ಲಿ ಗೊಂದಲವುಂಟಾಗಿ ಅತ್ತಿಂದಿತ್ತ ಬರುವ ವಾಹನಗಳನ್ನು ಗಮನಿಸಲಾಗದೆ ಅನೇಕ ಬಾರಿ ಸಣ್ಣಪುಟ್ಟ ಅಪಘಾತಗಳಾಗಿರುವುದರಿಂದ ಈ ಭಾಗದಲ್ಲಿ ವಾಹನಗಳ ವೇಗ ನಿಯಂತ್ರಣಕ್ಕೆ ಹಂಪ್ಸ್ ಅಳವಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.