ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯಲ್ಲಿ ನೈತಿಕ ಪೊಲೀಸ್ ಗಿರಿ(Moral Policing) ಪ್ರಕರಣ ಹೆಚ್ಚಾಗುತ್ತಿದೆ. ಕಳೆದ ಎರಡು ವಾರಗಳ ಅಂತರದಲ್ಲಿ ಈ ರೀತಿಯ ಆರು ಪ್ರಕರಣಗಳು ವರದಿಯಾಗಿದೆ. ಡಿ 15 ರಂದು ರಾತ್ರಿ ಸ್ಲೀಪರ್ ಕೋಚ್ ಬಸ್ನಲ್ಲಿ ಅಕ್ಕಪಕ್ಕದ ಸೀಟ್ ನಲ್ಲಿ ಜತೆಯಾಗಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಹಿಂದೂ-ಮುಸ್ಲಿಂ(Hindu Muslim Couple) ಜೋಡಿಯನ್ನು ಭಜರಂಗದಳ(Bajrang Dal)ದ ಗುಂಪೊಂದು ತಡ ರಾತ್ರಿ ತಡೆದಿದೆ. ಈ ವೇಳೆ ಹಿಂದೂ ಯುವತಿ ಈ ಕುರಿತು ಬಂಟ್ವಾಳ ಠಾಣೆ ಪೊಲೀಸರು ಬಸ್ಸು ತಡೆದವರ ವಿರುದ್ದ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ
ಡಿ 15 ರಂದು ರಾತ್ರಿ ಭಟ್ಕಳ ಮೂಲದ ನ್ಯಾಯವಾದಿ ಮಹಮ್ಮದ್ ರಾಯಿಫ್ ಹಾಗೂ ನಿಧಿ ಶೆಟ್ಟಿ ಎಂಬವರು ಜತೆಯಾಗಿ ದುರ್ಗಾಂಬ ಟ್ರಾವೆಲ್ಸ್ ನ ಸ್ಲೀಪರ್ ಕೋಚ್ ಬಸ್ಸಿನಲ್ಲಿ ಬೆಂಗಳೂರಿಗೆ ಜತೆಯಾಗಿ ಪ್ರಯಾಣಿಸುತ್ತಿದ್ದರು. ಈ ಮಾಹಿತಿಯನ್ನು ಬಸ್ಸಿನಲ್ಲಿದ್ದವರಲ್ಲಿ ಒಬ್ಬರು, ಬಜರಂಗದಳದ ಕಾರ್ಯಕರ್ತರೊಬ್ಬರಿಗೆ ಪೋನ್ ಮೂಲಕ ತಿಳಿಸಿದ್ದಾರೆ ಎನ್ನಲಾಗಿದೆ. ಕೂಡಲೇ ಕಾರ್ಯಪ್ರವೃತ್ತರಾದ ಬಜರಂಗದಳದ ಕಾರ್ಯಕರ್ತರು ಮಂಗಳುರು ನಗರದ ಪಂಪ್ ವೆಲ್ ಬಳಿ ತಡೆಯಲು ಯತ್ನಿಸಿ ವಿಫಲರಾಗಿದ್ದಾರೆ.
ಹೀಗಾಗಿ ಅವರು ತಕ್ಷಣವೇ ಕಲ್ಲಡ್ಕದ ಭಜರಂಗದಳ ಕಾರ್ಯಕರ್ತರಿಗೆ ಮಾಹಿತಿ ರವಾನಿಸಿದ್ದಾರೆ. ಕಲ್ಲಡ್ಡದವರು ದುರ್ಗಾಂಬ ಬಸ್ ಅನ್ನು ಬಂಟ್ವಾಳ ತಾಲೂಕಿನ ಮಾಣಿ ಸಮೀಪದ ದಾಸಕೋಡಿ ಎಂಬಲ್ಲಿ ತಡ ರಾತ್ರಿ ತಡೆದು, ಇಬ್ಬರನ್ನೂ ಇಳಿಯುವಂತೆ ಬೆದರಿಸಿದ್ದಾರೆ. ಈ ವೇಳೆ ಯುವಕ-ಯುವತಿ ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿಯಾಗಿದೆ. ಯುವತಿಯೂ ಬಜರಂಗದಳದ ಕಾರ್ಯಕರ್ತರನ್ನು ತೀವ್ರವಾಗಿ ತರಾಟಗೆ ತೆಗೆದುಕೊಂಡಿದ್ದಾರೆ. ಬಸ್ಸಿನ ಟಿಕೆಟ್ ಹಣ ನೀವು ಕೊಟ್ಟಿಲ್ಲ , ನನ್ನ ಹಣದಲ್ಲಿ ನಾನು ಪ್ರಯಾಣಿಸುತ್ತಿರುವುದು ಹುಚ್ಚಾಟ ಆಡಬೇಡಿ ಎಂದು ಕಾರ್ಯಕರ್ತರಿಗೆ ಯುವತಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇದೆ ವೇಳೆ ಭಜರಂಗದಳ ಕಾರ್ಯಕರ್ತರು ಯುವತಿಗೆ ಬೈದು ಬುದ್ಧಿ ಹೇಳುವ ಯತ್ನ ಮಾಡಿದ್ದಾರೆ. ಅಲ್ಲದೇ ಜೋಡಿಯ ಜತೆ ಅವರು ಗಲಾಟೆ ಮಾಡಿದ್ದಾರೆ. ಈ ವೇಳೆ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಮಾಹಿತಿ ಪಡೆದ ಸ್ಥಳಕ್ಕಾಗಮಿಸಿದ ಪೊಲೀಸರು ಹಿಂದೂ ಕಾರ್ಯಕರ್ತರು ಹಾಗೂ ಯುವಕ, ಯುವತಿಯನ್ನು ಠಾಣೆಗೆ ಕರೆದೊಯ್ದು, ಪೋಷಕರಿಗೆ ಮಾಹಿತಿ ನೀಡಿದ್ದಾರೆ. ನಂತರ ಮನೆಯವರ ಜತೆಗೆ ಯುವತಿಯನ್ನು ಕಳುಹಿಸಲಾಗಿದೆ ಎಂದು ವರದಿಯಾಗಿದೆ. ಇತ್ತಂಡಗಳು ಠಾಣೆಯಲ್ಲಿ ದೂರು ನೀಡಿಲ್ಲ ಎಂದು ವರದಿಯಾಗಿದೆ.
ಯಾರೂ ದೂರು ನೀಡಲು ಮಂದೆ ಬಾರದ ಕಾರಣ ಪೊಲೀಸರು ಸ್ವ ಪ್ರೇರಣೆಯಿಂದ ಅಪರಿಚಿತ ವ್ಯಕ್ತಿಗಳ ವಿರುದ್ದ ದೂರು ನೀಡಿದ್ದಾರೆಂದು ಎಸ್ಪಿ ಋಷಿಕೇಷ್ ಸೋನಾವಣೆ ಮಾಹಿತಿ ನೀಡಿರುವುದಾಗಿ ಪತ್ರಿಕೆಯೊಂದು ವರದಿ ಮಾಡಿದೆ.
ಆಕ್ರೋಶ :
ಹಿಂದೂ ಸಂಘಟನೆಯ ಈ ಕೃತ್ಯಕ್ಕೆ ಅವರ ಬೆಂಬಲಿಗರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ ಮಾತ್ರವಲ್ಲದೇ, ಘಟನೆಯ ಪೋಟೊ ಮತ್ತು ವಿಡಿಯೋ , ಜತೆಯಲ್ಲಿ ಪ್ರಯಾಣಿಸುತ್ತಿದ್ದ ಜೋಡಿಯ ಗುರುತು ಚೀಟಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಮತ್ತು ಲವ್ ಜಿಹಾದ್ ಎಂದು ಆರೋಪಿಸಿದ್ದಾರೆ. ಆದರೇ ಇನ್ನೊಂದೆಡೆ ಸಾಮಾಜಿಕ ಕಾರ್ಯಕರ್ತರ ವಲಯದಿಂದ ಇದು ಸೇರಿದಂತೆ, ಜಿಲ್ಲೆಯಲ್ಲಿ ನಡೆಯುತ್ತಿರುವ ಈ ರೀತಿಯ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂವಿಧಾನ ಬದ್ದ ಆಡಳಿತವಿದೆಯೇ? ಅಥಾವ ʼಕಾಡಿನ ಆಡಳಿತʼ ( ಜಂಗಲ್ ರಾಜ್ ) ಇದೇಯೇ ? ಎಂದು ಅವರು ಪ್ರಶ್ನಿಸಿದ್ದಾರೆ. ಜಿಲ್ಲೆಯಲ್ಲಿ ನಿರಂತರವಾಗಿ ಈ ರೀತಿಯ ಕೃತ್ಯಗಳು ನಡೆಯುತ್ತಿದ್ದರೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಇಲಾಖೆಯ ನಿಯಮಗಳಿಗೆ ಬದ್ದವಾಗಿ ಕಾರ್ಯ ನಿರ್ವಹಿಸದೆ ಸಂಘದ ಕಛೇರಿಯಿಂದ ಸೂಚನೆಗಳನ್ನು ಪಡೆದು ಕಾರ್ಯ ನಿರ್ವಹಿಸುತ್ತಿದ್ದಾರೆಂದು ಆರೋಪಿಸಿದ್ದಾರೆ.
ಖ್ಯಾತ ವೈದ್ಯ ಹಾಗೂ ಮಂಗಳೂರಿನ ಸಿವಿಲ್ ಸೊಸೈಟಿಯ ಪ್ರಖ್ಯಾತ ಹೆಸರಾದ ಶ್ರೀನಿವಾಸ ಕಕ್ಕಿಲಾಯರವರು ಈ ಬಗ್ಗೆ ಟ್ವೀಟ್ ಮಾಡಿದ್ದು ದಾಳಿಕೋರರಿಗೆ ಮಾಹಿತಿ ನೀಡಿದ ಹಾಗೂ ಈ ಮೂಲಕ ಟಿಕೆಟ್ ಪಡೆದು ಪ್ರಯಾಣಿಸುತ್ತಿದ್ದ ಪ್ರಯಾಣಿಕರನ್ನು ಬಲವಂತವಾಗಿ ಬಸ್ಸಿನಿಂದ ಇಳಿಯುವಂತೆ ಮಾಡಿ ಕೆಎಂವಿ ನಿಯಮಗಳನ್ನು ಉಲ್ಲಂಘಿಸಲು ಸಹಕರಿಸಿದ ಬಸ್ ಕಂಡಕ್ಟರ್ಗಳು, ಚಾಲಕರು ಮತ್ತು ಬಸ್ಸಿನ ಮಾಲೀಕರ ವಿರುದ್ಧ ಮತ್ತು ಸಂತ್ರಸ್ತರ ಐಡಿ ಕಾರ್ಡ್ಗಳನ್ನು ಸೋರಿಕೆ ಮಾಡಿದ ಮತ್ತು ಆ ಮೂಲಕ ಅವರಿಗೆ ಅಪಾಯ ತಂದೊಡ್ಡಿದವರ ವಿರುದ್ಧ ಏಕೆ ಯಾವುದೇ ಕ್ರಮ ಕೈಗೊಂಡಿಲ್ಲ? ಎಂದು ಅವರು ಮಂಗಳೂರು ಕಮೀಷನರ್ , ಮುಖ್ಯ ಮಂತ್ರಿ ಬೊಮ್ಮಾಯಿ ಹಾಗೂ ಕರ್ನಾಟಕ ರಸ್ತೆ ಸಾರಿಗೆ ಇಲಾಖೆಯನ್ನು ಪ್ರಶ್ನಿಸಿದ್ದಾರೆ.
–@compolmlr –@tdkarnataka –@BSBommai
— Dr. Srinivas Kakkilaya MBBS MD (@skakkilaya) December 16, 2022
Why no action against bus conductors, drivers & owners, who are informing the attackers & forcibly deboarding the ticketed passengers, thereby violating KMV Rules, and against those who have leaked the ID cards of victims & endangered them? https://t.co/kgz2AwXHt5