ಪುತ್ತೂರು : ಡಿ 15 : ಮೂರು ದಿನಗಳ ಹಿಂದೆ ಭಾದಿಸಿದ ಜ್ವರ ಗುಣವಾಗದೆ, ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟ ಧಾರುಣ ಘಟನೆ ಡಿ.15 ರ ತಡ ರಾತ್ರಿ ಪುತ್ತೂರಿನಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯ 9 ನೇ ತರಗತಿ ವಿದ್ಯಾರ್ಥಿನಿ ಅನುಶ್ರೀ (15) ಮೃತ ದುರ್ದೈವಿ.
ಅನುಶ್ರೀಯವರು ಕಾವು ನಿವಾಸಿ ಧರ್ಮಲಿಂಗಮ್ ಹಾಗೂ ತಮಿಳ್ ಸೆಲ್ವಿ ದಂಪತಿಗಳ ಪುತ್ರಿ. ಮೂರು ದಿನಗಳ ಹಿಂದೆ ಅನುಶ್ರೀಯವರಿಗೆ ಜ್ವರ ಕಾಣಿಸಿದ್ದು. ಇದಕ್ಕೆ ಪುತ್ತೂರಿನ ಆಸ್ಪತ್ರೆಯೊಂದದರಿಂದ ಔಷಧಿ ಪಡೆದಿದ್ದರು. ಡಿ.15 ರಂದು ರಾತ್ರಿ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆಯಲ್ಲಿ ಪುತ್ತೂರು ಆಸ್ಪತ್ರೆಗೆ ಕರೆ ತರುವಾಗ ಆಕೆ ಮೃತಪಟ್ಟಿದ್ದಾರೆ.
ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಮೃತಪಟ್ಟ ಹಿನ್ನಲೆಯಲ್ಲಿ ಸಂತಾಪ ಸೂಚಿಸಿ ನುಡಿನಮನ ಸಲ್ಲಿಸಲಾಯಿತು. ಶಾಲಾ ಉಪ ಪ್ರಾಂಶುಪಾಲ ವಸಂತ ಮೂಲ್ಯ ಅವರು ರಜೆ ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ಶಾಲಾಭಿವೃದ್ದಿ ಸಮಿತಿ ಕಾರ್ಯಾಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಸಹಿತ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.