ವಿಟ್ಲ: ಸರ್ಕಾರದ ಅನುದಾನಕ್ಕಾಗಿ ಕಾದು ಕೂತ ಊರ ಜನತೆಗೆ ರೈತ ಸಂಘ ನೆರವಿಗೆ ಬಂದು ಕೋಟಿ ರೂಪಾಯಿ ಅನುದಾನವನ್ನು ರೈತ ಸಂಘವೇ ತರಿಸಿದ್ದು ಅದನ್ನು ಉದ್ಘಾಟಿಸಲು ಶಾಸಕರು ಬರದಿದ್ದಾಗ ರೈತರ ಮೂಲಕವೇ ಉದ್ಘಾಟಿಸಿದ ಘಟನೆ ದಕ್ಷಿಣ ಕನ್ನಡದ ಪುತ್ತೂರು ವಿಧಾನಸಭಾ (Puttur) ಕ್ಷೇತ್ರದಲ್ಲಿ ನಡೆದಿದೆ.
ಗ್ರಾಮೀಣಾಭಿವೃದ್ಧಿ ಇಲಾಖೆಯ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ 2.63ಕೋಟಿ ವೆಚ್ಚದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ವಿಟ್ಲದ ಕೃಷ್ಣಮೂಲೆ – ಬರೆಂಜ – ಕುರುಡುಕಟ್ಟೆ ಸಂಪರ್ಕ ರಸ್ತೆ ಕಾಂಗ್ರೀಟೀಕರಣಕ್ಕೆ ಪ್ರಗತಿಪರ ಕೃಷಿಕ ಜಗನ್ನಾಥ ರೈ ಪರಿಯಾಲು ಶಿಲಾನ್ಯಾಸ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಮಾತನಾಡಿ 70ವರ್ಷ ಇತಿಹಾಸ ಇರುವ ರಸ್ತೆಗೆ ಯಾವ ಇಲಾಖೆಯಿಂದಲೂ ಅನುದಾನ ಬರದ ಸಂದರ್ಭ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಗ್ರಾಮೀಣ ಇಲಾಖೆಯಿಂದ ದೊಡ್ಡ ಮೊತ್ತವನ್ನು ತರಲಾಗಿದೆ. ಆದರೆ ಶಿಲಾನ್ಯಾಸಕ್ಕೆ ಹಲವು ದಿನಗಳನ್ನು ನೀಡಿ, ನಿಗದಿತ ದಿನಾಂಕದಂದೂ ಶಾಸಕರು ಬರದ ಕಾರಣ ಗುದ್ದಲಿಪೂಜೆ ನಡೆಸಬೇಕಾಯಿತು ಎಂದು ತಿಳಿಸಿದರು.
ಹಿರಿಯ ಪ್ರಗತಿಪರ ಕೃಷಿಕ ಮೌರೀಸ್ ತೆಲೀಸ್ ದೇವರಗುಂಡಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಾಯಕ ರಮೇಶ್ ನಾಯ್ಕ ಕೆಲ್ಲಾಲಿ ಅವರನ್ನು ಸನ್ಮಾನಿಸಲಾಯಿತು.
ಬಾಲಕೃಷ್ಣ ರೈ ಬೈಲುಗುತ್ತು, ಶೀಲಾ ಮೊಂತೆರೊ, ಬಾಲಕೃಷ್ಣ ಗೌಡ, ಸುಭೋದ್ ರೈ, ಜಗನ್ನಾಥ ಶೆಟ್ಟಿ ಕೋಡಂದೂರು, ಆನಂದ ನಾಯ್ಕ ಮಲ್ಲಿಪ್ಪಾಡಿ, ಕುಶಾಲಪ್ಪ ಮಲ್ಲಿಪ್ಪಾಡಿ, ಬಾಲಕೃಷ್ಣ ಹಿತ್ತಿಲು, ಮೌರೀಸ್ ಡಿಸೋಜ, ಲಿಯೋ ಡಿಸೋಜ, ಮಹಮ್ಮದ್ ಸಿರಾಜ್ ಮಣಿಲ, ಕೃಷ್ಣ ಶೆಟ್ಟಿ ಬರೆಂಜ, ಮನೋಜ್ ರೈ ಬೈಲುಗುತ್ತು, ಕೃಷ್ಣ ಶೆಟ್ಟಿ, ನಾರಾಯಣ ನಾಯ್ಕ, ದಿನೇಶ್ ನಾಯ್ಕ, ಮದುಸೂದನ ಗೌಡ, ವೆಂಕಪ್ಪ ನಾಯ್ಕ ಮಲ್ಲಿಪ್ಪಾಡಿ, ಶಿವಚಂದ್ರ, ಜನಾರ್ಧನ ಪಟಿಕಲ್ಲು, ಸದಾನಂದ ರೈ ಬೈಲುಗುತ್ತು, ಕಮಲ ನಾಯ್ಕ ಮಲ್ಲಿಪ್ಪಾಡಿ, ಸುಜಾತ ಮಲ್ಲಿಪ್ಪಾಡಿ, ಮಲ್ಲಿಕಾ ಮಲ್ಲಿಪ್ಪಾಡಿ, ಹೇಮಾವತಿ ಬಳಂತಿಮಾರು, ಯಮುನಾ ಶೆಟ್ಟಿ ಕೃಷ್ಣ ಮೂಲೆ ಮತ್ತಿತರರು ಉಪಸ್ಥಿತರಿದ್ದರು.