ಮಂಗಳೂರು: ಸರ್ಕಾರಿ ಜಾಗದಲ್ಲಿರುವ ಆಟದ ಮೈದಾನ ವನ್ನು ಕಬಳಿಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸದ ವೇಳೆ ಅಲ್ಲಿನ ಕಾರ್ಪೋರೇಟರ್ ರವರ ಪತಿ ಸ್ಥಳೀಯರನ್ನು ದಬಾಯಿಸಿರುವ ಘಟನೆ ಮಂಗಳೂರು ಹೊರವಲಯದ ಪಚ್ಚನಾಡಿಯ ಕಾರ್ಮಿಕ ನಗರದಲ್ಲಿ ನಡೆದಿದೆ. ಕಾರ್ಪೋರೇಟರ್ ಅವರ ಗಂಡ ಹಾಗೂ ಸಾರ್ವಜನಿಕರ ನಡುವಿನ ವಾಗ್ವಾದದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಚ್ಚನಾಡಿಯ ಕಾರ್ಮಿಕ ನಗರದಲ್ಲಿ ಎರಡೆಕರೆ ಸರ್ಕಾರಿ ಜಾಗವನ್ನು ಆಟದ ಮೈದಾನ ಮಾಡಲಾಗಿತ್ತು. ಇದೀಗ ಆ ಜಾಗದಲ್ಲಿ ಏಕಾಏಕಿ ಅಕ್ರಮ ಮನೆ ನಿರ್ಮಾಣ ಮಾಡುವ ಮೂಲಕ ಆಟದ ಮೈದಾನ ಹಾಗೂ ಸರ್ಕಾರಿ ಜಾಗವನ್ನು ಕಬಳಿಸುವ ಹುನ್ನಾರ ನಡೆಯುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಆಕ್ರಮ ಕಟ್ಟಡ ನಿರ್ಮಾಣಕ್ಕೆ ಆಕ್ಷೇಪಿಸಿ ಸಾರ್ವಜನಿಕರು ಕಾಮಗಾರಿಗೆ ತಡೆಯೊಡ್ಡಲು ಯತ್ನಿಸಿದಾಗ ಪಚ್ಚನಾಡಿ ಕಾರ್ಪೊರೇಟರ್ ಸಂಗೀತ ನಾಯಕ್ ಹಾಗೂ ಪತಿ ಸ್ಥಳಕ್ಕೆ ಆಗಮಿಸಿದ್ದಾರೆ. ಈ ವೇಳೆ ಕಾರ್ಪೋರೇಟರ್ ಪತಿ ಸ್ಥಳೀಯರೊಂದಿಗೆ ಗಲಾಟೆ ಮಾಡಿದ್ದಾರೆ. ಬಳಿಕ ಪರಿಸ್ಥಿತಿ ನಿಯಂತ್ರಿಸಿ ಮೈದಾನವಾಗಿಯೇ ಉಳಿಸುವ ಭರವಸೆಯನ್ನು ಕಾರ್ಪೋರೇಟರ್ ಸಂಗೀತ ನೀಡಿದರು. ಮನೆ ನಿರ್ಮಾಣವಾಗುವ ವಿಷಯ ನನ್ನ ಗಮನಕ್ಕೆ ಬಂದಿಲ್ಲ ಎಂದೂ ಹೇಳಿದರು.
ವಿಡಿಯೋ ವೈರಲ್