ಬಂಟ್ವಾಳ : ಡಿ 15 : ಬಸ್ಸಿನಲ್ಲಿ ನಿಂತು ಪ್ರಯಾಣಿಸುತ್ತಿದ್ದ ಶಾಲಾ ವಿದ್ಯಾರ್ಥಿನಿಯ ಬ್ಯಾಗ್ ಹಿಡಿದು ಮರಳಿಸಿದ ಪ್ರಯಾಣಿಕನಿಗೆ, ಎರಡು ದಿನಗಳ ಬಳಿಕ ಆ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದಾನೆಂದು ಆರೋಪಿಸಿ ಮೂವರು ಯುವಕರು ಹಲ್ಲೆ ನಡೆಸಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ತಾಲೂಕಿನ ಬಿ-ಮೂಡ ಗ್ರಾಮದ ತಲಪಾಡಿ ಬಳಿ ಸಾರಾ ಪ್ಲಾಟ್ ನಿವಾಸಿ, ದಿ. ಕುಂಞಮೋನು ಎಂಬವರ ಪುತ್ರ ಗಾರೆ ಕಾರ್ಮಿಕ ಇಸಾಕ್ (43 ) ಹಲ್ಲೆಗೊಳಗಾದವರು. ಮೂವರು ಅಪರಿಚಿತರು ಬಂಟ್ವಾಳದ ರಾಯಿ ಎಂಬಲ್ಲಿ ಡಿ 14 ರಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಮೂವರು ಅಪರಿಚಿತರು ಬಸ್ಸಿನಿಂದ ಇಳಿಸಿ ಹಲ್ಲೆ ಮಾಡಿದ್ದಾರೆಂದು ಇಸಾಕ್ ದೂರಿನಲ್ಲಿ ತಿಳಿಸಿದ್ದಾರೆ. ಅಪರಿಚಿತ ಆರೋಪಿಗಳ ವಿರುದ್ದ IPC ಕಲಂ 504,506,323,324,342,352 ಜೊತೆಗೆ 34 ರಂತೆ ಪ್ರಕರಣ ದಾಖಲಾಗಿದೆ.
ದೂರಿನಲ್ಲಿ ಏನಿದೆ ?
ಹಲ್ಲೆ ಕೃತ್ಯ ನಡೆದ ಎರಡು ದಿನಗಳ ಹಿಂದೆ ಮಹಾಗಣೇಶ್ ಎಂಬ ಖಾಸಗಿ ಬಸ್ಸಿನಲ್ಲಿ ಇಸಾಕ್ ರವರು ಬಿ.ಸಿ.ರೋಡಿನಿಂದ ಮೂಡಬಿದ್ರೆಗೆ ಪ್ರಯಾಣಿಸುತ್ತಿದ್ದರು. ಆ ಬಸ್ಸಿನಲ್ಲಿ ನಿಂತು ಪ್ರಯಾಣಿಸುತ್ತಿದ್ದ ಶಾಲಾ ವಿದ್ಯಾರ್ಥಿನಿಯೊಬ್ಬಳು ಅವಳ ಸ್ಕೂಲ್ ಬ್ಯಾಗನ್ನು ಹಿಡಿದುಕೊಳ್ಳಲು ಇಸಾಕ್ ಬಳಿ ನೀಡಿದ್ದು, ಅದನ್ನು ಪಡೆದುಕೊಂಡ ಅವರು ವಿದ್ಯಾರ್ಥಿನಿಯೂ ಬಸ್ಸಿನಿಂದ ಇಳಿಯುವ ವೇಳೆ ವಾಪಸ್ಸು ನೀಡಿರುತ್ತಾರೆ.
ಇದಾದ ಎರಡು ದಿನಗಳ ಬಳಿಕ, ಡಿ 14 ರಂದು ಬೆಳಿಗ್ಗೆ 7.25ಕ್ಕೆ ಗಂಟಲ್ ಕಟ್ಟೆಗೆ ಹೋಗಲು ಬಿ.ಸಿ.ರೋಡಿನಲ್ಲಿ ಅದೇ ಮಹಾಗಣೇಶ್ ಬಸ್ಸು ಹತ್ತಿದ್ದಾರೆ. ಬಸ್ಸು 8.10 ರ ಸುಮಾರಿಗೆ ಕುದ್ಕೋಳಿ ಎಂಬಲ್ಲಿಗೆ ತಲುಪಿದಾಗ , ಬಸ್ಸಿನಲ್ಲಿದ್ದ ಆರೊಫಿಗಳ ಪೈಕಿ ಓರ್ವ, ಇಸಾಕ್ ಬಳಿ ಬಂದು ಹುಡಗಿಯರಿಗೆ ತೊಂದರೆ ಕೊಡುತ್ತೀಯಾ ಎಂದು ಪ್ರಶ್ನಿಸಿ, ಅವಾಚ್ಯ ಶಭ್ಧಗಳಿಂದ ಬೈದು ಬಸ್ಸಿನಿಂದ ಇಳಿಯುವಂತೆ ಸೂಚಿಸಿದ್ದಾನೆ.
ಈ ವೇಳೆ ಬಸ್ಸು ನಿಂತಿದ್ದು, ಆಗ ಬಸ್ಸಿಗೆ ಇನ್ನಿಬ್ಬರು ಹತ್ತಿ ಅವರು ಕೂಡ ಇಸಾಕ್ ಅವರಿಗೆ ಅವಾಚ್ಯ ಶಬ್ಧಗಳಿಂದ ಬೈದು ಹಲ್ಲೆ ನಡೆಸಿ ಬಸ್ಸಿನಿಂದ ಇಳಿಯುವಂತೆ ಸೂಚಿಸಿ ಕೆಳಗೆ ಇಳಿಸಿದ್ದಾರೆ. ಈ ವೇಳೆ ರಿಕ್ಷಾ ಪಾರ್ಕಿನಿಂದ ಬಂದ ರಿಕ್ಷಾದಲ್ಲಿ ಇಸಾಕ್ ವಾರನ್ನು ಕುಳ್ಳಿರಿಸಿದ ಆ ಮೂವರು ರಾಯಿ ಎಂಬಲ್ಲಿಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ರಸ್ತೆ ಬದಿಯಲ್ಲಿ ರಿಕ್ಷಾವನ್ನು ನಿಲ್ಲಿಸಿ ಮರದ ದೊಣ್ಣೆಯಿಂದ ಮೂವರು ದೇಹವಿಡಿ ಹೊಡೆದಿದ್ದಾರೆ ಹಾಗೂ ನೀನು ಹುಡುಗಿಯರಿಗೆ ತೊಂದರೆ ಕೊಡುತ್ತೀಯಾ ಇನ್ನು ಮುಂದೆ ಈ ಬಸ್ಸಿನಲ್ಲಿ ಬಂದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾರೆ. ಈ ವೇಳೆ ಸಾರ್ವಜನಿಕರು ಸೇರುವುದನ್ನು ಕಂಡು ಓಡಿ ಹೋಗಿರುತ್ತಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಔಷಧಿ ಪಡೆದು ಮನೆಗೆ ಬಂದ ಇಸಾಕ್ ಅವರಿಗೆ ರಾತ್ರಿ ನೋವು ಜಾಸ್ತಿಯಾದುದರಿಂದ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಗೆ ಬಂದು ಚಿಕಿತ್ಸೆಗೆ ದಾಖಲಾಗಿದ್ದಾರೆ.
ವೈರಲ್ ವಿಡಿಯೋ
In a shocking incident that happened near #Raayi of #Bantwal Taluk, #Ishak (45) a resident of #Mullarapatna has been brutally assaulted allegedly by #SanghParivar members creating fake accusations. He was traveling in '#MahaGanesh' private bus enroute to #Moodabidri.#Mangaluru pic.twitter.com/cCMLE1RcRr
— Hate Detector 🔍 (@HateDetectors) December 15, 2022
ನೈತಿಕ ಪೊಲೀಸ್ ಗಿರಿ
ಇಸಾಕ್ ಅವರ ಬೆನ್ನಿನ ಮೇಲೆ ಬಾಸುಂಡೆ ಎದ್ದಿರುವ ವಿಡಿಯೋ ಹಾಗೂ ಅದರಲ್ಲಿ ತನ್ನ ಮೇಲೆ ಮೂವರು ಹಲ್ಲೆ ನಡೆಸಿರುವ ಬಗ್ಗೆ ಅವರು ಆರೋಪಿಸಿರುವ ವಿಡಿಯೋವೊಂದು ಡಿ 15 ರ ಬೆಳಿಗ್ಗಿನಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಲ್ಲೆ ನಡೆಸಿರುವವರು ಹಿಂದೂತ್ವವಾದಿ ಸಂಘಟನೆಯ ಕಾರ್ಯಕರ್ತರು, ಇದು ನೈತಿಕ ಪೊಲೀಸ್ ಗಿರಿ ಎಂದು ಆ ಪೋಸ್ಟ್ ಗೆ ಒಕ್ಕಣೆ ಬರೆಯಲಾಗಿದೆ.
ಎರಡು ತಿಂಗಳ ಹಿಂದೆ ಕಾಣಿಯೂರಿನಲ್ಲಿ
ಎರಡು ತಿಂಗಳುಗಳ ಹಿಂದೆ ಕಾಣಿಯೂರಿನಲ್ಲಿ ಇದೇ ಮಾದರಿ ಬೆಡ್ ಸೀಟ್ ಮಾರಲು ಬಂದ ಇಬ್ಬರು ಮುಸ್ಲಿಂ ಯುವಕರ ಮೇಲೆ ಸ್ಥಳೀಯರ ಗುಂಪೊಂದು ಹಿಗ್ಗಾಮುಗ್ಗಾ ಹಲ್ಲೆ ನಡೆಸಿ ಬಾಸುಂಡೆ ಬರುವಂತೆ ಹೊಡೆದಿತ್ತು . ಈ ಸಂದರ್ಭ ಹಿಂದೂ ಮಹಿಳೆಯೊಬ್ಬರು ತನ್ನ ಮೇಲೆ ಈ ಇಬ್ಬರು ಯುವಕರು ಅತ್ಯಾಚಾರ ಯತ್ನ ನಡೆಸಿದ್ದಾರೆಂದು ಆರೋಪಿಸಿ ಪ್ರಕರಣ ದಾಖಲಿಸಿದ್ದರು. ಇದೀಗ ಇಂತಹುದೇ ಇನ್ನೊಂದು ಘಟನೆ ನಡೆದಿದೆ.
#DakshinKannada police reg FIR against 3 people for assaulting a 45 year old #Muslim man named Ishaaq. FIR says a #Hindu woman had handed her bag to hold him while travelling in the bus. And took it from him when her stop came. Bus conductor however took objection (1/2) pic.twitter.com/JuZgRfaBz2
— Imran Khan (@KeypadGuerilla) December 15, 2022