ಪುತ್ತೂರು: ದುಡ್ಡಿದ್ದರೆ ಡಿ.ಕೆ.ಶಿ ಯವರನ್ನು ಖರೀದಿ ಮಾಡಬಹುದು, ನಮ್ಮನ್ನಲ್ಲ ಎನ್ನುವ ಮೂಲಕ ಡಿಕೆ ಶಿವಕುಮಾರ್ (DK shivaKumar) ಕಾಂಗ್ರೇಸ್ ಟಿಕೇಟ್ ದುಡ್ಡಿಗೆ (Congress Ticket Sale) ಮಾರಟ ಮಾಡುತ್ತಾರೆ ಎನ್ನುವ ರೀತಿ ಅರ್ಥ ಬರುವಂತೆ ಹೇಳಿಕೆ ನೀಡಿದ ಕಾಂಗ್ರೇಸ್ ಮುಖಂಡ, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿಯನ್ನು (Kavu Hemanath Shetty) ಹುದ್ದೆಯಿಂದ ವಜಾಗೊಳಿಸಿದ ಬೆನ್ನಲ್ಲೇ ಪಕ್ಷ (Karnataka Congress) ಶೋಕಾಸ್ ನೋಟಿಸ್ ನೀಡಿದೆ.
ಪಕ್ಷದ ಟಿಕೇಟ್ ಆಕಾಂಕ್ಷಿಯಾಗಿದ್ದ ಕಾವು ಹೇಮನಾಥ ಶೆಟ್ಟಿ ಹೈಕಮಾಂಡ್ ನ ಕಂಗೆಣ್ಣಿಗೆ ಗುರಿಯಾಗಿ ಶೋಕಾಸ್ ನೋಟಿಸ್ ಪಡೆದಿರುವುದರಿಂದ ಈ ಬಾರಿಯೂ ಟಿಕೇಟ್ ಸಿಗುವುದು ಮರಿಚೀಕೆಯಾಗಿದೆ.
ಹೇಮನಾಥ ಶೆಟ್ಟಿ ವಿಡಿಯೋ ತುಣುಕನ್ನು ರಾಜ್ಯ ಬಿಜೆಪಿ ತನ್ನ ಸಾಮಾಜಿಕ ಜಾಲತಾಣದ ಪೇಜ್ ಗಳಲ್ಲಿ ಹಾಕಿ ಡಿಕೆ ಶಿವಕುಮಾರ್ ಅವರನ್ನು ಪ್ರಶ್ನಿಸಿದೆ.
ವಜಾಗೊಳಿಸಿದ್ಯಾಕೆ..?
ಪ್ರತಿಪಕ್ಷ ಕಾಂಗ್ರೆಸ್ ಈ ಬಾರಿಯ ಅಸೆಂಬ್ಲಿ ಚುನಾವಣೆಯಲ್ಲಿ ಟಿಕೆಟ್ ಗಳನ್ನು ಮಾರಾಟಕ್ಕಿಟ್ಟಿದೆಯೆ ? ಇಂತಹದೊಂದು ಅನುಮಾನ ಹುಟ್ಟಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕೆಪಿಸಿಸಿ ಸಂಯೋಜಕ ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಕಾವು ಹೇಮಾನಾಥ ಶೆಟ್ಟಿಯವರು ಸಭೆಯೊಂದರಲ್ಲಿ ಮಾತನಾಡಿದ ವಿಡಿಯೋ ಇದಾಗಿದ್ದು ಇದರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮೇಲೆ ಅವರು ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ನಾನಾ ರೀತಿಯ ಚರ್ಚೆಗಳು ಪ್ರಾರಂಭವಾಗಿತ್ತು.
ಉದ್ಯಮಿ , ಸಾಮಾಜಿಕ ಧುರೀಣ ಕೋಡಿಂಬಾಡಿ ಅಶೋಕ್ ರೈ ಯವರು ”ದುಡ್ಡಿದೆಯೆಂದು ಡಿಕೆಶಿಯವರಿಂದ ಹಿಡಿದು ಎಲ್ಲರನ್ನೂ ಖರೀದಿ ಮಾಡಿಕೊಂಡು ಬಂದು ನಮ್ಮನ್ನೆಲ್ಲಾ ಖರೀದಿ ಮಾಡಲು ಸಾಧ್ಯವಿಲ್ಲ“ ಎಂದು ಹೇಮಾನಾಥ ಶೆಟ್ಟಿಯವರು ಸಭೆಯಲ್ಲಿ ಆಕ್ರೋಶಭರಿತರಾಗಿ ಮಾತನಾಡಿದ್ದಾರೆ. ಈ ಹೇಳಿಕೆ ಈಗ ವಿವಾದದ ಕಿಡಿ ಹತ್ತಿಸಿದೆ. ಈ ವಿಡಿಯೋ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ಪುತ್ತೂರು ಬ್ಲಾಕ್ ಕಾಂಗ್ರೆಸ್ಸಿನ ಸದಸ್ಯರೊಬ್ಬರು ಕೆಪಿಸಿಸಿಗೆ ದೂರು ನೀಡಿದ್ದರಿಂದ ಅವರನ್ನು ಮೊದಲು ಹುದ್ದೆಯಿಂದ ವಜಾಗೊಳಿಸಿ ಇದೀಗ ಒಂದು ವಾರದೊಳಗೆ ಉತ್ತರ ಕೊಡುವಂತೆ ಪಕ್ಷದ ಹೈಕಮಾಂಡ್ ಡಿ.10 ರಂದು ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ನಿಖರ ನ್ಯೂಸ್ ಗೆ ಸ್ಪಷ್ಟಪಡಿಸಿವೆ.
ಈಗಾಗಲೇ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಆದೇಶ ಹೊರಡಿಸಿದ್ದು, ಕೊಡಗು ಜಿಲ್ಲಾ ಕಾಂಗ್ರೇಸ್ ವ್ಯಾಪ್ತಿಯಲ್ಲಿ ಬರುವ ನಾಪ್ಲೋಕು ಬ್ಲಾಕ್ ಕಾಂಗ್ರೇಸ್ ಸಮಿತಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದ ಕಾವು ಹೇಮನಾಥ ಶೆಟ್ಟಿಯನ್ನು ಆ ಹುದ್ದೆಯಿಂದ ವಿಮುಕ್ತಿಗೊಳಿಸಲಾಗಿದೆ.
ವಜಾಗೊಳಿಸಿದ ಬಗ್ಗೆ ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕಾವು ಹೇಮನಾಥ ಶೆಟ್ಟಿ, ವಜಾಗೊಳಿಸಿದ ಆದೇಶದ ಪ್ರತಿ ನನಗೆ ಬಂದಿಲ್ಲ ಎಂದಿದ್ದರು, ಈ ಬಗ್ಗೆ ನಿಖರ ನ್ಯೂಸ್ ನೊಂದಿಗೆ ಮಾತನಾಡಿದ ಜಿಲ್ಲಾಧ್ಯಕ್ಷ , ಎಂ.ಎಲ್.ಸಿ ಹರೀಶ್ ಕುಮಾರ್, ನನಗೆ ಪ್ರತಿ ಸಿಕ್ಕಿದೆ ಅವರಿಗೂ ಸಿಕ್ಕಿರಲೇಬೇಕು ಎಂದು ಸ್ಪಷ್ಟಪಡಿಸಿದ್ದರು.
ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ಗಳ ಸಮೇತ, ಪಕ್ಷದ ನಾಯಕರೂ ಮಾರಾಟವಾಗಿದ್ದಾರೆ ಎನ್ನುವುದು ಸಾಬೀತಾಗಿದೆ. @INCKarnatakaದ ಕೆಪಿಸಿಸಿ ಸಂಯೋಜಕರೇ, @DKShivakumar ಖರೀದಿಯಾಗಿದ್ದಾರೆ ಎಂದು ಪಕ್ಷದ ಸತ್ಯವನ್ನು ಬಹಿರಂಗಪಡಿಸಿದ್ದಾರೆ..#CorruptCongress pic.twitter.com/EODnZes7R2
— BJP Karnataka (@BJP4Karnataka) December 7, 2022