ಹೊಸದಿಲ್ಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಾಜಿ ಗವರ್ನರ್ ರಘುರಾಮ್ ರಾಜನ್ Former RBI governor Raghuram Rajan ಅವರು 97ನೇ ದಿನದ ಭಾರತ್ ಜೋಡೋ ಯಾತ್ರೆಯಲ್ಲಿ (BharatJodoYatra) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಸೇರಿಕೊಂಡರು.
ಇಂದು ರಾಜಸ್ಥಾನದ ಸವಾಯಿ ಮಾಧೋಪುರದಿಂದ ಕಾಂಗ್ರೆಸ್‌ನ ಪಾದಯಾತ್ರೆ ಪುನರಾರಂಭವಾಗುತ್ತಿದ್ದಂತೆ ಮೆರವಣಿಗೆಯಲ್ಲಿ ಭಾಗಿಯಾದ ರಾಜನ್ ಅವರು ರಾಹುಲ್ ಗಾಂಧಿ ಅವರೊಂದಿಗೆ ಮಾತನಾಡುತ್ತಾ ಸಾಗುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಭಾರತ್ ಜೋಡೋ ಯಾತ್ರೆ ಮುಂದಿನ ವರ್ಷ ಗಣರಾಜ್ಯೋತ್ಸವದಂದು ಕಾಶ್ಮೀರದಲ್ಲಿ ಮುಕ್ತಾಯಗೊಳ್ಳುವ ಸಾಧ್ಯತೆಯಿದೆ. ಈ ತನಕದ ಯಾತ್ರೆಯಲ್ಲಿ ಹಲವಾರು ಅತಿಥಿಗಳು ಸೇರಿದ್ದಾರೆ.
Mr @RahulGandhi & Dr Raghuram Rajan #BharatJodoYatra pic.twitter.com/1cnpz9G5TH
— Supriya Bhardwaj (@Supriya23bh) December 14, 2022
ಕನ್ಯಾಕುಮಾರಿಯಿಂದ ಪ್ರಾರಂಭವಾದ ಭಾರತ್ ಜೋಡೋ ಯಾತ್ರೆ 97 ದಿನಗಳಿಂದ ಸಾಗುತ್ತಿದ್ದು ಇದೀಗ ರಾಜಸ್ಥಾನಕ್ಕೆ ತಲುಪಿದ್ದು ಹಲವು ಪ್ರಮುಖರು ಭಾಗವಹಿಸಿದ್ದಾ.