Ad Widget

ಸಂವಿಧಾನ ಉಳಿಸಲು ಮೋದಿ ಹತ್ಯೆ ಮಾಡಿ – ವಿವಾದತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕನ ಬಂಧನ

WhatsApp Image 2022-12-13 at 09.22.04
Ad Widget

Ad Widget

Ad Widget

ಭೋಪಾಲ್: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಕೊಲೆ ಮಾಡಿ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಮಧ್ಯಪ್ರದೇಶದ (MadyaPradesh) ಮಾಜಿ ಸಚಿವ ಹಾಗೂ ಕಾಂಗ್ರೆಸ್ (Congress) ನಾಯಕ ಆಗಿರುವ ರಾಜಾ ಪಟೇರಿಯಾ (Raja Pateria),  ಅವರನ್ನು ಇಂದು ಬಂಧಿಸಲಾಗಿದೆ

Ad Widget

Ad Widget

Ad Widget

Ad Widget

  ಸಂವಿಧಾನವನ್ನು ಉಳಿಸಬೇಕಾದರೆ ಪಿಎಂ ಮೋದಿಯನ್ನು ಕೊಲ್ಲಬೇಕು ಎಂದು ರಾಜಾ ಪಟೇರಿಯಾ  ಹೇಳಿದ್ದಾರೆ ಎನ್ನಲಾದ ವೀಡಿಯೊ ವೈರಲ್ ಆಗಿತ್ತು. ಈ ಹೇಳಿಕೆ ಮೂಲಕ ಅವರು ಜನರ ಗುಂಪನ್ನು ಹತ್ಯೆಗೆ  ಪ್ರೇರೇಪಿಸುತ್ತಿದ್ದಾರೆಂದು ಆರೋಫ ಕೇಳಿ ಬಂದಿತ್ತು. 

Ad Widget

Ad Widget

Ad Widget

Ad Widget

ಪಟೇರಿಯಾ ಅವರ ಹೇಳಿಕೆಯ ವಿಡಿಯೋ ವೈರಲ್ ಆದ ಬಳಿಕ ಮಧ್ಯಪ್ರದೇಶ ಸರ್ಕಾರವು ಮಾಜಿ ರಾಜ್ಯ ಸಚಿವ ಪಟೇರಿಯಾ ವಿರುದ್ಧ ಪೊಲೀಸ್ ತನಿಖೆಗೆ ಆದೇಶಿಸಿದೆ. ಪನ್ನಾದ ಪಾವಾಯಿ ಪೊಲೀಸ್ ಠಾಣೆಯಲ್ಲಿ ಸೋಮವಾರ ಮಧ್ಯಾಹ್ನ ಪಟೇರಿಯಾ ವಿರುದ್ಧ ಪ್ರಕರಣ ದಾಖಲಾಗಿದೆ.

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಹೇಳಿಕೆಯನ್ನು ಖಂಡಿಸಿದ್ದಾರೆ. “ಭಾರತ್ ಜೋಡೋ ಯಾತ್ರೆ ಮಾಡುವವರ ನಿಜವಾದ ಮುಖ ಹೊರಬರುತ್ತಿದೆ” ಎಂದು ಟೀಕೆ ಮಾಡಿದ್ದಾರೆ.

Ad Widget

Ad Widget

ಕಾಂಗ್ರೆಸ್ ನಾಯಕನ ಹೇಳಿಕೆಯಿಂದ ಬಿಜೆಪಿ ಪಾಳಯ ಕೆಂಡಾಮಂಡಲವಾಗಿದೆ. ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ (Narottam Mishra) ಅವರು, ಕೇಸ್ ದಾಖಲಿಸುವಂತೆ ಪನ್ನಾ ಪೊಲೀಸ್ ಠಾಣೆಗೆ ಸೂಚಿಸಿದ್ದಾರೆ. ನಾನು ಪಟೇರಿಯಾ ಹೇಳಿಕೆಯನ್ನ ಕೇಳಿದ್ದೇನೆ. ಈ ಕಾಂಗ್ರೆಸ್ ಪಕ್ಷವು ಮಹಾತ್ಮ ಗಾಂಧಿಯವರದ್ದಲ್ಲ ಎಂದು ಸ್ಪಷ್ಟವಾಗಿ ಸೂಚಿಸುತ್ತದೆ. ಆದ್ದರಿಂದ `ಈ ಕಾಂಗ್ರೆಸ್ ಇಟಲಿಗೆ ಸೇರಿದ್ದು, ಅದರ ಸಿದ್ಧಾಂತ ಮುಸಲೋನಿಯದ್ದು’ ಎಂದು ಎಫ್ಐಆರ್ ದಾಖಲಿಸುವಂತೆ ಎಸ್ಪಿಗೆ ಸೂಚನೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಸಭೆಯಲ್ಲಿ ಮಾತನಾಡುತ್ತಾ, ರಾಜಾ ಪಟೇರಿಯಾ `ಪ್ರಧಾನಿ ಮೋದಿ (Narendra Modi) ಅವರು ಧರ್ಮದ ಆಧಾರದ ಮೇಲೆ ಜನರನ್ನ ವಿಭವಿಸುತ್ತಿದ್ದಾರೆ. ಮೋದಿ ಅವರ ಆಡಳಿತದಲ್ಲಿ ದಲಿತರು (Dalits) ದೊಡ್ಡ ಬೆದರಿಕೆ ಎದುರಿಸುತ್ತಿದ್ದಾರೆ. ನೀವು ಸಂವಿಧಾನ ಉಳಿಸಲು ಮೋದಿಯನ್ನು ಕೊಲ್ಲಲು ಸಿದ್ಧರಾಗಬೇಕು. ಕೊಲ್ಲುವುದೆಂದರೆ ಹತ್ಯೆ ಮಾಡುವುದಲ್ಲ. ಅವರನ್ನು ಸೋಲಿಸಬೇಕು’ ಎಂದು ಅವರು  ಹೇಳಿಕೆ ನೀಡಿದ್ದಾರೆಎಂದು  ಆರೋಪ ವ್ಯಕ್ತವಾಗಿತ್ತು.

 ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ  ಔಐರಲ್‌ ಆಗುತ್ತಲೇ  ಮಾಜಿ ಸಚಿವರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು . ನಂತರ ಇದಕ್ಕೆ ಸ್ಪಷ್ಟನೆ ನೀಡಿರುವ ಪಟೇರಿಯಾ, ನನ್ನ ಅಭಿಪ್ರಾಯವನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ಗಾಂಧಿಯನ್ನು ನಂಬುವ ವ್ಯಕ್ತಿ, ಈ ರೀತಿ ಮಾತನಾಡಲಾರೆ. ಸಂವಿಧಾನ (Constitution Of India) ಉಳಿಸಲು ಮೋದಿ ಅವರನ್ನು ಸೋಲಿಸಬೇಕು ಅನ್ನೋ ಅರ್ಥದಲ್ಲಿ ಮಾತನಾಡಿದ್ದೇನೆ. ದಲಿತರು, ಆದಿವಾಸಿಗಳನ್ನು ರಕ್ಷಿಸಲು ಹಾಗೂ ನಿರುದ್ಯೋಗ ಸಮಸ್ಯೆಯನ್ನು ತೊಡೆದುಹಾಕಲು ಮೋದಿಯನ್ನು ಸೋಲಿಸುವುದು ಅವಶ್ಯಕ ಎಂಬ ಅರ್ಥದಲ್ಲಿ ಹೇಳಿದ್ದೇನೆ. ಆದರೆ ನನ್ನ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ

Ad Widget

Leave a Reply

Recent Posts

error: Content is protected !!
%d bloggers like this: