ಪುತ್ತೂರು : ಜಾಲ್ಸೂರು – ಕಾಸರಗೋಡು ಅಂತರಾಜ್ಯ ಹೆದ್ದಾರಿಯ ಪರಪ್ಪೆ ಎಂಬಲ್ಲಿ ಮದುವೆ ದಿಬ್ಬಣದಲ್ಲಿ ತೆರಳುತ್ತಿದ್ದ ಕಾರು ಅಪಘಾತಗೊಂಡು ತಾಯಿ ಮತ್ತು ಮಗು ಧಾರುಣವಾಗಿ ಮೃತಪಟ್ಟ ಘಟನೆ ಡಿ 12 ರಂದು ನಡೆದಿದೆ. ಮೃತಪಟ್ಟ ತಾಯಿ ಮತ್ತು ಮಗು ಸುಳ್ಯದ ನಾವೂರು ಬೋರುಗುಡ್ಡೆ ನಿವಾಸಿಗಳು ಎಂದು ತಿಳಿದು ಬಂದಿದೆ.
ತಾಯಿ ಮತ್ತು ಚಲಿಸುತ್ತಿದ್ದ ಇನೋವಾ ಕಾರು ಚಾಲಕನ ಹತೋಟಿ ಕಳೆದುಕೊಂಡು ಸ್ಕಿಡ್ ಆಗಿ ಪಲ್ಟಿ ಹೊಡೆದು ರಸ್ತೆ ಬದಿಯ ಮರಗಳಿಗೆ ಢಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಸುಳ್ಯದ ನಾವೂರು ಬೋರುಗುಡ್ಡೆ ಅಬ್ದುಲ್ಲಾ ಎಂಬವರ ಪುತ್ರಿ, ಪರಪ್ಪೆಯ ಶಾನ್ ಎಂಬವರ ಪತ್ನಿ 28 ವರ್ಷದ ಶಾಹಿನಾ ಹಾಗೂ ಮಗು 3 ವರ್ಷ ಪ್ರಾಯದ ಶಜಾ ಮೃತಪಟ್ಟಿದ್ದಾರೆ. ಇವರ ಪತಿ ಮನೆ ಈಶ್ವರಮಂಗಲದ ಗಾಳಿಮುಖ.
ಅಪಘಾತಕ್ಕಿಡಾದ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇನ್ನು ನಾಲ್ವರು ತೀವ್ರ ಜಖಂಗೊಂಡಿದ್ದಾರೆ. , ಅವರನ್ನು ತತ್ ಕ್ಷಣ ಕಾಸರಗೋಡು ಆಸ್ಪತ್ರೆಗೆ ಕರೆದೊಯ್ದು ಅಲ್ಲಿಂದ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ ಎಂದು ತಿಳಿದುಬಂದಿದೆ. ಮೃತಪಟ್ಟ ತಾಯಿ ಮತ್ತು ಮಗುವಿನ ಮೃತದೇಹಗಳನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ತರಲಾಗಿದೆ.


