ಪುತ್ತೂರು: ಕರ್ನಾಟಕ ಈಜು ಅಸೋಸಿಯೇಷನ್ (ಕೆಎಸ್ಎ) ವತಿಯಿಂದ ಜರುಗುವ ರಾಜ್ಯಮಟ್ಟದ 21ನೇ ಶಾರ್ಟ್ ಕೋರ್ಸ್ ಈಜು ಚಾಂಪಿಯನ್‌ಶಿಪ್ 2022-23 ಮಂಡ್ಯದ ಪೀಪಲ್ಸ್ ಎಜುಕೇಶನ್ ಟ್ರಸ್ಟ್ ಸಹಯೋಗದೊಂದಿಗೆ ಡಿಸೆಂಬರ್ 5 ರಿಂದ 9 ರವರೆಗೆ ಮಂಡ್ಯದಲ್ಲಿ ಜರಗಿತು.
ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಪುತ್ತೂರು ಅಕ್ವಾಟಿಕ್ ಕ್ಲಬ್ (ಪಿಎಸಿ)ಯ (Puttur) ಲಾಸ್ಯ ಕಿಶನ್ 36.51 ರ ಸಮಯದೊಂದಿಗೆ 50 ಮೀಟರ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.
ಇದೇ ವರ್ಷ ಡಿಸೆಂಬರ್ 29 ರಂದು ತಿರುವನಂತಪುರದ ಪಿರಪ್ಪನ್‌ಕೋಡ್‌ನಲ್ಲಿ ನಡೆಯಲಿರುವ ದಕ್ಷಿಣ ವಲಯ ರಾಷ್ಟ್ರೀಯ ಸ್ಪರ್ಧೆಗೆ ಲಾಸ್ಯ ಕಿಶನ್ ಆಯ್ಕೆಯಾಗಿದ್ದಾರೆ.
ಲಾಸ್ಯ ಅವರಿಗೆ ಈಜು ತರಬೇತುದಾರರಾದ ಪಾರ್ಥ ವಾರಣಾಶಿ, ದೀಕ್ಷಿತ್, ರೋಹಿತ್ ಮತ್ತು ನಿರೂಪ್ ಪುತ್ತೂರಿನ ಡಾ.ಶಿವರಾಮ ಕಾರಂತ ಬಾಲವನ ಈಜುಕೊಳದಲ್ಲಿ ಹಾಗೂ ಮಂಗಳೂರಿನ ಸೇಂಟ್ ಅಲೋಶಿಯಸ್ ಈಜುಕೊಳದಲ್ಲಿ ತರಬೇತಿ ನೀಡಿದ್ದಾರೆ .