Ad Widget

BIG News : India Chaina Faceoff : ಎರಡು ವರ್ಷಗಳ ಬಳಿಕ ಮತ್ತೆ ಭಾರತ ಹಾಗೂ ಚೀನಾ ಸೇನೆ ಮುಖಾಮುಖಿ – ತಕ್ಕ ಪ್ರತ್ಯುತ್ತರ ನೀಡಿದ ಭಾರತೀಯ ಸೈನಿಕರು – ಹಲವು ಸೈನಿಕರಿಗೆ ಗಾಯ

WhatsApp Image 2022-12-12 at 20.09.50
Ad Widget

Ad Widget

Ad Widget

India Chaina Faceoff : ದೆಹಲಿ : ಡಿ 12 ” ಚೀನಾ ಸೇನೆ( ಪೀಪಲ್ಸ್ ಲಿಬರೇಷನ್ ಆರ್ಮಿ ) ಮತ್ತು ಭಾರತೀಯ ಸೇನೆಯ ನಡುವೆ ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ನಲ್ಲಿ ಮತ್ತೆ ಸಣ್ಣ ಪ್ರಮಾಣದ ಮುಖಾಮುಖಿ ಉಂಟಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಅಂಗ್ಲ ವಾರ್ತಾವಾಹಿನಿ ಎಎನ್ ಐ ವರದಿ ಮಾಡಿದೆ. ಡಿ 9 ರಂದು ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ನಲ್ಲಿರುವ ವಾಸ್ತವಿಕ ನಿಯಂತ್ರಣ ರೇಖೆ (LAC) ಯನ್ನು ಪಿಎಲ್ಎ ಪಡೆಗಳು ದಾಟಲು ಯತ್ನಿಸಿದ್ದು ಇದಕ್ಕೆ ಭಾರತೀಯ ಪಡೆಗಳು ದೃಢವಾಗಿ ಪ್ರತಿರೋಧ ಒಡ್ಡಿದ್ದವು. ಈ ಮುಖಾಮುಖಿಯಿಂದಾಗಿ ಎರಡೂ ಕಡೆಯ ಕೆಲವು ಸಿಬ್ಬಂದಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಬಳಿಕ ಎರಡೂ ಕಡೆಯವರು ತಕ್ಷಣವೇ ಈ ಪ್ರದೇಶದಿಂದ ಹಿಂದೆ ಸರಿದರು ಎಂದು ಮೂಲಗಳನ್ನು ಆಧಾರಿಸಿ ಎಎನ್ ಐ ತಿಳಿಸಿದೆ.

Ad Widget

Ad Widget

Ad Widget

Ad Widget

ಗಡಿ ನಿಯಂತ್ರಣ ರೇಖೆ ಮೂಲಕ ಭಾರತದ ಗಡಿಯೊಳಕ್ಕೆ ಪ್ರವೇಶಿಸಲು ಚೀನಾ ಯತ್ನಿಸಿದೆ. ಇದಕ್ಕೆ ಭಾರತೀಯ ಸೇನೆ ತಕ್ಕ ಉತ್ತರ ನೀಡಿದೆ. ಚೀನಾ ಸೇನೆಯನ್ನು ಗಡಿಯೊಳಕ್ಕೆ ಪ್ರವೇಶಿಸಲು ಭಾರತೀಯ ಸೇನೆ ಅನುವು ಮಾಡಿಕೊಟ್ಟಿಲ್ಲ. ಇದರ ಬೆನ್ನಲ್ಲೇ ಘರ್ಷಣೆ ಹೆಚ್ಚಾಗಿದೆ. ಈ ವೇಳೆ ಚೀನಾ ಗುಂಡಿನ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಕೂಡ ಗುಂಡಿನ ದಾಳಿ ನಡೆಸಿ ಚೀನಾ ಸೇನೆಯನ್ನು ಹಿಮ್ಮೆಟ್ಟಿಸಿದೆ ಎಂದು ಹೇಳಲಾಗಿದೆ

Ad Widget

Ad Widget

Ad Widget

Ad Widget

ಇದರ ಮುಂದುವರಿದ ಭಾಗವಾಗಿ ಈ ಪ್ರದೇಶದಲ್ಲಿನ ಭಾರತದ ಕಮಾಂಡರ್ ಶಾಂತಿ ಮತ್ತು ನೆಮ್ಮದಿಯನ್ನು ಪುನಃಸ್ಥಾಪಿಸುವ ರಚನಾತ್ಮಕ ಕಾರ್ಯವಿಧಾನಗಳಿಗೆ ಅನುಗುಣವಾಗಿ ಈ ವಿಚಾರದ ಕುರಿತಾಗಿ ಚರ್ಚಿಸಲು ತನ್ನ ಸಹವರ್ತಿಯೊಂದಿಗೆ ಧ್ವಜ ಸಭೆಯನ್ನು ನಡೆಸಿದರು ಎಂದು ಮೂಲಗಳು ತಿಳಿಸಿವೆ.

ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ನ ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ನಿಗದಿತ ಪ್ರದೇಶಗಳ ಕುರಿತಾಗಿ ಎರಡು ದೇಶದವರು 2006ರಿಂದಾಚೆಗೆ ವಿಭಿನ್ನ ಗ್ರಹಿಕೆಯನ್ನು ಹೊಂದಿದ್ದಾರೆ. ಈ ಭೂ ಭಾಗದಲ್ಲಿ ಎರಡೂ ಕಡೆಯವರು ತಾವು ಪ್ರತಿಪಾದಿಸುವ ಹಕ್ಕು ರೇಖೆಗಳವರೆಗೆ ಪ್ರದೇಶವನ್ನು ಗಸ್ತು ತಿರುಗುತ್ತಾರೆ ಎಂದು ಎಎನ್ ಐ ವರದಿಯಲ್ಲಿ ತಿಳಿಸಿದೆ.

Ad Widget

Ad Widget

2020ರ ಜೂನ್ 15 ರಂದು ಲಡಾಖ್ ನ ಗಾಲ್ವಾನ್ ಕಣಿವೆಯಲ್ಲಿ ಪಿಎಲ್ಎ ಪಡೆಗಳೊಂದಿಗಿನ ಹಿಂಸಾತ್ಮಕ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಸಾವನ್ನಪ್ಪಿದರು. ಹಾಗೂ ಈ ಘಟನೆಯಲ್ಲಿ ಹಲವು ಸೈನಿಕರು ಗಾಯಗೊಂಡಿದ್ದರು. ಅದಾದ ಬಳಿಕ ಈ ರೀತಿಯ ಘಟನೆ ನಡೆಯುತ್ತಿರುವುದು ಇದೆ ಮೊದಲು.

ಡಿ 9 ರಂದು ಮುಖಾಮುಖಿ ಘಟನೆ ನಡೆದಿರುವುದನ್ನು ಭಾರತೀಯ ಸೇನೆಯ ಹಲವು ಅಧಿಕಾರಿಗಳು ದೃಢಪಡಿಸಿರುವುದಾಗಿ ಹೇಳಿರುವ ದಿ ಹಿಂದೂ ಪತ್ರಿಕೆಯೂ ಈ ಅಧಿಕಾರಿಗಳು ಈ ನಿರ್ದಿಷ್ಟ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ ಎಂದು ತಿಳಿಸಿದೆ.

ಮತ್ತೊಂದು ಮೂಲದ ಪ್ರಕಾರ, ಘರ್ಷಣೆಯ ಸಮಯದಲ್ಲಿ ಕೆಲವು ಸೈನಿಕರು ಕೈಕಾಲುಗಳುಗಳನ್ನು ಮುರಿತಕ್ಕೊಳಗಾಗಿದೆ ಮತ್ತು ಆ ಸೈನಿಕರು ಗುವಾಹಟಿಯ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ. ಘರ್ಷಣೆ ನಡೆದಾಗ ಸುಮಾರು 600 ಪಿಎಲ್ಎ ಸೈನಿಕರು ಹಾಜರಿದ್ದರು ಎಂದು ಮೂಲಗಳು ತಿಳಿಸಿವೆ. ಆದರೇ ಚೀನಾ ಸೈನಿಕರು ಹೆಚ್ಚಿನ ಪ್ರಮಾಣದಲ್ಲಿ ಗಾಯಗೊಂಡಿರುವುದಾಗಿಯೂ ಮೂಲಗಳು ತಿಳಿಸಿರುವುದಾಗಿ ದಿ ಹಿಂದೂ ಪತ್ರಿಕೆಯ ಡಿಜಿಟಲ್ ಮೀಡಿಯಾ ವರದಿ ಮಾಡಿದೆ

ತವಾಂಗ್ ನಲ್ಲಿ ಮುಖಾಮುಖಿಯಾದ ಪ್ರದೇಶದಲ್ಲಿ ಭಾರತೀಯ ಪಡೆಗಳು ಚೀನೀ ಪಡೆಗಳಿಗೆ ಸೂಕ್ತ ಪ್ರತ್ಯುತ್ತರ ನೀಡಿದವು. ಗಾಯಗೊಂಡಿರುವ ಚೀನೀ ಸೈನಿಕರ ಸಂಖ್ಯೆ ಭಾರತೀಯ ಸೈನಿಕರಿಗಿಂತ ಹೆಚ್ಚಾಗಿದೆ. ಸುಮಾರು 300 ಸೈನಿಕರೊಂದಿಗೆ ಚೀನಿಯರು ಭಾರೀ ಸಿದ್ಧತೆಗಳನ್ನು ಮಾಡಿಕೊಂಡಿದ್ದರು, ಆದರೆ ಭಾರತದ ಕಡೆಯವರು ಸಹ ಉತ್ತಮವಾಗಿ ಸಿದ್ಧರಾಗಿದ್ದರು ಎಂದು ಚೀನಾ ಸೇನೆ ನಿರೀಕ್ಷಿಸಿರಲಿಲ್ಲ ಎಂದು ಮೂಲಗಳು ತಿಳಿಸಿರುವುದಾಗಿ ANI ತಿಳಿಸಿದೆ.

Ad Widget

Leave a Reply

Recent Posts

ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಘೋಷಿಸಿರುವ 4 ಗ್ಯಾರಂಟಿ ಯೋಜನೆಗಳಿಗೆ ಸಿಗುತ್ತಿರುವ ಸ್ಪಂದನೆಯಿಂದ ಕಂಗೆಟ್ಟಿರುವ ಬಿಜೆಪಿ, ಉರಿ ನಂಜೇಗೌಡರಂತಹ ಕಾಲ್ಪನಿಕ ವಿಚಾರಗಳ ಮೂಲಕ ಜನರ ದಾರಿ ತಪ್ಪಿಸಲು ಯತ್ನಿಸುತ್ತಿದೆ : ಅಮಳ ರಾಮಚಂದ್ರ  

error: Content is protected !!
%d bloggers like this: