
ಪುತ್ತೂರು ಪುರಭವನದಲ್ಲಿ ಗೀತಾ ಸಂಗೀತ ಆರ್ಕೆಸ್ಟ್ರಾ ತಂಡದಿಂದ ಡಿ. 11 ಭಾನುವಾರ ಸಂಜೆ 5ಕ್ಕೆ “ಗೀತಾ ಬಜಾರ್” ಉಚಿತ ಸಂಗೀತ ರಸಮಂಜರಿ ಕಾರ್ಯಕ್ರಮ
ಪುತ್ತೂರು, ಡಿ.11: ಪುತ್ತೂರಿನ ಆರ್ಕೆಸ್ಟ್ರಾ ತಂಡ ಗೀತಾ ಸಂಗೀತ ಆರ್ಕೆಸ್ಟ್ರಾ ತಂಡದಿಂದ ಪುತ್ತೂರು ಪುರಭವನದಲ್ಲಿ ಇಂದು ಸಂಜೆ 5 ಗಂಟೆಯಿಂದ ಸಾರ್ವಜನಿಕರಿಗೇ ಮುಕ್ತ ಪ್ರವೇಶದ ಉಚಿತ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

ಈಗಾಗಲೇ ಮೈಸೂರು ಹಾಗೂ ಮಂಗಳೂರಿನಲ್ಲಿ ಯಶಸ್ವಿ ಕಾರ್ಯಕ್ರಮ ನೀಡಿದ ಪ್ರಖ್ಯಾತ ಕಲಾವಿದರ ತಂಡದಿಂದ ಈ ಕಾರ್ಯಕ್ರಮ ನಡೆಯಲಿದೆ. ಹೊಸ ಮತ್ತು ಹಳೆಯ ಹಾಡುಗಳ ಸಮ್ಮಿಲನದ ಕಾರ್ಯಕ್ರಮ ಇದಾಗಿದ್ದು , ಬಿರುಮಲೆಯ ಪ್ರಜ್ಞಾ ವಿಶೇಷ ಚೇತನ ಮಕ್ಕಳ ಆಶ್ರಮಕ್ಕೆ ಧನ ಸಹಾಯ ಮಾಡುವ ಉದ್ದೇಶದಿಂದ ಈ ತಂಡ ಕಾರ್ಯಕ್ರಮಗಳನ್ನು ನಡೆಸುತ್ತಿದೆ.
ಆಯ್ದ ಪ್ರಾಯೋಜಕರ ಸಹಾಯದಿಂದ ಕಾರ್ಯಕ್ರಮ ಆಯೋಜಿಸಿದ್ದು ಕಾರ್ಯಕ್ರಮದ ಉಳಿಕೆ ಹಣವನ್ನು ಆರ್ಕೆಸ್ಟ್ರಾ ತಂಡದವರು ಪ್ರಜ್ಞಾ ಆಶ್ರಮಕ್ಕೆ ನೀಡುತ್ತಾ ಬರುತ್ತಿದ್ದಾರೆ. ಈ ಮೂಲಕ ಜನರನ್ನು ರಂಜಿಸುವುದು ಮಾತ್ರವಲ್ಲದೆ ಸಾಮಾಜಿಕ ಕಳಕಳಿಯಿಂದ ಒಂದು ಸಮಾಜ ಸೇವಾ ಸಂಸ್ಥೆಗೆ ಆರ್ಥಿಕ ನೆರವನ್ನು ಕೂಡಾ ನೀಡುತ್ತಿದ್ದಾರೆ.

ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಬಂದು ಭಾಗವಹಿಸಿ ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ ಈ ತಂಡವನ್ನು ಪ್ರೋತ್ಸಾಹಿಸಬೇಕು ಎಂದು ತಂಡದ ಸದಸ್ಯರು ವಿನಂತಿಸಿದ್ದಾರೆ.