ಕಾರ್ಕಳ: ಉಡುಪಿ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಜಗೋಳಿ ಸಮೀಪದ ನೆಲ್ಲಿಕಾರು ಬಳಿ ಖಾಸಗಿ ಬಸ್ ಹಾಗೂ ಕಾರು ನಡುವೆ ಢಿಕ್ಕಿ ಸಂಭವಿಸಿ ಗಂಡ ಹೆಂಡತಿ ಮಗು ಸಹಿತ ಮೂರು ಮಂದಿ ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ( ಡಿ.10 ರಂದು) ನಡೆದಿದೆ.
ನಾಗರಾಜ್ (40), ಪ್ರತ್ಯುಷಾ(32) ಮತ್ತು 2 ವರ್ಷದ ಮಗು ಮೃತ ದುರ್ದೈವಿಗಳು. ಮೃತಪಟ್ಟವರೆಲ್ಲ ಆಂಧ್ರ ಮೂಲದವರು ಎಂದು ಗುರುತಿಸಲಾಗಿದೆ. ಬೆಂಗಳೂರಿನಲ್ಲಿ ವಾಸವಾಗಿದ್ದ ಆಂಧ್ರದ ಕುಟುಂಬ ಧರ್ಮಸ್ಥಳಕ್ಕೆ ಭೇಟಿ ನೀಡಿ ಅಲ್ಲಿಂದ ಶೃಂಗೇರಿ ಹೋಗುತ್ತಿದ್ದ ಸಂದರ್ಭ ಬೆಳಗ್ಗೆ 7 ರ ವೇಳೆಗೆ ನೆಲ್ಲಿಕಾರು ಸಮೀಪ ಈ ಘಟನೆ ನಡೆದಿದೆ.
ದಂಪತಿಗಳು ತಮ್ಮ ಒಂದೂವರೆ ವರ್ಷದ ಮಗುವಿನೊಂದಿಗೆ ಧರ್ಮಸ್ಥಳದಿಂದ ಶೃಂಗೇರಿ ಹೋಗುತ್ತಿದ್ದ ವೇಳೆ ಕಾರ್ಕಳದಿಂದ ಬೆಳ್ತಂಗಡಿ ಕಡೆಗೆ ಬರುತ್ತಿದ್ದ ಖಾಸಗಿ ಬಸ್ಸಿಗೆ ಢಿಕ್ಕಿ ಹೊಡೆದಿದೆ., ಕಾರು ಬಸ್ಸಿನಡಿ ಭಾಗದಲ್ಲಿ ಸಿಕ್ಕಿ ಹಾಕಿಕೊಂಡು ಅಪ್ಪಚ್ಚಿಯಾಗಿ ಮೂವರು ದುರಂತ ಅಂತ್ಯ ಕಂಡಿದ್ದಾರೆ
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಕಾರ್ಕಳ ಠಾಣೆ ಪೊಲೀಸರು ಮೂವರ ಮೃತದೇಹಗಳನ್ನು ಸಾರ್ವಜನಿಕರ ಸಹಕಾರದೊಂದಿಗೆ ಹೊರ ತೆಗೆದಿದ್ದಾರೆ. ಬಳಿಕ ಅವರಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದರು.