Ad Widget

Daivaradhane : ನಾಟಕ, ಸಿನಿಮಾದಲ್ಲಿ ದೈವಗಳನ್ನು ಪ್ರದರ್ಶಿಸಿದಾಗ ಬೆಂಬಲಿಸಿ, ಮಕ್ಕಳು ವೇದಿಕೆಯಲ್ಲಿ ಬಳಸುವಾಗ ಆಕ್ರೋಶ ವ್ಯಕ್ತಪಡಿಸುವುದು ಸರಿಯೇ?

318938686_5753671624692724_2432580028246424864_n
Ad Widget

Ad Widget

ವಿಟ್ಲದ ಖಾಸಗಿ ಹೈಸ್ಕೂಲಿನ ವಿದ್ಯಾರ್ಥಿನಿಯೊಬ್ಬಳು ತನ್ನ ಶಾಲೆಯ ಕಾರ್ಯಕ್ರಮವೊಂದರಲ್ಲಿ ದೈವದಂತೆ ವೇಷ ಭೂಷಣ ತೊಟ್ಟು ಕಾಂತಾರ ಸಿನಿಮಾದ ವರಾಹ ರೂಪಂ ಹಾಡಿಗೆ ನರ್ತಿಸುವ ಮೂಲಕ ಛದ್ಮವೇಷ ಪ್ರದರ್ಶಿಸಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ. ಭಕ್ತರು ಪೂಜ್ಯ ಭಾವನೆಯಿಂದ ಕಾಣುವ ಈ ಆರಾಧನ ಪದ್ದತಿಯನ್ನು ಎಲ್ಲೆಂದರಲ್ಲಿ ಲಂಗು ಲಗಾಮಿಲ್ಲದೆ ಪ್ರದರ್ಶನ ಮಾಡುತ್ತಿದ್ದಾರೆ ಎನ್ನುವುದು ಆಕ್ರೋಶಿತರ ಕೋಪಕ್ಕೆ ಕಾರಣ.

Ad Widget

Ad Widget

Ad Widget

Ad Widget

ಆದರೇ ಸಿನಿಮಾ ನಾಟಕ ಯಕ್ಷಗಾನ ಇತ್ಯಾದಿ ಕಲಾಪ್ರಕಾರಗಳಲ್ಲಿ ಪ್ರದರ್ಶಿಸುವಾಗ ಪ್ರೋತ್ಸಾಹ ನೀಡಿ, ಇದೀಗ ಅಪ್ರಾಪ್ತ ಬಾಲಕಿ ಅದನ್ನು ಶಾಲೆಯ ವೇದಿಕೆಯಲ್ಲಿ ಪ್ರದರ್ಶಿಸಿದರೇ ವಿರೋಧಿಸುವುದು ಸರಿಯೇ ಎನ್ನುವ ಇನ್ನೊಂದು ವಾದವೂ ಇದೆ ವೇಳೆ ಹುಟ್ಟಿಕೊಂಡಿದೆ. ದೈವಗಳ ರಕ್ಷಕರು ಎಂದು ವಿರೋಧ ವ್ಯಕ್ತಪಡಿಸುವವರ ಗುಂಪು ಕೇವಲ ಗುಬ್ಬಿ ಮೇಲೆ ಮಾತ್ರ ಬ್ರಹ್ಮಾಸ್ತ್ರ ಬಿಡುತ್ತಿದ್ದಾರೆ. ಸಿನಿಮಾ, ನಾಟಕ, ಯಕ್ಷಗಾನಗಳಲ್ಲಿ ದೈವಗಳನ್ನು ಅನುಕರಿಸುವಾಗ ಈ ಸೋ ಕಾಲ್ಡ್ ಗುಂಪು ಎಲ್ಲಿ ಹೋಗಿತ್ತು ಎನ್ನುವ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

Ad Widget

Ad Widget

Ad Widget

Ad Widget

ಕಾಂತಾರದ ಬಳಿಕ ಬದಲಾಯಿತು ವಾತಾವರಣ

ರಿಷಭ್ ಶೆಟ್ಟಿ ನಿರ್ದೇಶಿಸಿ ಅಭಿನಯಿಸಿದ ಈ ಸಾಲಿನ ಕನ್ನಡದ ಸೂಪರ್ ಹಿಟ್ ಚಿತ್ರ ಕಾಂತಾರದಲ್ಲಿ ತುಳುನಾಡಿನ ವಿಶಿಷ್ಟ ಆರಾಧಾನ ಪದ್ದತಿಯಾದ ದೈವರಾಧನೆಯನ್ನು ತೋರಿಸಲಾಗಿತ್ತು. ಇದಕ್ಕೆ ತುಳುವರ ಸಹಿತ ಬಹುತೇಕ ಚಿತ್ರ ರಸಿಕರ ಮೆಚ್ಚುಗೆ ಪಾತ್ರವಾಗಿತ್ತು. ಈ ಮೂಲಕ ಕರ್ನಾಟಕದ ಎರಡು ಜಿಲ್ಲೆಯಲ್ಲಿ ಆರಾಧಿಸಲ್ಪಡುವ ಈ ಜನಪದೀಯ ಸಂಸ್ಕೃತಿಗೆ ವಿಶ್ವವ್ಯಾಪಿ ಪ್ರಚಾರ ಸಿಕ್ಕಿತ್ತು. ಇದರಿಂದಾಗಿ ತಲೆತಲಾಂತರದಿಂದ ಇದನ್ನು ಆರಾಧಿಸಿಕೊಂಡು ಬರುತ್ತಿದ್ದ ದಕ್ಷಿಣ ಕನ್ನಡ ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳಿಂದಾಚೆಗೂ ದೈವಗಳ ಬಗ್ಗೆ, ಅವುಗಳ ಕಾರಣಿಕಗಳ ಬಗ್ಗೆ ಜನರಿಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ ಹೊರ ಪ್ರಪಂಚಕ್ಕೂ ಕೂಡ ದೈವಗಳ ಬಗ್ಗೆ ಭಯ, ಭಕ್ತಿ ಶ್ರದ್ದೆ ಮತ್ತು ಆಸಕ್ತಿ ಬೆಳೆದಿದೆ. ಇವಿಷ್ಟು ಸಿನಿಮಾದಿಂದ ದೈವರಾಧನೆಗೆ ಸಿಕ್ಕ ಪಾಸಿಟಿವ್ ಪಾಯಿಂಟ್ ಗಳು.

Ad Widget

Ad Widget

ಕಾಂತಾರ ಸಿನಿಮಾ ತೆರೆಗೆ ಬರುವವರೆಗೆ ದೈವರಾಧನೆ ಎನ್ನುವುದು ಕೇವಲ ಧಾರ್ಮಿಕ ವಿಚಾರವಾಗಿತ್ತೆ ಹೊರತು ಮನರಂಜನೆಯಾಗಿ ಬಳಕೆಯಲ್ಲಿದ್ದದ್ದು ಕಡಿಮೆ. ಗುಳಿಗ ದೈವವನ್ನು ಮುಖ್ಯ ಪಾತ್ರವಾಗಿಸಿ ಶಿವದೂತೆ ಗುಳಿಗೆ ಎಂಬ ತುಳು ನಾಟಕ ಎರಡು ವರ್ಷದ ಹಿಂದೆ ಬಂದಿತ್ತು. ಆದು ಕೂಡ ದೈವದ ಕಥಾ ವಸ್ತುವನ್ನೆ ಹೊಂದಿದ್ದು ಯಶಸ್ವಿ ಪ್ರದರ್ಶನಗಳನ್ನು ಕಂಡಿವೆ. ಆದರೇ ಆ ನಾಟಕಕ್ಕೆ ತುಳುನಾಡಿನಾಚೆಗೆ ದೊಡ್ಡ ಸಂಖ್ಯೆಯ ವೀಕ್ಷಕರಿಲ್ಲ. ಹೀಗಾಗಿ ಆ ನಾಟಕ ದೈವರಾಧನೆಯ ಬಗ್ಗೆ ಗೊತ್ತಿರುವರ ಮಧ್ಯೆಯೇ ಹೆಚ್ಚು ಪ್ರದರ್ಶನಗೊಂಡಿತ್ತು. ಯಕ್ಷಗಾನಗಳಲ್ಲೂ ದೈವಗಳನ್ನು ತೋರಿಸಲಾಗುತ್ತದೆ. ಆದರೇ ಯಕ್ಷಗಾನಕ್ಕೆ ಧಾರ್ಮಿಕ ಹಿನ್ನಲೆ ಇರುವುದರಿಂದ ಅದರಿಂದ ವಿವಾದಗಳು ಸೃಷ್ಟಿಯಾಗಲಿಲ್ಲ.

ಆದರೇ ಕಾಂತಾರ ಈ ಎಲ್ಲ ಸೀಮೆಗಳನ್ನು ಮೀರಿ ಯಶಸ್ವಿಯಾಯಿತು. ಈ ಸಿನಿಮಾವನ್ನು ನೋಡಿದ ಒಂದಷ್ಟು ಮಂದಿ ಬೇರೆ ಸಿನಿಮಾಗಳನ್ನು ಅನುಕರಿಸಿ ರೀಲ್ಸ್ ಮಾಡಿದಂತೆ ಕಾಂತಾರದ ದೈವವನ್ನು ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾರಂಭಿಸಿದರು . ಇದೇ ರೀತಿ ಬೆಂಗಳೂರಿನ ಯುವತಿಯೊಬ್ಬಳು ದೈವದ ಮುಖ ವರ್ಣಿಕೆಯನ್ನು ಬಳಿದುಕೊಂಡು, ದೈವ ತೊಡುವ ವೇಷ ಭೂಷಣಗಳನ್ನೆ ಹೋಲುವ ದಿರಿಸುಗಳನ್ನು ಧರಿಸಿ ರೀಲ್ಸ್ ಮಾಡಿದ್ದಳು. ಇದು ವಿವಾದಕ್ಕೆ ಕಾರಣವಾಗಿ ಆಕೆಯ ಬಗ್ಗೆ ಕೆಟ್ಟಕೆಟ್ಟದಾಗಿ ಸಾಮಾಜಿಕ ಜಾಲತಾಣದಲ್ಲಿ ದೂಷಣೆಯೂ ನಡಯಿತು, ಬಳಿಕ ಆ ಯುವತಿ ಧರ್ಮಸ್ಥಳಕ್ಕೆ ಬಂದು ತಪ್ಪು ಕಾಣಿಕೆ ಹಾಕಿ ಕ್ಷಮಾಪಣೆಯನ್ನು ಕೇಳಿದ್ದಳು.

ಇನ್ನು ಕೆಲವರು ದೈವ ವಿಶಿಷ್ಟವಾಗಿ ಕೂಗುವ ಧ್ವನಿಯನ್ನು ( ಇದನ್ನು ಕಾಂತಾರ ಸಿನಿಮಾದಲ್ಲಿ ಆಗಾಗ ತೋರಿಸಲಾಗಿದೆ) ಕೂಡ ಕೆಲವರು ಚಿತ್ರ ವೀಕ್ಷಿಸುವ ಸಂದರ್ಭ ಸಿನಿಮಾ ಮಂದಿರದಲ್ಲಿ ಹಾಗೂ ಹೊರಗಡೆಯೂ ಅನುಕರಿಸಲು ಆರಂಭಿಸಿದರು ಅಲ್ಲದೇ ಈ ರೀತಿಯ ರೀಲ್ಸ್ ಗಳು ಪುಖಾಂನುಪುಂಖವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲಾರಂಭಿಸಿತ್ತು.

ದೈವಾರಾಧಕರಿಗೆ ನೋವು

ಈ ರೀತಿಯ ವರ್ತನೆ ತುಳುನಾಡಿಗಳ ದೈವಗಳ ಆರಾಧಕರ ಮನಸ್ಸಿಗೆ ಕಸಿವಿಸಿ, ನೋವು ಉಂಟು ಮಾಡಿದ್ದು ಸಹಜವೇ ಆಗಿತ್ತು. ಆದರೇ ಇದೇ ವೇಳೆ ಸಿನಿಮಾ ಮತ್ತು ನಾಟಕದಲ್ಲಿ ದೈವಗಳನ್ನು ಮನರಂಜನೆಯ ರೂಪದಲ್ಲೊ ಅಥವಾ ದೈವಗಳ ಕಾರಣೀಕತೆಯನ್ನು ಪ್ರಚುರ ಪಡಿಸುವ ನಿಟ್ಟಿನಲ್ಲೂ ಅಥವ ಇನ್ಯಾವುದೋ ಕಾರಣಕ್ಕೂ ಅವಕಾಶ ಸಿಕ್ಕ ಮೇಲೆ ಮತ್ತು ಅದನ್ನು ವಿರೋಧಿಸದೇ ದೈವಾರಾದಕರ ಸಹಿತ ಎಲ್ಲರೂ ಮೆಚ್ಚಿ ಪ್ರೋತ್ಸಾಹಿಸಿದ ಬಳಿಕ ಈಗ ದೈವವನ್ನು ಅನುಕರಿಸಿ ಹಾಕುವ ರೀಲ್ಸ್ ಗಳನ್ನೊ ಅಥವ ಮಕ್ಕಳ ಛಧ್ಮವೇಷವನ್ನೊ ವಿರೋಧಿಸುವುದು ಸಾಧುವೇ ? ಎನ್ನುವ ಪ್ರಶ್ನೆಗಳು ಜನ ಸಾಮಾನ್ಯರ ಮಧ್ಯೆ ಸೃಷ್ಟಿಯಾಗಿದೆ.

ಹಣಕ್ಕಾಗಿ ಪ್ರದರ್ಶನ

ಸಿನಿಮಾ ಹಾಗೂ ನಾಟಕ ಮಾಡಿದವರೂ ಅವುಗಳನ್ನು ಬಿಟ್ಟಿಯಾಗಿ ಪ್ರದರ್ಶಿಸುತ್ತಿಲ್ಲ. ಅದರ ಮೂಲಕ ಹಣ ಸಂಪಾದಿಸುತ್ತಿದ್ದಾರೆ. ಕಾಂತಾರ ಸಿನಿಮಾವಂತೂ 400 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇನ್ನು ನಾಟಕ ಮತ್ತು ಸಿನಿಮಾ ಮಾಡಿದವರು ದೈವಗಳನ್ನು ನಂಬುವವರು ಹಾಗೂ ಅದರ ಬಗ್ಗೆ ಅಧ್ಯಯನ ಮಾಡಿ ಜ್ಞಾನ ಸಂಪಾದಿಸಿದವರು ಆಗಿದ್ದರು. ಹಾಗಾಗಿಯೂ ಕೇವಲ ಆರಾಧನೆಯ ವಿಷಯವಾಗಬೇಕಾಗಿದ್ದ ದೈವಗಳನ್ನು ಕಲಾ ಪ್ರದರ್ಶನದ ವಸ್ತುವಾಗಿಸಿದರು ಎಂಬ ನೋವು ಹಲವರಲ್ಲಿದೆ.

ಆದರೇ ಅವರಿಗೆ ಯಾವುದೇ ಆಕ್ಷೇಪವನ್ನು ವ್ಯಕ್ತಪಡಿಸದ ತುಳುನಾಡಿನ ಜನ ಸಮೂಹ ರೀಲ್ಸ್ ಛದ್ಮವೇಷ ಹಾಕುವವರನ್ನು ಗುರಿಯಾಗಿಸುವುದು, ದೂಷಿಸುವುದು, ಬೆದರಿಸುವುದು ಮಾಡುತ್ತಿದೆ ಎನ್ನುವ ಆಕ್ರೋಶ ಕೆಲವರದು. ಇವರ ವರ್ತನೆ ಹಣ ಸಂಪಾದಿಸುವರಿಗೆ ಪ್ರೋತ್ಸಾಹ, ಆದರೇ ಅದರ ಬಗ್ಗೆ ಅರಿವಿಲ್ಲದೇ ಮಾಡುವವರಿಗೆ ದೂಷಣೆ ಎನ್ನುವಂತಾಗಿದೆ ಎನ್ನುವ ಪ್ರಶ್ನೆಗಳನ್ನು ಸಮಾಜದ ಒಂದು ವರ್ಗ ಕೇಳುತ್ತಿದೆ. ದೈವಾರಾಧನೆಯ ಕುರಿತು ಸಿನಿಮಾ ಮಾಡಿದ್ರೆ ತಪ್ಪಲ್ಲ, ಆದ್ರೆ, ವೇದಿಕೆಗಳಲ್ಲಿ ಪ್ರದರ್ಶನ ಮಾಡುವುದು, ರೀಲ್ಸ್ ಮಾಡುವುದು ಹೇಗೆ ತಪ್ಪಾಗುತ್ತದೆ ? ಹಾಗಿದ್ರೆ ರಿಷಬ್ ಶೆಟ್ಟಿ ಅಥವ ಇನ್ಯಾವುದೇ ನಟ ದೈವದ ಕುರಿತು ಸಿನಿಮಾ ಮಾಡಿದರೇ, ದೈವದ ವೇಷ ಧರಿಸಿ ಅನುಕರಿಸಿದರೇ ಅದು ದೈವಕ್ಕೆ ಮಾಡುವ ಅಪಚಾರ ಅಲ್ಲವೇ? ಅನ್ನೋ ಪ್ರಶ್ನೆಗಳು ಕೂಡ ಕೇಳಿ ಬಂದಿವೆ.

ದೈವಾರಾಧನೆಯ ಬಗ್ಗೆ ಯಾರಾದ್ರೂ ಅಸಭ್ಯವಾಗಿಯೋ, ಅವಹೇಳನಾಕಾರಿಯಾಗಿಯೋ ಮಾತನಾಡಿದ್ರೆ ಅಥವಾ ವ್ಯಂಗ್ಯವಾಡುವುದನ್ನು ವಿರೋಧಿಸಬಹುದು, ಆದ್ರೆ, ರೀಲ್ಸ್ ಮಾಡಬಾರದು, ವೇದಿಕೆಗಳಲ್ಲಿ ಪ್ರದರ್ಶನ ಮಾಡ ಬಾರದು ಎಂದು ಅಪಸ್ವರ ಎತ್ತುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸುತ್ತಿದ್ದಾರೆ.

Ad Widget

Leave a Reply

Recent Posts

error: Content is protected !!
%d bloggers like this: