ಬೆಂಗಳೂರು: ಬೆಂಗಳೂರು ಉತ್ತರ ಜಿಲ್ಲೆಯ ಬಿಜೆಪಿ ವೃತ್ತಿಪರರ ಪ್ರಕೋಷ್ಠದ (BJP Professionals Cell )ಜಿಲ್ಲಾ ಸಂಚಾಲಕರಾಗಿ ಕಡಬ ತಾಲೂಕಿನ ಹೇಮಂತ್ ರೈ ಮನವಳಿಕೆ ಹಾಗೂ ಸಹಸಂಚಾಲಕರಾಗಿ ನಿಟ್ಟೆಯ ವಿದ್ಯಾರಾಜ್ ಶೆಟ್ಟಿ ಆಯ್ಕೆ ಮಾಡಿ ಬಿಜೆಪಿ ರಾಜ್ಯ ಕಛೇರಿಯಿಂದ ವೃತ್ತಿಪರ ಪ್ರಕೋಷ್ಠದ ರಾಜ್ಯ ಸಂಚಾಲಕ ಚೆನ್ನಮಲ್ಲಿಕಾರ್ಜುನ ಬಿ.ಪಾಟೀಲ್ ಹಾಗೂ ಸಹಸಂಚಾಲಕ ರವೀಂದ್ರ ಪೈ ಆದೇಶ ಹೊರಡಿಸಿದ್ದಾರೆ.
ಹೇಮಂತ್ ರೈ ಮನವಳಿಕೆ ಕಡಬ ತಾಲೂಕಿನ ಆಲಂಕಾರಿನ ಮನವಳಿಕೆ ಗುತ್ತಿನವರಾಗಿದ್ದು, ಪ್ರವಾಸೋದ್ಯಮ ಉದ್ಯಮಿಯಾಗಿ ಬೆಂಗಳೂರು, ತಮಿಳುನಾಡು, ಮಡಿಕೇರಿ, ಬಂಡೀಪುರ, ಚಾಮರಾಜನಗರದಲ್ಲಿ ರೆಸಾರ್ಟ್ ಗಳನ್ನು ಹೊಂದಿದ್ದಾರೆ
ಈ ಹಿಂದೆ ಕ್ಲಬ್ ಮಹೀಂದ್ರಾ, ಸ್ಟರ್ಲಿಂಗ್ ಹಾಲೀಡೆಸ್, ಲೀಸರ್ ವೆಕೇಶನ್ಸ್ ಕಂಪೆನಿಗಳಲ್ಲಿ ಉನ್ನತ ಹುದ್ದೆಗಳಲ್ಲಿದ್ದರು.
ಎಂಬಿಎ, ಎಲ್.ಎಲ್.ಬಿ ಪದವೀಧರರಾದ ಹೇಮಂತ್ ರೈಯವರು ಈ ಹಿಂದೆ ಬೆಂಗಳೂರು ಉತ್ತರ ಜಿಲ್ಲೆಯ ಬಿಜೆಪಿ ವೃತ್ತಿಪರರ ಪ್ರಕೋಷ್ಠದ ಸಹ ಸಂಚಾಲಕರಾಗಿದ್ದರು.
ನಿಟ್ಟೆ ಮೂಲದ ವಿದ್ಯಾರಾಜ್ ಶೆಟ್ಟಿ ಉದ್ಯಮಿಯಾಗಿ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.