ಮಂಗಳೂರು: ಕೊರಗಜ್ಜನ(Koragajja) ಆದಿಸ್ಥಳ ಕುತ್ತಾರುಗೆ ಡಿ.10 ರಂದು ಕುಟುಂಬ ಸಮೇತ ಖ್ಯಾತ ನಟ ಶಿವರಾಜ್ ಕುಮಾರ್(ShivarajKumar) ಭೇಟಿ ನೀಡಿದರು.
ಪತ್ನಿ ಗೀತಾ,ಮಗಳೊಂದಿಗೆ ಕುತ್ತಾರು ಗೆ ತುಳುನಾಡಿನ ಶ್ರೀ ಕ್ಷೇತ್ರ ಧರ್ಮಸ್ಥಳ , ಕುಕ್ಕೆ ಸುಬ್ರಹ್ಮಣ್ಯ ಭೇಟಿ ನೀಡಿದ ಶಿವಣ್ಣ ಇಂದು ಬೆಳಿಗ್ಗೆ ಕುತ್ತಾರುಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಕೊರಗಜ್ಜನಿಗೆ ವೀಳ್ಯದೆಲೆ,ಚಕ್ಕುಲಿ ಇಟ್ಟು ಪ್ರಾರ್ಥನೆ ಸಲ್ಲಿಸಿದ ಶಿವಣ್ಣನನ್ನು ಕಂಡು ಅಭಿಮಾನಿಗಳು ಸೆಲ್ಫಿಗೆ ಮುಗಿಬಿದ್ದರು. ಶಿವರಾಜ್ ಕುಮಾರ್ ನಟನೆಯ ‘ವೇದ’ ಚಿತ್ರ ಪ್ರಮೋಷನ್ (Vedha) ಗಾಗಿ ಮಂಗಳೂರಿಗೆ ಆಗಮಿಸಿರುವ ಶಿವಣ್ಣ ತುಳುನಾಡಿನ ಪ್ರಸಿದ್ದ ದೇವಸ್ಥಾನ ದೇವಸ್ಥಾನಕ್ಕೆ ಭೇಟಿ ನೀಡಿದರು.
ಕುತ್ತಾರು ಕೊರಗಜ್ಜನ ಆದಿಸ್ಥಳಕ್ಕೆ ನಟ ದರ್ಶನ್ ಕೂಡ ಇತ್ತಿಚೆಗೆ ಬಂದು ಪ್ರಾರ್ಥಿಸಿದ್ದರು.
ಇಂದು ಸಂಜೆ ಪಣಂಬೂರು ಕಡಲ ಕಿನಾರೆಯಲ್ಲಿ ವೇದ ಚಿತ್ರದ ಪ್ರಮೋಶನ್ ನಡೆಯಲಿದೆ.