ಮಂಗಳೂರು : ಡಿ 8 : ಈ ಬಾರಿಯ ಇಂಡಸ್ಟ್ರೀ ಹಿಟ್ ಕಾಂತಾರ ಸಿನಿಮಾ ಬಾಕ್ಸಾಫಿಸ್ ನಲ್ಲಿ 400 ಕೋಟಿ ಗೂ ಅಧಿಕ ಹಣ ಕಲೆಕ್ಷನ್ ಮಾಡಿದೆ. ಮೊದಲು ಕನ್ನಡದಲ್ಲಿ ತೆರೆ ಕಂಡ ಚಿತ್ರ ಬಳಿಕ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲೂ ತೆರೆ ಕಂಡು ಪಾನ್ ಇಂಡಿಯಾ ಸಿನಿಮಾ ಎನಿಸಿಕೊಂಡಿತ್ತು. ಸಿನಿಮಾ ಬಿಡುಗಡೆಯಾಗಿ 70 ದಿನಗಳಾದರೂ ಹಲವು ಚಿತ್ರ ಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.
ದೈವರಾಧನೆಯನ್ನು ಪ್ರಮುಖ ವಸ್ತುವನ್ನಾಗಿಸಿ ಹೆಣೆದಿರುವ ಈ ಸಿನಿಮಾದ ಚಿತ್ರಿಕರಣದ ಸಂದರ್ಭ ಹಲವು ಆತಂಕದ ಕ್ಷಣಗಳನ್ನು ಎದುರಿಸಿತ್ತು ಎಂದು ರಿಷಬ್ ಪತ್ನಿ ಕಾಸ್ಟ್ಯೂಮ್ ಪ್ರತಿಭಾ ಶೆಟ್ಟಿ ತಿಳಿಸಿದ್ದರು. ಹೀಗಾಗಿ ಸಿನಿಮಾದ ಪ್ರಮೋಷನ್ ಬಳಿಕ ರಾಜ್ಯದ ಹಲವು ದೇವಸ್ಥಾನಗಳಿಗೆ ಭೇಟಿ ನೀಡಲಿರುವುದಾಗಿಯೂ ಮಾಹಿತಿ ನೀಡದ್ದರು. ಅದೇ ಪ್ರಕಾರ ಇಂದು ಕರಾವಳಿಯ ಪ್ರಸಿದ್ದ ತೀರ್ಥ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ರಿಷಬ್ ದಂಪತಿ ಭೇಟಿ ನೀಡಿದ್ದಾರೆ. ಅವರಿಗೆ ಕಾಂಗ್ರಸ್ ಮುಖಂಡ ಮಿಥುನ್ ರೈ ಸಾಥ್ ನೀಡಿದ್ದಾರೆ. ಕುಟುಂಬಸ್ಥ ಸದಸ್ಯರು ಜತೆಗಿದ್ದರು.
ಅಲ್ಲಿ ರಿಷಬ್ ದಂಪತಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು ದೇವಳದ ವತಿಯಿಂದ ರಿಷಬ್ ಶೆಟ್ಟಿಯವರನ್ನು ಗೌರವಿಸಲಾಯಿತು, ದೇವರ ಶೇಷ ವಸ್ರ ಪ್ರಸಾದ ನೀಡಿ ಗೌರವಿಸಲಾಯಿತು, ನೆಚ್ಚಿನ ನಟನ ಜೊತೆ ಸೆಲ್ಪಿಗಾಗಿ ಅಭಿಮಾನಿಗಳು ಮುಗಿಬಿದ್ದರು. ಇದನ್ನು ನಿಯಂತ್ರಿಸುವುದು ದೇವಸ್ಥಾನದ ಆಡಳಿತ ಮಂಡಳಿಗೆ ತುಸು ಕಷ್ಟದ ವಿಚಾರವಾಯಿತು.


ತಿಂಗಳ ಹಿಂದೆಯಷ್ಟೆ ದಂಪತಿಗಳು ಕರಾವಳಿಯ ಮತ್ತೊಂದು ಪ್ರಸಿದ್ದ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿ ಹಾಗೂ ಅಣ್ಣಪ್ಪ ಸ್ವಾಮಿಯ ಧರುಶನ ಪಡೆದಿದ್ದರು. ಬಳಿಕ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ದಂಪತಿಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದರು.
ವಾರದ ಹಿಂದೆ ಕಾಂತಾರ ಬೆಡಗಿ ಸಪ್ತಮಿಗೌಡ ತುಳುನಾಡಿನ ಕಾರಣೀಕ ಪ್ರಸಿದ್ದ ದೈವಸ್ಥಾನ ಕೊರಗಜ್ಜ , ಗುಳಿಗ ದೈವಸ್ಥಾನಗಳಿಗೆ ಬೇಟಿ ನೀಡಿ ಪ್ರಾರ್ಥನೆ ಸಲ್ಲಿಸಿರುವುದನ್ನು ಸ್ಮರಿಸಬಹುದಾಗಿದೆ.
