Ad Widget

BIg Breaking : Gujarat Election Result : ಗುಜರಾತ್‌ ನಲ್ಲಿ ಐತಿಹಾಸಿಕ ಗೆಲುವಿನತ್ತ ಬಿಜೆಪಿ | ಮೋದಿ, ಶಾ ರಾಜಕೀಯ ತಂತ್ರಗಾರಿಕೆ -ಮೊತ್ತ ಮೊದಲ ಬಾರಿ ರಾಜ್ಯದಲ್ಲಿ ಪಕ್ಷವೊಂದು 150 ಸೀಟ್‌ ಗೆಲ್ಲುವತ್ತ

WhatsApp Image 2022-12-08 at 10.40.15
Ad Widget

Ad Widget

Gujarat Election Result ನವದೆಹಲಿ: ಗುಜರಾತ್‌ ನ ವಿಧಾನಸಭಾ ಚುನಾವಣಾ ಇತಿಹಾಸದಲ್ಲೆ ಹೊಸ ದಾಖಲೆ ಬರೆಯುವತ್ತ ಭಾರತದ ನಂಬರ್‌ 1 ರಾಜಕೀಯ ಪಕ್ಷ ಬಿಜೆಪಿ ಮುಂದಾಗಿದೆ. 1985ರಲ್ಲಿ ಮಾಧವ ಸಿಂಗ್‌ ಸೋಲಂಕಿ ನೇತ್ರತ್ವದ ಕಾಂಗ್ರೆಸ್‌ ದಾಖಲಿಸಿದ ಐತಿಹಾಸಿಕ ವಿಜಯದ ದಾಖಲೆಯನ್ನು ಈ ಬಾರಿ ಬಿಜೆಪಿ ಮುರಿಯುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ. ಕಳೆದ ವಾರ ಗುಜರಾತ್  ವಿಧಾನಸಭೆಗೆ ಎರಡು ಹಂತದಲ್ಲಿ ಚುನಾವಣೆ ನಡೆದಿದ್ದು, ಇಂದು ಅದರ ಮತ ಎಣಿಕೆ ಪ್ರಗತಿಯಲ್ಲಿದೆ.

Ad Widget

Ad Widget

Ad Widget

Ad Widget

182 ವಿಧಾನ ಸಭಾ ಕ್ಷೇತ್ರಗಳ ಗುಜರಾತ್‌ ವಿಧಾನಸಭೆಯಲ್ಲಿ ಸದ್ಯ 178 ಸ್ಥಾನಗಳ ಮತ ಎಣಿಕೆಯ ಟ್ರೆಂಡ್‌ ಲಭಿಸಿದ್ದು, ಇದರಲ್ಲಿ ಬಿಜೆಪಿ 150ಸ್ಥಾನಗಳಲ್ಲಿ ಮುನ್ನಡೆ ಪಡೆದಿದೆ. ಕಾಂಗ್ರೆಸ್‌ 18 ಸ್ಥಾನಗಳಲ್ಲಿ ಮುನ್ನಡೆ ಗಳಿಸಿದರೆ, ಆಮ್‌ ಆದ್ಮಿ ಪಕ್ಷ 6 ಸ್ಥಾನಗಳಲ್ಲಿ ಮುನ್ನಡೆ ಪಡೆದಿದೆ. 1985ರಲ್ಲಿ ಮಾಧವ ಸಿಂಗ್‌ ಸೋಲಂಕಿ ನೇತ್ರತ್ವದ ಕಾಂಗ್ರೆಸ್‌ 149 ಸ್ಥಾನಗಳಲ್ಲಿ ಗೆಲುವು ಸಂಪಾದಿಸಿದ್ದು, ಇದು ಈವರಗೆ ಪಕ್ಷವೊಂದು ಪಡೆದ ಅತೀ ದೊಡ್ಡ ಗೆಲುವು ಆಗಿದೆ. ಬಿಜೆಪಿ ಈವರೆಗೆ ಗಳಿಸಿದ ಎಲ್ಲ ಮುನ್ನಡೆಗಳಲ್ಲಿ ಗೆಲುವು ಸಂಪಾದಿಸಿದರೇ ಈ ಕಾಂಗ್ರೆಸ್‌ ನ ಹಳೆಯ ದಾಖಲೆ ಮುರಿದು ಬೀಳಲಿದೆ.

Ad Widget

Ad Widget

Ad Widget

Ad Widget

1995ರಲ್ಲಿ ಮೊದಲ ಬಾರಿಗೆ ಗುಜರಾತ್ ನಲ್ಲಿ ಬಹುಮತ ಪಡೆದ ಬಿಜೆಪಿ ಆ ಬಳಿಕ ನಡೆದ ಎಲ್ಲ 7 ವಿಧಾನ ಸಭಾ ಚುನಾವಣೆಯಲ್ಲೂ ಬಹುಮತ ಪಡೆದು ಅಜೇಯ ಎನಿಸಿದೆ. ಆದರೇ ಇದರ ನಡುವಿನಲ್ಲಿ  ಒಂದೂವರೆ ವರ್ಷಗಳ ಕಾಲ ಬಿಜೆಪಿಯಿಂದ ಸಿಡಿದು ಹೋದ ಶಂಕರ ಸಿಂಘ್‌ ವಘೇಲಾರವರು ಕಾಂಗ್ರೆಸ್‌ ಪಕ್ಷದ ಬೆಂಬಲದೊಂದಿಗೆ ಆಡಳಿತ ನಡೆಸಿದ್ದರು.

ಪಶ್ಚಿಮ ಬಂಗಾಲದಲ್ಲಿ 1977 ರಿಂದ ನಿರಂತರವಾಗಿ 7 ಬಾರಿ  ಸಿಪಿಎಂ ಪಕ್ಷವು ವಿಧಾನಸಭೆ ಚುನಾವಣೆ  ಗೆದ್ದಿತ್ತು. ಇದು ಭಾರತದ ಚುನಾವಣಾ ರಾಜಕೀಯ ಇತಿಹಾಸದಲ್ಲೆ ವಿಶಿಷ್ಟ ದಾಖಲೆ ಎನಿಸಿಕೊಂಡಿತ್ತು. ಇದೀಗ ಗುಜರಾತ್ ರಾಜ್ಯದಲ್ಲಿ ಬಿಜೆಪಿ ಈ ದಾಖಲೆಯನ್ನು ಸರಿದೂಗಿಸಿದೆ.

Ad Widget

Ad Widget

ಪ್ರಧಾನಿ ಮೋದಿ ರಾಜ್ಯದಲ್ಲಿ ಅಂದಾಜು 30 ಚುನಾವಣಾ ರಾಲಿಗಳನ್ನು ನಡೆಸಿದ್ದರು. ನಾಯಕತ್ವದ ಕೊರತೆಯಿಂದ ಬಳಲಿದ ಕಾಂಗ್ರೆಸ್, ಈ ಬಾರಿ ಹಲವು ಸೀಟುಗಳನ್ನು ಕಳೆದುಕೊಳ್ಳಬಹುದು ಎಂದು ಹೇಳಲಾಗಿತ್ತು. ಕಾಂಗ್ರೆಸ್‌ ಮುಖಂಡ ರಾಹುಲ್‌  ಗಾಂಧಿಯವರು ಈ ಚುನಾವಣೆ ಸಂದರ್ಭ ಭಾರತ್‌ ಜೋಡೊ ಯಾತ್ರೆಯಲ್ಲಿ ವ್ಯಸ್ತರಾಗಿದ್ದ ಕಾರಣ ಕೇವಲ ಒಂದು ದಿನ ಮಾತ್ರ ಚುನಾವಣ ಪ್ರಚಾರದಲ್ಲಿ ಭಾಗವಹಿಸಿದ್ದರು.

Ad Widget

Leave a Reply

Recent Posts

error: Content is protected !!
%d bloggers like this: