ಹೊಸದಿಲ್ಲಿ: ಶಾಸಕರ ಕುದುರೆ ವ್ಯಾಪಾರ ಸಾಧ್ಯತೆಯನ್ನು ತಪ್ಪಿಸಲು ಹಿಮಾಚಲ ಪ್ರದೇಶದ (Himachal Pradesh ) ಎಲ್ಲಾ ಶಾಸಕರು ಚಂಡೀಗಢಕ್ಕೆ ತೆರಳುವಂತೆ ಕಾಂಗ್ರೆಸ್ ಗುರುವಾರ ಸೂಚಿಸಿದೆ ಎಂದು ವರದಿಯಾಗಿದೆ.
ಶಾಸಕರು ತಮ್ಮ ಪ್ರಮಾಣಪತ್ರಗಳನ್ನು ಪಡೆದ ನಂತರ ಚಂಡೀಗಢಕ್ಕೆ ತೆರಳುವಂತೆ ಪಕ್ಷ ತಿಳಿಸಿದೆ.
ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನಿಕಟ ಹಣಾಹಣಿ ನಡೆದಿರುವ ಹಿನ್ನೆಲೆಯಲ್ಲಿ ಕುದುರೆ ವ್ಯಾಪಾರದ ಆತಂಕದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಕಾಂಗ್ರೆಸ್ ಪ್ರಸ್ತುತ ಹಿಮಾಚಲ ಪ್ರದೇಶದಲ್ಲಿ 40 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದು, ಬಿಜೆಪಿ 25 ಸ್ಥಾನಗಳನ್ನು ಮುನ್ನಡೆಯಲ್ಲಿದೆ, ಬಹುಮತಕ್ಕೆ ಕೇವಲ 10 ಶಾಸಕರ ಕೊರತೆ ಎದುರಿಸಲಿದೆ.