Ad Widget

ಅಕ್ಷಯ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಬ್ರಹ್ಮ ಶ್ರೀನಾರಾಯಣಗುರು ಅಧ್ಯಯನ ಪೀಠದ ಸಂಯೋಜನೆಯಲ್ಲಿ ಅಕ್ಷಯ ಸಂತ ನಾರಾಯಣಗುರು ವಿಚಾರಧಾರೆ  

WhatsApp-Image-2022-12-08-at-09.37.25-1
Ad Widget

Ad Widget

ಪುತ್ತೂರು: ಅಕ್ಷಯ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್(ರಿ) ಅಧೀನದಲ್ಲಿ ಕಾರ್ಯಾಚರಿಸುತ್ತಿರುವ . ಸಂಪ್ಯ ಅಕ್ಷಯ ಕಾಲೇಜಿನಲ್ಲಿ ಅಕ್ಷಯ ಸಂತ ನಾರಾಯಣಗುರು ವಿಚಾರಧಾರೆ ಕಾರ್ಯಕ್ರಮವು ಡಿ 6 ರಂದು ಜರುಗಿತು. ಮಂಗಳೂರು ವಿಶ್ವವಿದ್ಯಾನಿಲಯ ಬ್ರಹ್ಮಶ್ರೀನಾರಾಯಣಗುರು ಅಧ್ಯಯನ ಪೀಠ ಇದರ ಸಂಯೋಜನೆಯಲ್ಲಿ ಹಾಗೂ  ಅಕ್ಷಯ ಕಾಲೇಜು ಪುತ್ತೂರು ರಾಷ್ಟೀಯ ಸೇವಾ ಯೋಜನ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿತ್ತು.

Ad Widget

Ad Widget

Ad Widget

Ad Widget

 ಶ್ರೀ ನಾರಾಯಣಗುರು ಶಿಕ್ಷಣ ಸಂಸ್ಥೆ ಕಾಟಿಪಳ್ಳ ಇದರ ಅಧ್ಯಕ್ಷರಾದ ಶ್ರೀ ಪಿ. ದಯಾಕರ್ ದೀಪ ಪ್ರಜ್ವಲಿಸಿ, ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಶುಭ ಹಾರೈಸಿದರು.ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಶ್ರೀ ನಾರಾಯಣಗುರು  ಆಂಗ್ಲಮಾಧ್ಯಮ ಪ್ರೌಢಶಾಲೆ ಕಾಟಿಪಳ್ಳ ಇದರ ಮುಖ್ಯೋಪಾಧ್ಯಾಯರಾದ ಶ್ರೀಮತಿ ಗುಣವತಿ ರಮೇಶ್‍ರವರು ಅಕ್ಷಯ ಸಂತ ಸತ್ವ ನಾರಾಯಣಗುರು ವಿಷಯದ ಕುರಿತು ನಾರಾಯಣಗುರುಗಳ ಸಾಮಾಜಿಕ ಸುಧಾರಣೆ ಹಾಗೂ ಅವರ ಚಿಂತನೆಗಳ ಬಗ್ಗೆ  ಉಪನ್ಯಾಸ ನೀಡಿದರು.

Ad Widget

Ad Widget

Ad Widget

Ad Widget

ನಾರಾಯಣಗುರು ಅಧ್ಯಯನ ಪೀಠದ ಸಂಯೋಜಕರಾದ ಡಾ. ಗಣೇಶ್ ಅಮೀನ್  ಸಂಕಮಾರ್ ನಾರಾಯಣಗುರುಗಳ ತತ್ವದ ಮಹತ್ವವನ್ನು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ, ಅಕ್ಷಯ ಕಾಲೇಜಿನ ಅಧ್ಯಕ್ಷರಾದ ಜಯಂತ್ ನಡುಬೈಲುರವರು ಮಾತನಾಡಿ “ನಮ್ಮ ಕಾಲೇಜನ್ನು ಗುರುತಿಸಿ ನಾರಾಯಣಗುರುಗಳ ವಿಚಾರಧಾರೆ ನಡೆಸಲು ಅವಕಾಶ ನೀಡಿದ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಹಾಗೂ  ಬ್ರಹ್ಮಶ್ರೀನಾರಾಯಣಗುರು ಅಧ್ಯಯನ ಪೀಠಕ್ಕೆ ಧನ್ಯವಾದಗಳನ್ನು  ಆರ್ಪಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ನಾರಾಯಣಗುರು ಶಿಕ್ಷಣ ಸಂಸ್ಥೆ ಕಾಟಿಪಳ್ಳ ಇದರ ಸದಸ್ಯರಾದ ಶ್ರೀ ಭೋಜ ಅಂಚನ್ ಮಧ್ಯ ಹಾಗೂ ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕಿಯಾದ ಶ್ರೀಮತಿ ಕಲಾವತಿ, ಪ್ರಾಂಶುಪಾಲರಾದ ಸಂಪತ್ ಪಕ್ಕಳ, ಆಡಳಿತಾಧಿಕಾರಿಯಾದ ಅರ್ಪಿತ್ ಟಿ. ಎ, ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗಗನ್ ದೀಪ್ ಎ, ಬಿ ಉಪಸ್ಥಿತರಿದ್ದರು.

Ad Widget

Ad Widget

ಕಾರ್ಯಕ್ರಮದಲ್ಲಿ ಗ್ರಂಥಾಪಾಲಕಿ ಶ್ರೀಮತಿ  ಪ್ರಭಾವತಿ ಸ್ವಾಗತಿಸಿ, ಉಪನ್ಯಾಸಕಿ ಶ್ರೀಮತಿ ರಶ್ಮಿ. ಕೆ ವಂದಿಸಿದರು. ಉಪನ್ಯಾಸಕಿ ಶ್ರೀಮತಿ ಆಶಿಕಾ ಫರ್ಝಾನ ಕೆ. ಎ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

Ad Widget

Leave a Reply

Recent Posts

error: Content is protected !!
%d bloggers like this: