ದೆಹಲಿ: ಈ ಚುನಾವಣೆಗೂ ಮುಂಚೆ ಬಿಜೆಪಿ ಗುಜಾರತ್, ಹಿಮಾಚಲ ಪ್ರದೇಶ ಹಾಗೂ ದೆಹಲಿಯ ನಗರ ಪಾಲಿಕೆಯಲ್ಲಿ ಅಧಿಕಾರದಲ್ಲಿತ್ತು. ಆದರೇ ಎರಡು ಕಡೆ ಸೋತಿರುವ ಬಿಜೆಪಿ ಕೇವಲ ಒಂದು ಕಡೆಯಷ್ಟೆ ಅಧಿಕಾರ ಉಳಿಸಿಕೊಂಡಿದೆ. ಅಲ್ಲದೇ ರಾಜಸ್ಥಾನ, ಛತ್ತಿಸ್ ಗಢ, ಉತ್ತರ ಪ್ರದೇಶ, ಒಡಿಸ್ಸಾ ರಾಜ್ಯಗಳಲ್ಲೂ ನಡೆದ ಚುನಾವಣೆಯಲ್ಲೂ ಬಿಜೆಪಿ ಸೋಲು ಅನುಭವಿಸಿದೆ. ಬಿಜೆಪಿ ನಡೆಸುತ್ತಿರುವುದು ಗುಜಾರತ್ ಗೆಲುವಿನ ಸಂಭ್ರಮವನ್ನೊ ಅಥಾವ ಉಳಿದೆಡೆ ಆಗಿರುವ ಸೋಲನ್ನು ಮರೆ ಮಾಚುವ ತಂತ್ರವೋ ಎಂದು ಕಾಂಗ್ರೆಸ್ ನ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಸುಪ್ರಿಯಾ ಶ್ರೀನಾಥ್ ವ್ಯಂಗವಾಡಿದ್ದಾರೆ.
ನ .12 ರಿಂದ ಡಿ 5 ರವರೆಗೆ ದೇಶದಲ್ಲಿ ದೆಹಲಿಯ ನಗರಪಾಲಿಕೆ, ಗುಜರಾತ್ ಹಾಗೂ ಹಿಮಾಚಲ ಪ್ರದೇಶ ರಾಜ್ಯಗಳಿಗೆ 5 ರಾಜ್ಯಗಳ 7 ಕಡೆ ಚುನಾವಣೆ ನಡೆಯಿತು. ಇವುಗಳ ಪೈಕಿ ಗುಜರಾತ್ ರಾಜ್ಯದಲ್ಲಿ ಬಿಜೆಪಿ ಪ್ರಚಂಡ ಗೆಲುವುಸಾಧಿಸಿದರೆ, ಎರಡು ಉಪಚುನಾವಣೆಯಲ್ಲಿ ಮಾತ್ರ ಬಿಜೆಪಿ ವಿಜಯಿಯಾಗಿದೆ ಎಂದು ಅವರು ತಿಳಿಸಿದರು.
ದೆಹಲಿಯ ನಗರಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 15 ವರ್ಷದ ಆಡಳಿತ ಅಂತ್ಯಗೊಂಡಿದೆ. ಅಲ್ಲಿ ಆಮ್ ಆದ್ಮಿ ಪಾರ್ಟಿ 250 ಸೀಟುಗಳ ಪೈಕಿ 134 ಸೀಟ್ ಗಳಲ್ಲಿ ಗೆಲುವು ಸಂಪಾದಿಸಿತು. ಬಿಜೆಪಿ 104 ಸೀಟ್ ಗಳಲ್ಲಿ ಗೆಲುವು ಸಂಪಾದಿಸಿದರೆ, ಕಾಂಗ್ರೆಸ್ ಕೇವಲ 9 ಸೀಟುಗಳಿಗ ತೃಪ್ತಿ ಪಡೆಯಿತು.
182 ಸೀಟ್ ಗಳ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 156 ಸ್ಥಾನಗಳಲ್ಲಿ ವಿಜಯಿಯಾದರೇ ಕಾಂಗ್ರೆಸ್ ಕೇವಲ 17 ಸ್ಥಾನಗಳಗಷ್ಟೆ ತೃಪ್ತಿ ಪಡಬೇಕಾಯಿತು. ಭಾರೀ ನಿರೀಕ್ಷೆ ಮೂಡಿಸಿದ್ದ ಆಮ್ ಆದ್ಮಿ ಪಾರ್ಟಿ ಕೇವಲ 5 ಸ್ಥಾನಗಳಲ್ಲಿ ಮಾತ್ರ ವಿಜಯಿಯಾಯಿತು. ಆದರೇ 13% ಮತ ಪಡೆಯುವುದರೊಂದಿಗೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಸಂಪಾದಿಸಿತು.
ಹಿಮಾಚಲ ಪ್ರದೇಶದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 40 ಸ್ಥಾನಗಳಲ್ಲಿ ಗೆಲ್ಲುವುದರೊಂದಿಗೆ ಆಡಳಿತ ಚುಕ್ಕಾಣಿ ಹಿಡಿದಿದೆ. ಅಲ್ಲಿ ಈವರೆಗೆ ಆಡಳಿತ ನಡೆಸುತ್ತಿದ ಬಿಜೆಪಿ 25 ಸ್ಥಾನಗಳಿಗೆ ಸೀಮಿತಗೊಂಡಿತ್ತು.
ಇನ್ನು ಉಪಚುನಾವಣೆಗಳಲ್ಲಿ ರಾಜಸ್ಥಾನ ಹಾಗೂ ಚತ್ತಿಸ್ ಗಢದಲ್ಲಿ ತಲಾ ಒಂದೊಂದು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಎರಡು ಸ್ಥಾನಗಳಲ್ಲೂ ವಿಜಯಿಯಾಗಿದೆ. ಒಡಿಸ್ಸಾದ ಒಂದು ವಿಧಾನಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ದಳ ( ಬಿಜೆಡಿ) ವಿಜಯಿಯಾಗಿದೆ.
ಉತ್ತರ ಪ್ರದೇಶದಲ್ಲಿ ಒಂದು ಸಂಸದ ಸ್ಥಾನ ಮತ್ತು ಎರಡು ವಿಧಾನ ಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು . ಇವುಗಳ ಪೈಕಿ ಮಣಿಪುರಿ ಲೋಕಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಾರ್ಟಿಯ ಡಿಂಪಲ್ ಯಾದವ್ ವಿಜೇತರಾಗಿದ್ದಾರೆ. ಇನ್ನೂ ಖಟೌಲಿ ವಿಧಾನ ಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಸಮಾಜವಾದಿ ಪಾರ್ಟಿಯ ಮಿತ್ರ ಪಕ್ಷ ಅರ್ ಎಲ್ ಡಿ ವಿಜಯಿಯಾಗಿದೆ.
ಉತ್ತರಪ್ರದೇಶದ ರಾಮಪುರ ಸದರ ವಿಧಾನ ಸಭಾ ಕ್ಷೇತ್ರದಲ್ಲಿ ಹಾಗೂ ಬಿಹಾರದ ಕುರಹನಿ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಂಪಾದಿಸಿದ್ದಾರೆ.
हिमाचल का आभार, गुजरात हम एकजुट हो कर फिर जीतेंगे
— Supriya Shrinate (@SupriyaShrinate) December 8, 2022
चुनाव के पहले भाजपा – हिमाचल, गुजरात, दिल्ली नगर निगम में सत्ता में थी।
चुनाव के बाद 2 जगह हारी, 1 जीती
भाजपा राजस्थान, छत्तीसगढ़, उत्तर प्रदेश, ओडिशा में उपचुनाव भी हारी।
गुजरात की जीत का जश्न या हार पर भ्रमजाल? pic.twitter.com/eX6NsytX4o