ಪುತ್ತೂರು/ ಬಂಟ್ವಾಳ: ಡಿ 7 : ಮಂಗಳೂರಿನ ಯುವ ವಕೀಲ ಕುಲ್‌ದೀಪ್ ಶೆಟ್ಟಿಯವರ ಮೇಲೆ ಹಲ್ಲೆ, ದೌರ್ಜನ್ಯ ನಡೆಸಿದ ಪುಂಜಾಲಕಟ್ಟೆ ಠಾಣಾಧಿಕಾರಿ ಮತ್ತು ಇತರ ಪೊಲೀಸರನ್ನು ಅಮಾನತು ಮಾಡಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪುತ್ತೂರು ವಕೀಲರ ಸಂಘ ಹಾಗೂ ಯುವ ವಕೀಲರ ವೇದಿಕೆ ಬಂಟ್ವಾಳದ ನೇತೃತ್ವದಲ್ಲಿ ಡಿ.7 ರಂದು ಪ್ರತಿಭಟನೆ ನಡೆಯಿತು. ಪುತ್ತೂರು ವಕೀಲರ ಸಂಘದವರು ಪುತ್ತೂರು ತಾಲೂಕು ಆಡಳಿತ ಸೌಧದ ಎದುರು ಹಾಗೂ ಯುವ ವಕೀಲರ ವೇದಿಕೆ ಬಂಟ್ವಾಳದವರು ಬಂಟ್ವಾಳ ನ್ಯಾಯಾಲಯದ ಮುಂಭಾಗ ಪ್ರತಿಭಟನೆ ಹಮ್ಮಿಕೊಂಡಿದ್ದರು.
ಪುತ್ತೂರಿನ ಪ್ರತಿಭಟನೆ
ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ ಅವರು ಮಾತನಾಡಿ ಏಕಾಏಕಿ ಮನೆಗೆ ಆಗಮಿಸಿದ ಪೊಲೀಸರು ವಕೀಲ ಕುಲದೀಪ್‌ಗೆ ಹಲ್ಲೆ ನಡೆಸಿ ಶಿಷ್ಠಾಚಾರ ತೋರದೆ ಅವರ ತಂದೆ ತಾಯಿಗೂ ಹಲ್ಲೆ ನಡೆಸಿ ಉಟ್ಟ ಬಟ್ಟೆಯಲ್ಲೇ ಕುಲದೀಪ್ ಶೆಟ್ಟಿಯವರನ್ನು ಠಾಣೆಗೆ ಕರೆತಂದು ಹಲ್ಲೆ ನಡೆಸಿದ್ದಾರೆ. ಪೊಲೀಸರ ಈ ವರ್ತನೆಯನ್ನು ಪುತ್ತೂರು ವಕೀಲರ ಸಂಘ ಖಂಡಿಸುತ್ತದೆ ಎಂದರು. ವಕೀಲರ ಸಂಘದ ಮಾಜಿ ಅಧ್ಯಕ್ಷ ಕುಂಬ್ರ ದುರ್ಗಾಪ್ರಸಾದ್ ರೈ, ಜಯಾನಂದ ಮಾತನಾಡಿದರು.
ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಚಿನ್ಮಯ್ ರೈ, ಉಪಾಧ್ಯಕ್ಷ ಕೃಷ್ಣಪ್ಪ ಗೌಡ ಕಕ್ವೆ, ಜೊತೆ ಕಾರ್ಯದರ್ಶಿ ಸೀಮಾ ನಾಗರಾಜ್, ಖಜಾಂಜಿ ಶ್ಯಾಮಪ್ರಸಾದ್ ಕೈಲಾರ್ ಸಹಿತ ವಕೀಲರ ಸಂಘದ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿ ಘಟನೆ ಕುರಿತು ಪಾರದರ್ಶಕ ತನಿಖೆ ನಡೆಸಿ ದೌರ್ಜನ್ಯ ಎಸಗಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಹಾಯ ಕಮೀಷನರ್ ಕಚೇರಿ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.

ಬಂಟ್ವಾಳ ಪ್ರತಿಭಟನೆ:
ತಿಭಟನೆಯನ್ನು ಉದ್ದೇಶಿಸಿ ಹಿರಿಯ ವಕೀಲರಾದ ಸುರೇಶ್ ಶೆಟ್ಟಿ ಮಾತನಾಡಿ ಪೋಲಿಸರ ಈ ಕೃತ್ಯವು ಖಂಡನೀಯ ವಾಗಿದ್ದು ಇದು ಇಡೀ ವಕೀಲ ಸಮುದಾಯವನ್ನೇ ಅವಮಾನಿಸುವ ಕ್ರಮ ವಾಗಿದೆ.ಇದು ಸಂವಿದಾನ ವಿರೋಧಿ ಕೃತ್ಯವಾಗಿದ್ದು ಪೋಲೀಸರ ಇಂತಹ ಕೃತ್ಯದ ವಿರುದ್ಧ ಇಡೀ ವಕೀಲ ಸಮುದಾಯ ಒಗ್ಗಟ್ಟಾಗಿದ್ದು ಕೂಡಲೇ ಹಲ್ಲೆ ಸಡೆಸಿದ ಪೋಲೀಸ್ ಅಧಿಕಾರಿಗಳನ್ನು ಅಮಾನತು ಮಾಡಬೇಕು ಇಲ್ಲದಿದ್ದಲ್ಲಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು. ವಕೀಲರ ಮೇಲೆಯೇ ಇಂತಹ ದೌರ್ಜನ್ಯ ನಡೆದರೆ ಸಾಮಾನ್ಯ ಜನರ ಪಾಡೇನು ಎಂದು ಆಕ್ರೋಶ ವ್ಯಕ್ತಪಡಿಸಿದರು
.ಹಿರಿಯ ವಕೀಲರಾದ ಕೆ.ವಿ.ಭಟ್ ಮಾತನಾಡಿ ಬೆಂಬಲ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಹಿರಿಯ ವಕೀಲರಾದ ಎ.ಕೆ.ರಾವ್, ಸುರೇಶ್ ಪೂಜಾರಿ,ಪ್ರಕಾಶ್ ನಾರಾಯಣ ಜೆಡ್ಡು, ಪದ್ಮನಾಭ ಅಳಿಕೆ,ಹಾತಿಮ್ ಅಹಮದ್, ಎ.ಮೋಹನ್, ಚಂದ್ರಶೇಖರ್ ರಾವ್ ಪುಂಚಮೆ, ವಿಶ್ವನಾಥ ಗೌಡ, ಮಹಮ್ಮದ್ ಕಬೀರ್.ಕೆಮ್ಮಾರ, ಯುವ ವಕೀಲರಾದ ಮಲಿಕ್ ಅನ್ಸಾರ್ ಕರಾಯ , ಮೋಹನ್ ಕುಮಾರ್ ಕಡೇಶ್ವಾಲ್ಯ, ಅಬ್ದುಲ್ ಜಲೀಲ್ , ತುಳಸೀದಾಸ್.ವಿಟ್ಲ,ಎ.ಪಿ.ಮೊಂತೆರೋ , ಪ್ರಶಾಂತ್.ಕೆ, ನಿತಿನ್, ಪ್ರದೀಫ್ .ಎನ್.ಕೆ,ಸೆಕೀನಾ, ಮಾಧುರಿ, ನಿರ್ಮಲ,ಶುಭ, ಸುಷ್ಮಾ, ಕಾವ್ಯಶ್ರೀ,ದೀಪಕ್, ಮಹಮ್ಮದ್ ಗಝಾಲಿ, ಮಹಮ್ಮದ್ ಅಶ್ರಪ್, ಮಹಮ್ಮದ್ ಮುಂಝಿರ್ , ಶ್ರೀ ಕೃಷ್ಣ, ಲಕ್ಮೀನಾರಾಯಣ ಸಿದ್ದಕಟ್ಟೆ,ಹಾಗೂ ಹಲವಾರು ಯುವ ವಕೀಲರು ಭಾಗವಹಿಸಿದ್ದರು.ಯುವ ವಕೀಲರ ನಾಯಕರಾದ ವೀರೇಂದ್ರ ಎಂ ಸಿದ್ದಕಟ್ಟೆ ಪ್ರಾಸ್ತಾವಿಕ ವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.
