ಪುತ್ತೂರು: ದುಡ್ಡಿದ್ದರೆ ಡಿಕೇಶಿಯನ್ನು ಖರೀದಿ ಮಾಡಬಹುದು ನಮ್ಮನ್ನಲ್ಲ ಎನ್ನುವ ಮೂಲಕ ಕಾಂಗ್ರೇಸ್ ಟಿಕೇಟ್ ಡಿಕೆ ಶಿವಕುಮಾರ್ ದುಡ್ಡಿಗೆ ಮಾರಟ ಮಾಡುತ್ತಾರೆ ಎನ್ನುವ ರೀತಿ
ಹೇಳಿಕೆ ನೀಡಿದ ಕಾಂಗ್ರೇಸ್ ನಾಯಕ , ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ (KPCC ) ಯನ್ನು ತಕ್ಷಣದಿಂದಲೇ ಹುದ್ದೆಯಿಂದ ವಜಾಗೊಳಿಸಿ ಆದೇಶ ಹೊರಡಿಸಲಾಗಿದೆ.
ಪ್ರತಿಪಕ್ಷ ಕಾಂಗ್ರೆಸ್ ಈ ಬಾರಿಯ ಅಸೆಂಬ್ಲಿ ಚುನಾವಣೆಯಲ್ಲಿ ಟಿಕೆಟ್ ಗಳನ್ನು ಮಾರಾಟಕ್ಕಿಟ್ಟಿದೆಯೆ ? ಇಂತಹದೊಂದು ಅನುಮಾನ ಹುಟ್ಟಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕೆಪಿಸಿಸಿ ಸಂಯೋಜಕ ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಕಾವು ಹೇಮಾನಾಥ ಶೆಟ್ಟಿಯವರು ಸಭೆಯೊಂದರಲ್ಲಿ ಮಾತನಾಡಿದ ವಿಡಿಯೋ ಇದಾಗಿದ್ದು ಇದರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮೇಲೆ ಅವರು ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ನಾನಾ ರೀತಿಯ ಚರ್ಚೆಗಳು ಪ್ರಾರಂಭವಾಗಿತ್ತು.

ಕೋಡಿಂಬಾಡಿ ಅಶೋಕ್ ರೈ ಯವರು ”ದುಡ್ಡಿದೆಯೆಂದು ಡಿಕೆಶಿಯವರಿಂದ ಹಿಡಿದು ಎಲ್ಲರನ್ನೂ ಖರೀದಿ ಮಾಡಿಕೊಂಡು ಬಂದು ನಮ್ಮನ್ನೆಲ್ಲಾ ಖರೀದಿ ಮಾಡಲು ಸಾಧ್ಯವಿಲ್ಲ“ ಎಂದು ಹೇಮಾನಾಥ ಶೆಟ್ಟಿಯವರು ಸಭೆಯಲ್ಲಿ ಆಕ್ರೋಶಭರಿತರಾಗಿ ಮಾತನಾಡಿದ್ದಾರೆ. ಈ ಹೇಳಿಕೆ ಈಗ ವಿವಾದದ ಕಿಡಿ ಹತ್ತಿಸಿದೆ. ಈ ವಿಡಿಯೋ ಹೇಳಿಕೆಯನ್ನು ಅಧಾರವಾಗಿಟ್ಟುಕೊಂಡು ಪುತ್ತೂರು ಬ್ಲಾಕ್ ಕಾಂಗ್ರೆಸ್ಸಿನ ಸದಸ್ಯರೊಬ್ಬರು ಕೆಪಿಸಿಸಿಗೆ ದೂರು ನೀಡಿದ್ದಾರೆಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.
ಇದೀಗ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಆದೇಶ ಹೊರಡಿಸಿದ್ದು, ಕೊಡಗು ಜಿಲ್ಲಾ ಕಾಂಗ್ರೇಸ್ ವ್ಯಾಪ್ತಿಯಲ್ಲಿ ಬರುವ ನಾಪ್ಲೋಕು ಬ್ಲಾಕ್ ಕಾಂಗ್ರೇಸ್ ಸಮಿತಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತಿದ್ದ ಕಾವು ಹೇಮನಾಥ ಶೆಟ್ಟಿಯನ್ನು ಆ ಹುದ್ದೆಯಿಂದ ವಜಾಗೊಳಿಸಲಾಗಿದೆ.
ಇತ್ತಿಚೆಗೆಷ್ಟೇ ಕಾಂಗ್ರೇಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್, ಬಾಯಿ ಹರಿಯ ಬಿಡುವ ನಾಯಕರಿಗೆ ಆಕಾಂಕ್ಷಿಗಳಿಗೆ ಎಚ್ಚರಿಕೆ ನೀಡಿದ ಬೆನ್ನಲ್ಲೆ ಮೊದಲ ಶಿಸ್ತುಕ್ರಮ ಕೈಗೊಳ್ಳಲಾಗಿದೆ.