Ad Widget

MCD result 2022 | ರಾಷ್ಟ್ರರಾಜಧಾನಿ ದೆಹಲಿ ಮಹಾನಗರದಲ್ಲಿ 15 ವರ್ಷಗಳ ಬಿಜೆಪಿ ಆಡಳಿತ ಅಂತ್ಯ : ಕೇಜ್ರಿವಾಲ್ ಗೆ ಜೈ ಎಂದ ದೆಹಲಿ ಜನತೆ

images (4)
Ad Widget

Ad Widget

Ad Widget

ನವದೆಹಲಿ: ದೆಹಲಿ ಪಾಲಿಕೆಯ ಚುನಾವಣೆಯ(MCD result 2022) ಫಲಿತಾಂಶ(Delhi Municipal Election Results) ಪ್ರಕಟಗೊಂಡಿದ್ದು ಮೊದಲ ಬಾರಿಗೆ ಆಪ್‌(AAP) ಅಧಿಕಾರಕ್ಕೆ ಏರಿದೆ. ಈ ಮೂಲಕ 15 ವರ್ಷಗಳ ಬಿಜೆಪಿ(BJP) ಆಡಳಿತ ಅಂತ್ಯಗೊಂಡಿದೆ.

Ad Widget

Ad Widget

Ad Widget

Ad Widget

ಮತ ಎಣಿಕೆಯ ಆರಂಭದಲ್ಲಿ ಬಿಜೆಪಿ ಮತ್ತು ಆಪ್‌ ಮಧ್ಯೆ ನೇರಾನೇರ ಸ್ಪರ್ಧೆ ಇತ್ತು. ಮೊದಲು ಬಿಜೆಪಿ ಬಳಿಕ ಆಪ್‌ ಮುನ್ನಡೆಯನ್ನು ಕಾಯ್ದುಕೊಂಡಿತು.

Ad Widget

Ad Widget

Ad Widget

Ad Widget

ಮಧ್ಯಾಹ್ನ 2 ಗಂಟೆಯ ಟ್ರೆಂಡ್‌ ಪ್ರಕಾರ ಆಪ್‌ 134, ಬಿಜೆಪಿ 103, ಕಾಂಗ್ರೆಸ್‌ 10, ಇತರರು 3 ವಾರ್ಡ್‌ನಲ್ಲಿ ಮುನ್ನಡೆಯಲಿದ್ದಾರೆ.  ಆಪ್‌ಗೆ ತೆಕ್ಕೆಗೆ ಅಧಿಕಾರ ಬರುತ್ತಿದ್ದಂತೆ ಕಾರ್ಯಕರ್ತರ ಸಂಭ್ರಮಿಸುತ್ತಿದ್ದಾರೆ. 2017ರಲ್ಲಿ ಬಿಜೆಪಿ 181 , ಆಪ್ 49, ಕಾಂಗ್ರೇಸ್‍ 31 ಸ್ಥಾನ ಪಡೆದಿತ್ತು.

ಚುನಾವಣೋತ್ತರ ಸಮೀಕ್ಷೆಗಳು ಆಪ್‌ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಏರಲಿದೆ ಭವಿಷ್ಯ ನುಡಿದಿದ್ದವು. ಬಿಜೆಪಿ ಮೂರಂಕಿ ದಾಟುವುದಿಲ್ಲ ಎಂದು ಹೇಳಿದ್ದವು. ಆದರೆ ಆಡಳಿತ ವಿರೋಧಿ ಅಲೆಯ ನಡುವೆಯೂ ಬಿಜೆಪಿ ಆಪ್‌ಗೆ ಪ್ರಬಲ ಸ್ಪರ್ಧೆ ನೀಡಿದೆ.

Ad Widget

Ad Widget

2007 ರಿಂದ ಬಿಜೆಪಿ ಪಾಲಿಕೆಯ ಅಧಿಕಾರದಲ್ಲಿದೆ. ಡಿಸೆಂಬರ್‌ 4 ರಂದು ಚುನಾವಣೆ ನಡೆದಿದ್ದು  250 ಸ್ಥಾನಗಳಿರುವ ಪಾಲಿಕೆಯಲ್ಲಿ ಬಹುಮತಕ್ಕೆ 126 ಸ್ಥಾನಗಳ ಅಗತ್ಯವಿದೆ.

ಆಪ್ ವಿರುದ್ಧ ಹಲವು ತನಿಖೆ ಎದುರಿಸಿದ್ದರೂ, ಆಪ್ ಸಚಿವ ಸತ್ಯೇಂದ್ರ ಜೈನ್ ಜೈಲಿನಲ್ಲಿ ಮಸಾಜ್ ವಿಡಿಯೋ ವೈರಲ್ ಆದರೂ ರಾಷ್ಟ್ರ ರಾಜಧಾನಿ ದೆಹಲಿಯ ಮಹಾನಗರದ ಜನತೆ ಆಪ್ ನತ್ತಲೇ ಒಲವು ತೋರಿಸಿದ್ದಾರೆ.

Ad Widget

Leave a Reply

Recent Posts

error: Content is protected !!
%d bloggers like this: