Ad Widget

Moral Policing : ಸಹೊದ್ಯೋಗಿ ಹಿಂದೂ ಯುವತಿ – ಮುಸ್ಲಿಂ ಯುವಕನ ಮಧ್ಯೆ ಸಲುಗೆ ಆರೋಪ -ಮಂಗಳೂರಿನ ಚಿನ್ನಾಭರಣ ಮಳಿಗೆಗೆ ನುಗ್ಗಿ ಬೆದರಿಕೆ

WhatsApp Image 2022-12-07 at 08.54.43
Ad Widget

Ad Widget

Ad Widget

ಮಂಗಳೂರು: ಚಿನ್ನಾಭರಣ ಮಾರಾಟ ಮಳಿಗೆಯ ಉದ್ಯೋಗಿಯಾಗಿರುವ ಮುಸ್ಲಿಂ ಯುವಕ, ತನ್ನ ಸಹೋದ್ಯೋಗಿ ಹಿಂದೂ ಯುವತಿಯ ಜೊತೆ ಸಲುಗೆಯಿಂದ ಇದ್ದಾನೆ ಎಂದು ಆರೋಪಿಸಿ ಬಜರಂಗದಳದ ಕಾರ್ಯಕರ್ತರು ಮಂಗಳವಾರ ಸಂಜೆ ಮಳಿಗೆಗೆ ನುಗ್ಗಿ ಯುವಕನಿಗೆ ಬೆದರಿಸದರೆಂದು ಮೂಲಗಳಿಂದ ತಿಳಿದು ಬಂದಿದೆ.

Ad Widget

Ad Widget

Ad Widget

Ad Widget

Ad Widget

. ಯುವಕನಿಗೆ ಬಜರಂಗದಳದ ಕಾರ್ಯಕರ್ತರು ಹಲ್ಲೆ ನಡೆಸಿದರೆಂದು ಕೆಲ ಪ್ರತ್ಯಕ್ಷ ದರ್ಶಿಗಳು ಆರೋಪಿಸಿದರೇ, ಹಲ್ಲೆ ನಡೆಸಿಲ್ಲ ಕೇವಲ ಎಚ್ಚರಿಕೆ ನೀಡಿದ್ದೇವೆಂದು ಬಜರಂಗದಳದ ಮುಖಂಡರೊಬ್ಬರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವುದಾಗಿ ವರದಿಯಾಗಿದೆ. ಆದರೇ ರಾತ್ರಿಯಾಗುತ್ತಲೇ ಈ ಘಟನೆ ಬಗ್ಗೆ 3 ಪ್ರಕರಣಗಳು ದಾಖಲಾಗಿವೆ.

Ad Widget

Ad Widget

Ad Widget

Ad Widget

Ad Widget

ಮಂಗಳೂರು ನಗರದ ಕಂಕನಾಡಿಯಲ್ಲಿರುವ ಚಿನ್ನಾಭರಣ ಮಾರಾಟ ಮಳಿಗೆಯಲ್ಲಿ ಡಿ 6 ರಂದು ಘಟನೆ ನಡೆದಿದೆ. ಆ ಮಳಿಗೆಯಲ್ಲಿ ಶೃಂಗೇರಿ ಮೂಲದ ಯುವತಿ ಮತ್ತು ಬಂಟ್ವಾಳದ ಯುವಕ ಜತೆಯಾಗಿ ಕೆಲಸ ಮಾಡುತ್ತಿದ್ದರು. ಇವರಿಬ್ಬರು ಸಲುಗೆಯಿಂದ ಇರುವುದನ್ನು ಸಂಘಟನೆ ಕಾರ್ಯಕರ್ತರು ಗಮನಿಸುತ್ತಿದ್ದರು ಮಂಗಳವಾರ ಸಂಘಟನೆ ಕಾರ್ಯಕರ್ತರು ಯುವತಿಯ ತಾಯಿಯ ಜತೆ ಬಂದು ಯುವಕನನ್ನು ತರಾಟೆಗೆ ತೆಗೆದುಕೊಂಡರು ಎಂದು ಹೇಳಲಾಗುತ್ತಿದೆ.

ಘಟನೆ ನಡೆದ ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಯುವಕ ಯುವತಿಯರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.‘ ಕಂಕನಾಡಿಯಲ್ಲಿ ಚಿನ್ನಾಭರಣಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಯ ಉದ್ಯೋಗಿ ಮೇಲೆ ಹಲ್ಲೆ ನಡೆದಿರುವ ಬಗ್ಗೆ ಮಾಹಿತಿ ಬಂದಿದೆ. ಈ ಬಗ್ಗೆ ನಾವೂ ವಿಚಾರಣೆ ನಡೆಸುತ್ತಿದ್ದೇವೆ. ಘಟನೆ ಬಗ್ಗೆ ಇನ್ನೂ ಯಾರೂ ದೂರು ನೀಡಿಲ್ಲ. ದೂರು ನೀಡಿದರೆ, ಹಲ್ಲೆ ನಡೆಸಿದವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ’ ಎಂದು ಈ ವೇಳೆ ಕದ್ರಿ ಠಾಣೆಯ ಪೊಲೀಸರು ಮಾಧ್ಯಮಗಳಿಗೆ ತಿಳಿಸಿದರು.

Ad Widget

Ad Widget

Ad Widget

Ad Widget

ಯುವಕನ ಮೇಲೆ ಹಲ್ಲೆ ನಡೆಸಿದ್ದನ್ನು ಬಜರಂಗ ದಳವು ನಿರಾಕರಿಸಿದೆ. ‘ಚಿನ್ನಾಭರಣ ಮಳಿಗೆಯಲ್ಲಿ ಕೆಲಸಕ್ಕಿದ್ದ ಯುವತಿ ಮತ್ತು ಸಹೋದ್ಯೋಗಿ ಮುಸ್ಲಿಂ ಯುವಕನನ್ನು ಪ್ರೀತಿಸಿರುವ ಬಗ್ಗೆ ಆಕೆಯ ತಂದೆ ತಾಯಿ ನಮ್ಮ ಸಂಘಟನೆಗೆ ದೂರು ನೀಡಿದ್ದರು. ನಮ್ಮ ಸಂಘಟನೆಯ ಕಾರ್ಯಕರ್ತರು ಆ ಯುವತಿಯ ತಂದೆ–ತಾಯಿ ಜೊತೆಗೆ ಮಳಿಗೆಗೆ ತೆರಳಿದ್ದರು. ಮುಸ್ಲಿಂ ಯುವಕನಿಗೆ ಬುದ್ಧಿವಾದ ಹೇಳುವಾಗ ಮಾತಿನ ಚಕಮಕಿ ನಡೆದಿದೆ’ ಎಂದು ಬಜರಂಗ ದಳದ ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ ತಿಳಿಸಿದರು.

ರಾತ್ರಿ ವೇಳೆ ಈ ಘಟನೆಗೆ ಸಂಬಂಧಿಸಿದಂತೆ 3 ಪ್ರಕರಣಗಳು ದಾಖಲಾಗಿವೆ ಎಂದು ತಿಳಿದು ಬಂದಿದೆ. ತನಗೆ ಹಲ್ಲೆ ನಡೆಸಿದ ಬಗ್ಗೆ ಯುವಕ ದೂರು ನೀಡಿದ್ದಾನೆ. ತನ್ನ ಮಗಳಿಗೆ ಯುವಕ ನಿಂದಿಸಿ ಬೆದರಿಕೆ ಹಾಕಿ ಕಿರುಕುಳ ನೀಡಿರುವ ಬಗ್ಗೆ ಯುವತಿಯ ತಾಯಿ ದೂರು ನೀಡಿದ್ದಾರೆ. ಅಕ್ರಮ ಪ್ರವೇಶ ಮಾಡಿ ಗಲಾಟೆ ನಡೆಸಿದ ಬಗ್ಗೆ ಮಳಿಗೆಯವರು ದೂರು ನೀಡಿದ್ದಾರೆ.

Ad Widget

Leave a Reply

Recent Posts

5 guarantee | ಖಚಿತವಾದ ಪಂಚ ಯೋಜನೆಗಳು: ಬಡವರ-ಮಧ್ಯಮ ವರ್ಗದವರ ಕಲ್ಯಾಣಕ್ಕೆ ಕ್ರಾಂತಿಕಾರಕ ಮುನ್ನುಡಿ ಬರೆದ ಕಾಂಗ್ರೆಸ್ ಸರ್ಕಾರ – ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯರಿಂದ ಘೋಷಣೆ : 5 ಯೋಜನೆಗಳ ಪೂರ್ತಿ ವಿವರ ಇಲ್ಲಿದೆ : ನಳಿನ್, ಸಿ.ಟಿ.ರವಿ, ಬಜರಂಗದಳದ ಪದವಿದರರಿಗೂ ನಮ್ಮ ಯೋಜನೆ ಫ್ರೀ ಎಂದು ಕಾಲೆಳೆದ ಕಾಂಗ್ರೇಸ್..!

error: Content is protected !!
%d bloggers like this: