ಪುತ್ತೂರು: : ನೂತನವಾಗಿ ಅಸ್ತಿತ್ವಕ್ಕೆ ಬಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ಘಟಕದ ಅಧ್ಯಕ್ಷರಾಗಿ ಪ್ರಜಾವಾಣಿ ಪತ್ರಿಕೆಯ ಹಿರಿಯ ವರದಿಗಾರ ಸಿದ್ದಿಕ್ ನೀರಾಜೆಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪ್ರತಿಷ್ಠೆಯ ಕಣವಾಗಿದ್ದ ಪ್ರಧಾನ ಕಾರ್ಯದರ್ಶಿ ಹಾಗೂ ಕೋಶಾಧಿಕಾರಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅನೀಶ್ ಬಳಗದ ಪ್ರಜಾವಾಣಿ ಪತ್ರಿಕೆಯ ಪುತ್ತೂರು ವರದಿಗಾರ ಶಶಿಧರ ಕುತ್ಯಾಳ ಹಾಗೂ ಕನ್ನಡ ಪ್ರಭ ಮತ್ತು ವಾರ್ತಾಭಾರತಿ ಪತ್ರಿಕೆಯ ವರದಿಗಾರ ಸಂಶುದ್ದೀನ್ ಸಂಪ್ಯ ಅವರು ಪುತ್ತೂರಿನ ಲೋಕಲ್ ಪತ್ರಿಕೆ ಸುದ್ದಿ ಬಿಡುಗಡೆ ವರದಿಗಾರರೆಂದು ಹೇಳಿಕೊಳ್ಳುವ ಲೋಕೇಶ್ ಬನ್ನೂರು ಹಾಗೂ ಶೇಖ್ ಜೈನುದ್ದಿನ್ ಅವರನ್ನು ಹೀನಾಯವಾಗಿ ಸೋಲಿಸಿದ್ದು ಇಡೀ ಚುನಾವಣೆಯ ಹೈಲೈಟ್ ಆಗಿತ್ತು.
ಪೆದ್ದ…!
ಈ ಚುನಾವಣೆಯನ್ನು ಪ್ರತಿಷ್ಟೆಯ ಕಣವಾಗಿಸಿ, ಪ್ರತಿದಿನ ಎರಡೆರಡು ಪೇಜು ವರದಿಗಳನ್ನು ಪ್ರಕಟಿಸಿದ ಲೋಕಲ್ ಪತ್ರಿಕೆ ಸುದ್ದಿ ಬಿಡುಗಡೆಯ ಸಂಪಾದಕ ಯು. ಪಿ ಶಿವಾನಂದರ ಬಳಗ ಕಾರ್ಯಕಾರಿ ಸಮಿತಿಯ ಎರಡು ಸ್ಥಾನಗಳನ್ನಷ್ಟೆ ಗಳಿಸಲು ಸಾಧ್ಯವಾಗಿ ತೀವ್ರ ಮುಖಭಂಗ ಅನುಭವಿಸಿತು. ತನ್ನ ಜತೆ ನಿಲ್ಲದ ಸಂಘದ ಸದಸ್ಯರ ಮಾನ ಹರಾಜಿಗೆ ತನ್ನ ಪತ್ರಿಕೆಯನ್ನು ಪ್ರಸನಲ್ ಬ್ಲಾಗ್ ಮಾದರಿ ಯಥೇಚ್ಚವಾಗಿ ಬಳಸಿದ ಯುಪಿ ಶಿವಾನಂದರ ಕಾರ್ಯಕಾರಿ ಸಮಿತಿಯ ಕೇವಲ ಎರಡು ಸ್ಥಾನವನ್ನಷ್ಟೆಗಳಿಸಿ ಸಂಘದ ಆಯಕಟ್ಟಿನ ಸ್ಥಾನಗಳಲ್ಲಿ ಒಂದನ್ನೂ ಪಡೆಯಲು ಸಾಧ್ಯವಾಗದೇ ಮರ್ಮಾಘಾತ ಅನುಭವಿಸಿದ್ದಾರೆ. ಈ ಮೂಲಕ ಕಳೆದ ಬಾರಿಯ MP ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿ ಕಣದಲ್ಲಿದ್ದ ಪ್ರಧಾನಿ ಮೋದಿಯವರ ವಿರುದ್ಧ ಚಾರ್ಜ್ ಚುನಾವಣೆಗೆ ನಿಂತಿದ್ದ ವ್ಯಕ್ತಿ ತಾನೊಬ್ಬ ʼಪೆದ್ದʼ ಚುನಾವಣಾ ತಂತ್ರಗಾರ ಎಂದು ಸಾಬೀತು ಪಡಿಸಿದ್ದಾರೆ. ಸುಮ್ಮನಿರಲಾಗದವ ಮೈಮೇಲೆ ಇರುವೆ ಬಿಟ್ಟುಕೊಂಡ ಎಂಬಂತೆ ಆಡಿದ ಶಿವಾನಂದ ಬಳಗದ ಮಾನ ಬೀದಿಯಲ್ಲಿ ಹರಾಜು ಆಗುತ್ತಲೇ ಸಾರ್ವಜನಿಕರು ಬಿದ್ದು ಬಿದ್ದು ನಗುತ್ತಿದ್ದರು.
ಚಾಣಕ್ಯ
ಆದರೇ ಅವರ ವಿರೋಧಿ ಪಾಳಯದ ಅನೀಶ್ ಬಳಗದ ಓರ್ವ ಸದಸ್ಯ ಮಾತ್ರ ಸೋಲು ಅನುಭವಿಸಿದ್ದು, ಉಳಿದೆಲ್ಲಾ ಸ್ಥಾನಗಳಲ್ಲಿ ಭರ್ಜರಿ ಗೆಲುವು ಸಂಪಾದಿಸಿದ್ದಾರೆ. ಈ ಮೂಲಕ ಅನೀಶ್ ಬಳಗ ಚುನಾವಣಾ ತಂತ್ರಗಾರಿಕೆಯ ʼಚಾಣಕ್ಯʼ ಎಂಬುದನ್ನು ಸಾಬೀತು ಪಡಿಸಿದೆ. ಚುನಾವಣೆ ಮುಕ್ತಾಯಗೊಳ್ಳುತ್ತಲೇ ಅನೀಶ್ ಬಳಗದ ಸಂತೋಷಕ್ಕೆ ಪಾರವೇ ಇರಲಿಲ್ಲ. ಅನೀಶ್ ಸಹಿತ ತಂಡದ ಹಲವು ಸದಸ್ಯರು ಬ್ಯಾಂಡ್ ವಾಲಗ ಸದ್ದಿಗೆ ಹೆಜ್ಜೆ ಹಾಕುವ ಮೂಲಕ ಕುಣಿದು ಕುಪ್ಪಳಿಸಿ ತಮ್ಮ ಖುಷಿಯನ್ನು ಆಚರಿಸಿಕೊಂಡರು. ಅಲ್ಲದೇ ಪಟಾಕಿ ಸಿಡಿ ಸಂಭ್ರಮಿಸಿದರು. ಪತ್ರಿಕಾ ಭವನದ ಮುಂಭಾಗ ಪಟಾಕಿ ಸದ್ದು ಮಾರ್ಧನಿಸುತ್ತಲೇ, ಡಾ| ಯುಪಿ ಶಿವಾನಂದ ಬಳಗದ ಸದಸ್ಯರು ಮುಖ ತೋರಿಸಲಾಗದೇ ಚದುರಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಜೇಡ..!
ಆರೂವರೆ ವರ್ಷಗಳ ಹಿಂದೆ ತನ್ನ ಸಿಬಂದಿಗಳ ಗೂಂಡಾ ಪಡೆಯನ್ನು ಛೂ ಬಿಟ್ಟು ಪುತ್ತೂರಿನ ಪತ್ರಿಕಾಭವನದ ಮುಂಭಾಗ ಬೀದಿ ಕಾಳಗಕ್ಕೆ ಕಾರಣವಾಗಿದ್ದ ಯುಪಿ ಶಿವಾನಂದರು ಆ ಬಳಿಕ ಅಲ್ಲಿನ ಪತ್ರಿಕಾ ಭವನವನ್ನು ವಶಕ್ಕೆ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸಿದ್ದರು. ಅದನ್ನು ತನ್ನ ಕೈ ವಶ ಮಾಡಿಕೊಳ್ಳುವ ಸಲುವಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಪುತ್ತೂರು ತಾಲೂಕು ಘಟಕಕ್ಕೆ ಚುನಾವಣೆ ನಡೆಯುವಂತೆ ನೋಡಿಕೊಂಡು ರಾಜಕೀಯ ತಂತ್ರಗಾರಿಕೆ ಹೆಣೆಯಲು ಪ್ರಯತ್ನಿಸಿದ್ದರು. ಆದರೆ ಕೊನೆಗೆ ತಾನೇ ಹೆಣೆದ ಬಲೆಯಲ್ಲಿ ಸಿಕ್ಕಿ ಹಾಕಿಕೊಂಡು ವಿಲ ವಿಲ ಒದ್ದಾಡುವ ಜೇಡನಂತಾದದ್ದು ವಿಪರ್ಯಾಸ. ವಾರದ ಹಿಂದೆ ನಾಮಪತ್ರ ಸಲ್ಲಿಕೆಯ ವೇಳೆಯೇ, ಸೋಲಿನ ವಾಸನೆ ಬಡಿದಿದ್ದ ಶಿವಾನಂದ ಬಳಗ ಗೆದ್ದವರು ತನ್ನ ಬಳಗದವರು ಎಂದು ಹೇಳಿಕೊಳ್ಳುವ ಪ್ರಯತ್ನ ನಡೆಸಿತ್ತು. ಆದರೇ ಸೋಮವಾರ ನಡೆದ ಚುನಾವಣೆಯಲ್ಲಿ ಸುದ್ದಿ ಬಳಗದ ಸದಸ್ಯರಿಗೆ ಆದ ಸೋಲು ಈ ಎಲ್ಲ ನಾಟಕಕ್ಕೆ ಅಂತಿಮ ತೆರೆ ಎಳೆಯಿತು.

ಡಿ.5 ರಂದು ಪುತ್ತೂರಿನ ಪತ್ರಿಕಾಭವನದಲ್ಲಿ ಚುನಾವಣೆ ನಡೆದಿದ್ದು ಘಟಕದ ಉಪಾಧ್ಯಕ್ಷರಾಗಿ ಉದಯವಾಣಿ ಪತ್ರಿಕೆಯ ಉಪ್ಪಿನಂಗಡಿ ವರದಿಗಾರ ಎಂ.ಎಸ್.ಭಟ್ ಹಾಗೂ ಉದಯವಾಣಿ ಪತ್ರಿಕೆಯ ಪುತ್ತೂರು ಹಾಗೂ ಸುಳ್ಯ ವರದಿಗಾರ ಕಿರಣ್ ಪ್ರಸಾದ್ ಕೆ, ಕಾರ್ಯದರ್ಶಿಗಳಾಗಿ ನ್ಯೂಸ್ 18 ರ ವರದಿಗಾರ ಅಜಿತ್ ಕುಮಾರ್ .ಕೆ ಹಾಗೂ ಜಯಕಿರಣ ಪತ್ರಿಕೆಯ ಉಪ್ಪಿನಂಗಡಿ ವರದಿಗಾರ ಕೆ.ಮೊಹಮ್ಮದ್ ನಝೀರ್ ಅವಿರೋಧವಾಗಿ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ವಿಜಯ ಕರ್ನಾಟಕ ವರದಿಗಾರರಾದ ಸುಧಾಕರ .ಕೆ ಮತ್ತು ಕುಮಾರ್ ಕಲ್ಲಾರೆ, ಸ್ಪಂದನ ವರದಿಗಾರ ಉಮಾಶಂಕರ, ಸಂಯುಕ್ತ ಕರ್ನಾಟಕ ವರದಿಗಾರ ಮೇಘ ಪಾಲೆತ್ತಾಡಿ, ಹೊಸದಿಂಗತ ವರದಿಗಾರ ಐ.ಬಿ.ಸಂದೀಪ್ ಕುಮಾರ್, ಡೈಜಿ ವರ್ಲ್ಡ್ ವರದಿಗಾರ ಕೃಷ್ಣ ಪ್ರಸಾದ್, ಸುದ್ದಿ ಬಿಡುಗಡೆ ಪತ್ರಿಕೆಯ ವರದಿಗಾರರಾದ ಶೇಷಪ್ಪ ಕಜೆಮಾರ್ ಮತ್ತು ಕರುಣಾಕರ ರೈ ಸಿ.ಎಚ್ ಆಯ್ಕೆಯಾಗಿದ್ದಾರೆ.
ಚುನಾವಣಾ ಫಲಿತಾಂಶ
ಪ್ರಧಾನ ಕಾರ್ಯದರ್ಶಿ
ಪ್ರಧಾನ ಕಾರ್ಯದರ್ಶಿ ಒಂದು ಹುದ್ದೆಗೆ ಇಬ್ಬರು ಕಣದಲ್ಲಿದ್ದ ಕಾರಣ ಚುನಾವಣೆ ನಡೆಯಿತು. 13 ಮತ ಪಡೆದು ಶಶಿಧರ ರೈ ಆಯ್ಕೆಯಾದರು. ಲೋಕೇಶ್ ಬನ್ನೂರು 10 ಮತ ಪಡೆದರು.
ಕೋಶಾಧಿಕಾರಿ ಒಂದು ಹುದ್ದೆಗೆ ಇಬ್ಬರು ಕಣದಲ್ಲಿ ಇದ್ದ ಕಾರಣ ಚುನಾವಣೆ ನಡೆಯಿತು. 15 ಮತ ಪಡೆದ ಸಂಶುದ್ದೀನ್ ಸಂಪ್ಯ ಆಯ್ಕೆಯಾದರು. ಶೇಖ್ ಜೈನುದ್ದೀನ್ ಕೇವಲ 8 ಮತ ಪಡೆಯಲು ಶಕ್ತರಾದರು.
ಕಾರ್ಯಕಾರಿ ಸಮಿತಿ
8 ಹುದ್ದೆಗಳಿಗೆ 10 ಮಂದಿ ಕಣದಲ್ಲಿದ್ದ ಕಾರ್ಯಕಾರಿ ಸಮಿತಿಗೆ ಚುನಾವಣೆ ನಡೆಯಿತು. ಸುಧಾಕರ ಕೆ.(21 ಮತ), ಉಮಾಶಂಕರ(19 ಮತ), ಮೇಘ ಪಾಲೆತ್ತಾಡಿ(17ಮತ), ಐ.ಬಿ.ಸಂದೀಪ್ ಕುಮಾರ್(16 ಮತ), ಶೇಷಪ್ಪ ಕಜೆಮಾರ್(15 ಮತ), ಕುಮಾರ್ ಕಲ್ಲಾರೆ(15 ಮತ) ಕೃಷ್ಣ ಪ್ರಸಾದ್ (12 ಮತ), ಕರುಣಾಕರ ರೈ ಸಿ.ಎಚ್(12ಮತ) ಆಯ್ಕೆಯಾಗಿದ್ದಾರೆ. ಕಣದಲ್ಲಿದ್ದ ಪ್ರವೀಣ್ ಕುಮಾರ್ 11ಮತ, ಉಮಾಪ್ರಸಾದ್ ರೈ ನಡುಬೈಲು 10 ಮತ ಪಡೆದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಇಬ್ರಾಹಿಂ ಅಡ್ಕಸ್ಥಳ, ಚುನಾವಣಾಧಿಕಾರಿಯಾಗಿ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ ಉಪ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಚುನಾವಣಾ ಮೇಲುಸ್ತುವಾರಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎನ್.ರವಿಕುಮಾರ್ ಆಗಮಿಸಿದ್ದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್, ಕಾರ್ಯಕಾರಿ ಸಮಿತಿ ಸದಸ್ಯ ರಾಜೇಶ್ ದಡ್ಡಂಗಡಿ ಚುನಾವಣಾ ಕರ್ತವ್ಯದಲ್ಲಿ ಭಾಗವಹಿಸಿದ್ದರು. ಆಯ್ಕೆಯಾದ ಅಡಳಿತ ಮಂಡಳಿಯೂ ಮೂರು ವರ್ಷದ ಅಧಿಕಾರದ ಅವಧಿಯನ್ನು ಹೊಂದಿದೆ.