Connect with us

ರಾಜಕೀಯ

Ambedkar | ಅಂಬೇಡ್ಕರನ್ನು  ಕಾಂಗ್ರೆಸ್ ನವರು ಚುನಾವಣೆಯಲ್ಲಿ ಸೋಲಿಸಿದರು – ಬಿಜೆಪಿ ಆರೋಪ : ಜಗತ್ತಿಗೆ ಶ್ರೇಷ್ಠವಾದ ಸಂವಿಧಾನವನ್ನ ಕೊಡಲು ಬಾಬಾ ಸಾಹೇಬರಿಗೆ ಅವಕಾಶ ಮಾಡಿಕೊಟ್ಟಿದ್ದೇ ಕಾಂಗ್ರೆಸ್ ಪಕ್ಷ – ಬಿ.ಕೆ ಹರಿಪ್ರಸಾದ್ ತಿರುಗೇಟು

Ad Widget

ಬೆಂಗಳೂರು: ‘ಬಾಬಾ ಸಾಹೇಬ್ ಅಂಬೇಡ್ಕರ್‌ ( Ambedkar) ಅವರನ್ನು ಕಾಂಗ್ರೆಸ್ ನವರು ಚುನಾವಣೆಯಲ್ಲಿ ಸೋಲಿಸಿದರು’ ಎಂದು ಬಿಜೆಪಿ (@BJP4Karnataka) ವಾಗ್ದಾಳಿ ನಡೆಸಿದೆ. ಇದಕ್ಕೆ ಕಾಂಗ್ರೇಸ್‍ ನಾಯಕ ಬಿ.ಕೆ ಹರಿಪ್ರಸಾದ್, ಅಂಬೇಡ್ಕರ್ ನ್ನು ಹಿಂದೂ ವಿರೋಧಿ ಎಂದು ಬಿಂಬಿಸಿದ್ದು ಸುಳ್ಳಾ..? ಎಂದು ಪ್ರಶ್ನಿಸಿದ ಅವರು, ಅಂಬೇಡ್ಕರ್ ಮನುಷ್ಯ ವಿರೋಧಿ ಮನುಸ್ಮೃತಿ ಸುಟ್ಟ ಸಿಟ್ಟಿಗೆ ಇಂದು ಅಂಬೇಡ್ಕರ್ ಕೊಟ್ಟ ಸಂವಿಧಾನ ವಿರೋಧಿಸುತ್ತಿದೆ ಎಂದು ಆರೋಪಿಸಿದ್ದಾರೆ.

Ad Widget

Ad Widget

Ad Widget

Ad Widget

ಈ ಕುರಿತು ಮಂಗಳವಾರ ಟ್ವೀಟ್ ಮಾಡಿರುವ ಬಿಜೆಪಿ, ‘ಬಾಬಾ ಸಾಹೇಬರಿಗೆ ಕಾಂಗ್ರೆಸ್ ಮಾಡಿದ ಅನ್ಯಾಯದ ಇತಿಹಾಸವೇ ಇದೆ’ ಎಂದು ಕಿಡಿಕಾರಿದೆ.

Ad Widget

Ad Widget

”ಅಂಬೇಡ್ಕರ್‌ ಅವರನ್ನು ಚುನಾವಣೆಯಲ್ಲಿ ಸೋಲಿಸಿದರು. ಅಂಬೇಡ್ಕರ್‌ ಅಂತ್ಯಸಂಸ್ಕಾರಕ್ಕೆ ಭೂಮಿ ನೀಡಲು ನಿರಾಕರಿಸಿದರು. ಅಂಬೇಡ್ಕರ್‌ ಅವರನ್ನು ಬಿಟ್ಟು, ತಮಗೆ ತಾವೇ ಭಾರತ ರತ್ನ ಘೋಷಿಸಿದರು. ತುರ್ತುಪರಿಸ್ಥಿತಿ ಹೇರಿ ಸಂವಿಧಾನ ಆಶಯಕ್ಕೆ ಕೊಳ್ಳಿ ಇಟ್ಟರು’ ಎಂದು ಬಿಜೆಪಿ ಆರೋಪ ಮಾಡಿದೆ. 

Ad Widget

Ad Widget

”ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ರ ವಿಧಿ ತೆಗೆಯಬೇಕು ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅಂದೇ ಹೇಳಿದ್ದರು. ಆದರೆ ಕಾಂಗ್ರೆಸ್ ಪಕ್ಷ ಅವರ ಆಶಯವನ್ನು ಗೌರವಿಸದೇ ಆರ್ಟಿಕಲ್ 370 ರ ವಿಧಿಯನ್ನು 70 ವರ್ಷ ಮುಂದುವರಿಸಿದರು. ಬಾಬಾ ಸಾಹೇಬರ ಆ ಆಶಯವನ್ನು ನನಸು ಮಾಡಿದ್ದು ಮೋದಿ ಸರ್ಕಾರ” ಎಂದು ಹೇಳಿದೆ. 

Ad Widget

Ad Widget

”ಕಾಂಗ್ರೆಸ್ ಸಂವಿಧಾನ ವಿರೋಧಿ ಎಂಬ ಕಾರಣಕ್ಕೇ ಅಂಬೇಡ್ಕರ್ ಕಾಂಗ್ರೆಸ್‌ನ್ನು‌ ತ್ಯಜಿಸಿದ್ದು. “ಕಾಂಗ್ರೆಸ್‌ ಸೇರುವುದೆಂದರೆ, ಅದು ಆತ್ಮಹತ್ಯೆ ಮಾಡಿಕೊಂಡಂತೆ” ಎಂಬ ಅಂಬೇಡ್ಕರ್ ಮಾತು ಇಲ್ಲಿ ಉಲ್ಲೇಖಾರ್ಹ. ನಮ್ಮನ್ನೇ ಬಿಟ್ಟ ನಿಮಗೆ ಸೋಲೇ ಖಚಿತ ಎಂದು ಸಂವಿಧಾನ ಶಿಲ್ಪಿಯ ವಿರುದ್ಧ ಕಾಂಗ್ರೆಸ್ ಕುತಂತ್ರ ಮಾಡಿತ್ತು” ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. 

”ನೆಹರೂ ಸಮಾಧಿಗೆ 52 ಎಕರೆಗೂ ಹೆಚ್ಚು ಜಾಗ ಕೊಟ್ಟ ಕಾಂಗ್ರೆಸ್‌ಗೆ ಡಾ||ಅಂಬೇಡ್ಕರ್ ಅವರ ಶವಸಂಸ್ಕಾರಕ್ಕೂ 6 ಅಡಿ ಜಾಗವನ್ನು ದೆಹಲಿಯಲ್ಲಿ ಬೇಕಂತಲೇ ಕೊಡಲಿಲ್ಲ. ದೇಶದ ಬಡವರಿಗೆ ಬದುಕುವ ಹಕ್ಕು ಕೊಟ್ಟ ಅಂಬೇಡ್ಕರರಿಗೆ ಕಾಂಗ್ರೆಸ್ ಅಂತಿಮ ಸಂಸ್ಕಾರವನ್ನು ಗೌರವದಿಂದ ನಡೆಸಲೂ ಬಿಡದೆ ಅವಮಾನಿಸಿದ್ದನ್ನು ಜನ ಮರೆತಿಲ್ಲ” ಎಂದು ಹೇಳಿದೆ. 

ಬಿ.ಕೆ ಹರಿಪ್ರಸಾದ್ ಟ್ವೀಟ್ ಮಾಡಿ , ಬಾಬಾ ಸಾಹೇಬರ ಹೆಸರಿನಲ್ಲಿ ಬಿಜೆಪಿ ಮತ್ತು ಸಂಘಪರಿವಾರ ಇತಿಹಾಸದ ಸತ್ಯಗಳನ್ನ ಮರೆಮಾಚಿ, ಮೊಸಳೆ ಕಣ್ಣೀರು ಸುರಿಸುತ್ತಿರುವುದು ನಾಚಿಕೆಗೇಡು.

ವಾಟ್ಸಪ್ ಯೂನಿವರ್ಸಿಟಿಯಲ್ಲಿ ಉತ್ಪಾದಿಸಿದ ಸುಳ್ಳುಗಳನ್ನ ಹರಿ ಬಿಟ್ಟಿರುವುದು, ಅಂಬೇಡ್ಕರ್ ಪರಿನಿರ್ವಾಣ ದಿನದಂದು ಬಾಬಾ ಸಾಹೇಬರಿಗೆ ಮಾಡಿದ ಅವಮಾನವಲ್ಲವೇ BJP Karnataka ?

ಜಗತ್ತಿಗೆ ಶ್ರೇಷ್ಠವಾದ ಸಂವಿಧಾನವನ್ನ ಕೊಡಲು ಬಾಬಾ ಸಾಹೇಬರಿಗೆ ಅವಕಾಶ ಮಾಡಿಕೊಟ್ಟಿದ್ದೇ ಕಾಂಗ್ರೆಸ್ ಪಕ್ಷ.

ಒಂದಿಷ್ಟು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಪ್ರಧಾನಿ ನೆಹರೂ ಸಂಪುಟದಲ್ಲಿ ಕಾನೂನು ಸಚಿವರಾಗಲು ಅವಕಾಶ ಮಾಡಿಕೊಟ್ಟಿದ್ದು ಕಾಂಗ್ರೆಸ್ ಪಕ್ಷವೇ ಹೊರತು ಮೊಸಳೆ ಕಣ್ಣೀರು ಸುರಿಸುತ್ತಿರುವ ಬಿಜೆಪಿಯಲ್ಲ.

ಸಾರ್ವತ್ರಿಕ ಚುನಾವಣೆಯಲ್ಲಿ ಬಾಬಾ ಸಾಹೇಬರ ವಿರುದ್ಧ ಕಾಂಗ್ರೆಸ್ ಪಕ್ಷ ಸ್ಪರ್ಧಿಸಿದ್ದು ನಿಜಾ.ಅದೊಂದು ಚುನಾವಣಾ ಪ್ರಕ್ರಿಯೆ.

ಆದ್ರೆ ಇಂದಿನ Bharatiya Janata Party (BJP) ಯ ಮುಖವಾಡವೇ ಆಗಿದ್ದ ಹಿಂದೂ ಮಹಾಸಭಾ,ಬಾಬಾ ಸಾಹೇಬರ ವಿರುದ್ಧ ಸ್ಪರ್ಧಿಸಿದ್ದು ಸುಳ್ಳಾ?

ಬಾಬಾ ಸಾಹೇಬರಿಗೆ ಮತ ನೀಡಬೇಡಿ,ಹಿಂದೂ ವಿರೋಧಿಯೆಂದು ಪ್ರಚಾರ ಮಾಡಿದ್ದು ಸುಳ್ಳಾ?

ಮನುವಾದಿ ಬಿಜೆಪಿಯ ಮುಖವಾಡವನ್ನ ಬಾಬಾ ಸಾಹೇಬರು ಅಂದೇ ಮನುಸ್ಮೃತಿಯನ್ನ ಸುಡುವ ಮೂಲಕ ದೇಶಕ್ಕೆ ಸಾರಿದ್ದು ಸುಳ್ಳಾ?

ಮನುಷ್ಯ ವಿರೋಧಿ ಮನುಸ್ಮೃತಿಯನ್ನ ಸುಟ್ಟ ಸಿಟ್ಟಿಗೆ ಬಿಜೆಪಿ ಇಂದು ಸಂವಿಧಾನವನ್ನೇ ಬದಲಾವಣೆ ಮಾಡಲು ಬಂದಿದ್ದೇವೆ ಎಂದು ಬಹಿರಂಗವಾಗಿ ಹೇಳುತ್ತಿರುವುದು ನಿಜಾ ಅಲ್ವಾ BJP KARNATAKA ?

ಬಾಬಾ ಸಾಹೇಬರ ಮಾನವೀಯ ಸಿದ್ದಾಂತಕ್ಕೂ ಬಿಜೆಪಿ ಮನುವಾದಿ ಸಿದ್ದಾಂತಕ್ಕೆ ಎತ್ತಿಂದೆತ್ತಣ ಸಂಬಂಧ?

ಇತಿಹಾಸದ ಸತ್ಯಗಳನ್ನ ಮರೆಮಾಚಿ, ಬಾಬಾ ಸಾಹೇಬರ ಹೆಸರಿಗೆ ಮಸಿ ಬಳಿಯುವುದನ್ನ ಬಿಜೆಪಿ ನಿಲ್ಲಿಸದಿದ್ದರೆ, ಜನರು ತಕ್ಕ ಪಾಠ ಕಲಿಸುವುದು ಗ್ಯಾರೆಂಟಿ ಎಂದು ಬಿ.ಕೆ ಹರಿಪ್ರಸಾದ್ ಟ್ವೀಟ್ ಮಾಡಿದ್ದಾರೆ.

Click to comment

Leave a Reply

ಮಂಗಳೂರು

Padmaraj R Poojary-ನಾರಾಯಣ ಗುರುಗಳು ಸ್ಥಾಪಿಸಿದ ಕ್ಷೇತ್ರದಲ್ಲಿ 27 ವರ್ಷ ಸೇವೆ ಸಲ್ಲಿಸಿದವ ಕಾಂಗ್ರೆಸ್ ನ ಅಭ್ಯರ್ಥಿಯಾಗುತ್ತಲೇ ಗುರುಗಳ ಪ್ರತಿಮೆಗೆ ಪ್ರಧಾನಿ ಹಾರ ಹಾಕಿದ್ದಾರೆ. ಜಿಲ್ಲೆಗೆ 14 ಸಲ ಭೇಟಿ ನೀಡಿರುವ ಅವರಿಗೆ ಗುರುಗಳು ಸ್ಥಾಪನೆ ಮಾಡಿದ ಕುದ್ರೋಳಿ ಎಲ್ಲಿದೆ ಎಂಬುದು ಗೊತ್ತಿರಲಿಕ್ಕಿಲ್ಲ : ಪದ್ಮರಾಜ್ ಆರ್ ಪೂಜಾರಿ

Ad Widget

ಪ್ರಧಾನಮಂತ್ರಿಗಳು 14 ಸಲ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದು, ಆದರೆ ಅವರಿಗೆ ಬ್ರಹ್ಮಶ್ರೀ ನಾರಾಯಣ ಗುರುಗಳು ಸ್ಥಾಪನೆ ಮಾಡಿದ ಕ್ಷೇತ್ರ ಎಲ್ಲಿದೆ ಎಂಬುದು ಗೊತ್ತಿರಲಿಕ್ಕಿಲ್ಲ. ಅವರಿಗೆ ಅದನ್ನು ಬಿಜೆಪಿಯವರು ಹೇಳಿರಲಿಕ್ಕಿಲ್ಲ. ಆದರೆ ಕಾಂಗ್ರೆಸ್‌ನ ಅಭ್ಯರ್ಥಿ ನಾರಾಯಣ ಗುರುಗಳು ಸ್ಥಾಪನೆ ಮಾಡಿದ ಕ್ಷೇತ್ರದಲ್ಲಿ 27 ವರ್ಷಗಳಿಂದ ಕೆಲಸ ಮಾಡಿದವರು. ಅವನಿಗೆ ರಾಷ್ಟ್ರೀಯ ಪಕ್ಷವೊಂದು ಅವಕಾಶನ್ನು ಕೊಟ್ಟಿದೆ ಎನ್ನುವಾಗ ಇಲ್ಲಿನ ಬಿಜೆಪಿಯವರು ಪ್ರಧಾನ ಮಂತ್ರಿಗಳಿಗೆ ನಾರಾಯಣ ಗುರುಗಳನ್ನು ನೆನಪಿಸುತ್ತಾರೆ. ನಾರಾಯಣ ಗುರುಗಳ ಪ್ರತಿಮೆಗೆ ಹಾರ ಹಾಕುವಂತಹ ಕೆಲಸವನ್ನು ಅವರು ಮಾಡುತ್ತಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಟೀಕಿಸಿದ್ದಾರೆ .

Ad Widget

Ad Widget

Ad Widget

Ad Widget

ಕೋಟಿ ಚೆನ್ನಯರ ವಂಶಸ್ಥರು
ನಾವು ನಾರಾಯಣ ಗುರುಗಳ ಕುಲದಿಂದ ಬಂದವರು. ಕೋಟಿ ಚೆನ್ನಯರ ವಂಶಸ್ಥರು. ತುಳುನಾಡು ದೈವ ದೇವರುಗಳ ನೆಲೆಬೀಡು. ಬಹಳಷ್ಟು ಪೂಜೆ ಪುರಸ್ಕಾರಗಳನ್ನು ಮಾಡುತ್ತಾರೆ. ಸುಮಾರು ಮಸೀದಿಗಳಿದೆ, ಚರ್ಚ್ ಗಳಿವೆ. ಇಲ್ಲಿ ಪೂಜೆ ನಡೆಯುತ್ತದೆ. ಜನರಿಗೆ ದೇವರು ಯಾವುದು ಸರಿ ಯಾವುದು ತಪ್ಪು ಅನ್ನುವುದನ್ನು ತಿಳಿಯುವ ಶಕ್ತಿ ದೇವರು ಕೊಟ್ಟಿದ್ದಾನೆ. ದೇವರು ಜನರ ಮೂಲಕ ಇದಕ್ಕೆ ಸರಿಯಾದ ಉತ್ತರ ಎ. 26ರಂದು ನಡೆಯಲಿರುವ ಚುನಾವಣೆಯಲ್ಲಿ ಕೊಡುತ್ತಾನೆ.

Ad Widget

Ad Widget

Rally ಕ್ಯಾನ್ಸಲ್ ಮಾಡಿದ್ದೇಕೆ ?
ಭಾರತ ದೇಶದ ಪ್ರಧಾನ ಮಂತ್ರಿಗಳಾಗಿ ಮೋದಿಯವರು ಮಂಗಳೂರಿಗೆ ಬಂದಿರುವುದನ್ನು ನಾವು ಸ್ವಾಗತಿಸುತ್ತೇವೆ. ನಿನ್ನೆ ಅವರು ಇಲ್ಲಿ ಬಂದು Rally ಮಾಡಬೇಕಿತ್ತು ಅದನ್ನು ಅವರು ಕ್ಯಾನ್ಸಲ್ ಮಾಡಿದ್ದಾರೆ. ಅದಕ್ಕೆ ಕಾರಣ ಮತ್ತು ಉದ್ದೇಶ ಏನು ಎನ್ನುವುದನ್ನು ಅವರೇ ಹೇಳಬೇಕು.

Ad Widget

Ad Widget

33 ವರ್ಷಗಳ ಸಾಧನೆಯೇನು?
33 ವರ್ಷಗಳಲ್ಲಿ ಬಿಜೆಪಿಯ ಸಂಸದರು ನಮ್ಮನ್ನು ಪಾರ್ಲಿಮೆಂಟ್ನಲ್ಲಿ ರೆಪ್ರೆಸೆಂಟ್ ಮಾಡ್ತಾ ಇದ್ದಾರೆ. 33 ವರ್ಷಗಳಲ್ಲಿ ಇವರು ಮಾಡಿದ ಸಾಧನೆಗಳು ಏನು? ಬರೀ ಜಾತಿ ಧರ್ಮದ ಹೆಸರಿನಲ್ಲಿ ಎಷ್ಟೋ ಹಿಂದುಳಿದ ವರ್ಗಗಳ ಜನರ ಮನೆಗಳನ್ನು ಒಡೆದು ಅನಾಥರನ್ನಾಗಿ ಮಾಡಿದ್ದಾರೆ. ಅದು ಅಲ್ಲದಿದ್ದರೆ ಅವರು ಅದನ್ನು ನಿನ್ನೆ ಹೇಳಬೇಕಿತ್ತು. ಆದರೆ ಹೇಳಲಿಲ್ಲ.

Ad Widget

Ad Widget

ಪ್ರಧಾನ ಮಂತ್ರಿಯವರು ನಿನ್ನೆ ಇಲ್ಲಿಗೆ ಭೇಟಿ ನೀಡಿದ ಸುಸಂದರ್ಭ ಬಿಜೆಪಿ ನಾಯಕರು ಇಲ್ಲಿಯ ಸಮಸ್ಯೆಗಳ ಬಗ್ಗೆ ಅವರಿಗೆ ತಿಳಿಸಿರುತ್ತಾರೆ. ಮೋದಿಯವರಿಗೆ ರಾಜಕೀಯವಾಗಿ ನಾರಾಯಣ ಗುರುಗಳನ್ನು ಬಳಸುವುದನ್ನು ಬಿಟ್ಟರೆ, ನಿಜವಾಗಿ ನಾರಾಯಣ ಗುರುಗಳ ತತ್ತ್ವ ಆದರ್ಶಗಳನ್ನು ಜಗತ್ತಿಗೆ ತಿಳಿಸುವುದು ಅಗತ್ಯವಿದೆ. ಇದರ ಬಗ್ಗೆ ಅವರಿಗೆ ಕಾಳಜಿ ಇಲ್ಲ.

ಜಿಲ್ಲೆಗೆ ಆಗಮಿಸಿದ ಪ್ರಧಾನ ಮಂತ್ರಿಗಳಿಂದ ತಾವು ನಿರಂತರವಾಗಿ 33 ವರ್ಷಗಳಿಂದ ಗೆಲ್ಲಿಸಿದ ಬಿಜೆಪಿ ಸಂಸದರು. ಜನರಿಗೆ ಏನು ಮಾಡಿದ್ದಾರೆ, ಎಷ್ಟು ಉದ್ಯೋಗ ಒದಗಿಸಿದ್ದಾರೆ ಎಂಬೆಲ್ಲಾ ಪ್ರಶ್ನೆಗಳಿಗೆ ಜನರು ಉತ್ತರ ನಿರೀಕ್ಷಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆ ಅತೀ ಹೆಚ್ಚು ಟ್ಯಾಕ್ಸ್ ಕಟ್ಟುವಂತಹ ಜಿಲ್ಲೆಯಾಗಿದ್ದು, ಇವತ್ತು ಮೋದಿಯವರು ಜನರ ನಿರೀಕ್ಷೆಗೆ ತುಟ್ಟಿ ಬಿಚ್ಚದೆ ಹೋಗಿದ್ದಾರೆ. ಜನರು ಇದನ್ನು ಅರ್ಥ ಮಾಡಿಕೊಂಡಿದ್ದಾರೆ  ಎಂದು ಹೇಳಿದರು.

Continue Reading

ಮಂಗಳೂರು

Congress roadshow-ಉಳ್ಳಾಲದಲ್ಲಿ ರಾರಾಜಿಸಿದ ಕಾಂಗ್ರೆಸ್ ರೋಡ್ ಶೋ; ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರಿಗೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದ ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರದ ಜನತೆ

Ad Widget

ಉಳ್ಳಾಲ: ರೋಡ್ ಶೋ ಮೂಲಕ ನಡೆಸಿದ ಚುನಾವಣಾ ಪ್ರಚಾರ ಕಾರ್ಯ ಕಾಂಗ್ರೆಸ್’ಗೆ ಹೊಸ ಉತ್ಸಾಹ ತುಂಬುವಲ್ಲಿ ಸಫಲವಾಗಿದೆ.

Ad Widget

Ad Widget

Ad Widget

Ad Widget

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರದಲ್ಲಿ ರೋಡ್ ಶೋ ನಡೆಸಿದ್ದು, ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು.

Ad Widget

Ad Widget

ಸಂಜೆ ಹೊತ್ತಿಗೆ ಮುಡಿಪು ತಲುಪಿದ ರೋಡ್ ಶೋಗೆ ಕಾರ್ಯಕರ್ತರು, ಮುಖಂಡರು ಭರ್ಜರಿ ಸ್ವಾಗತ ಕೋರಿದರು. ಅಲ್ಲಿ ಪ್ರಚಾರ ಕಾರ್ಯ ನಡೆಸಿ, ಪೂಪಾಡಿಕಲ್ಲು, ನರಿಂಗಾನ, ಕೈರಂಗಳ, ಮಂಜನಾಡಿ, ನಾಟೆಕಲ್ಲು, ಕಿನ್ಯಾ, ಮೀನಾದಿ, ಮಿಂಪ್ರಿ ಮೊದಲಾದ ಪ್ರದೇಶಗಳಲ್ಲಿ ಚುನಾವಣಾ ಪ್ರಚಾರ ನಡೆಸಲಾಯಿತು.

Ad Widget

Ad Widget

ಅಭ್ಯರ್ಥಿ ಬರುತ್ತಿದ್ದಂತೆ ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಿದರು. ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರಿಗೆ ಹೂಮಾಲೆ ಹಾಕಿ ಗೆಲುವಿಗೆ ಹಾರೈಸಿದರು. ತೆರೆದ ವಾಹನದಲ್ಲಿ ಅಭ್ಯರ್ಥಿ ತೆರಳುತ್ತಿದ್ದರೆ ತುಂಬಿದ ಸಂಖ್ಯೆಯಲ್ಲಿದ್ದ ಕಾರ್ಯಕರ್ತರು ಹರ್ಷೋದ್ಘಾರ ಮಾಡಿದರು.

Ad Widget

Ad Widget
Continue Reading

ರಾಜಕೀಯ

Lokpoll-ಲೋಕ್ ಪೋಲ್ ಸಮೀಕ್ಷೆ ಬಹಿರಂಗ : ಕರ್ನಾಟಕದಲ್ಲಿ ಕಾಂಗ್ರೇಸ್‍ ಮೇಲುಗೈ – ಕ್ಲೀನ್ ಸ್ವೀಪ್ ಕನಸಿನಲ್ಲಿರುವ ಬಿಜೆಪಿ-ಜೆಡಿಎಸ್ ಮೈತ್ರಿಗೆ ಶಾಕ್..!

Ad Widget

ಬೆಂಗಳೂರು : ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ರಂಗೇರಿದ್ದು, ಮೊದಲ ಹಂತದ ಮತದಾನಕ್ಕೆ ಕೇವಲ 13 ದಿನ ಮಾತ್ರ ಬಾಕಿಯಿದೆ. ರಾಜ್ಯದಲ್ಲಿ ಗರಿಷ್ಠ ಸ್ಥಾನಗಳನ್ನು ಗೆಲ್ಲಲು ಬಿಜೆಪಿ – ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಭರ್ಜರಿ ತಯಾರಿ ನಡೆಸುತ್ತಿವೆ. ಇದರ ನಡುವೆ ಲೋಕ್‌ ಪೋಲ್‌ ಸಮೀಕ್ಷೆ ಬಿಡುಗಡೆಯಾಗಿದ್ದು, 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲುವ ಗುರಿ ಹೊಂದಿದ್ದ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಸಮೀಕ್ಷೆಯ ಫಲಿತಾಂಶದಿಂದ ಶಾಕ್‌ ಆಗಿದೆ. ಈ ಸಮೀಕ್ಷೆಯಿಂದ ಆಡಳಿತಾರೂಢ ಕಾಂಗ್ರೆಸ್‌ ನಾಯಕರು ಖುಷ್‌ ಆಗಿದ್ದಾರೆ.

Ad Widget

Ad Widget

Ad Widget

Ad Widget

ಕಳೆದ ಬಾರಿಗಿಂತ ಸುಮಾರು 10ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಕಳೆದುಕೊಳ್ಳಲಿದೆ ಎಂದು ಲೋಕ್‌ ಪೋಲ್‌ ಸಮೀಕ್ಷೆ ಭವಿಷ್ಯ ನುಡಿದಿದ್ದು, ಕಾಂಗ್ರೆಸ್‌ ಹತ್ತಿರಹತ್ತಿರ 20 ಕ್ಷೇತ್ರಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆ ಸೂಚಿಸಿದೆ. ಈಗಲೇ ಚುನಾವಣೆ ನಡೆದರೆ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ 11 ರಿಂದ 13 ಕ್ಷೇತ್ರಗಳನ್ನು ಗೆಲ್ಲಲಿದ್ದರೆ, ಕಾಂಗ್ರೆಸ್‌ 15 ರಿಂದ 17 ಕ್ಷೇತ್ರಗಳನ್ನು ಗೆಲ್ಲಲಿದೆ ಎಂದು ಲೋಕ್‌ ಪೋಲ್‌ ಸಮೀಕ್ಷೆ ಹೇಳಿದೆ.

Ad Widget

Ad Widget

15 ದಿನದ ಹಿಂದೆ ಪ್ರಕಟವಾಗಿದ್ದ ಇದೇ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಆಡಳಿತಾರೂಢ ಕಾಂಗ್ರೆಸ್‌ 12 ರಿಂದ 14 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎನ್ನಲಾಗಿತ್ತು. ಬಿಜೆಪಿ 10 ರಿಂದ 12 ಕ್ಷೇತ್ರಗಳಲ್ಲಿ, ಜೆಡಿಎಸ್‌ 1 ರಿಂದ 2 ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂದು ತಿಳಿಸಿತ್ತು. ಈಗ ಮತ್ತೆ ಅನೇಕ ಕ್ಷೇತ್ರಗಳಲ್ಲಿ ವ್ಯತ್ಯಾಸ ಆಗಿದ್ದು, ಲೋಕ್‌ ಪೋಲ್‌ ಸಮೀಕ್ಷೆಯಲ್ಲಿ ಕಾಂಗ್ರೆಸ್‌ ತನ್ನ ಸ್ಥಾನಗಳನ್ನು ವೃದ್ಧಿಸಿಕೊಂಡಿದೆ. ಪ್ರತಿ ಕ್ಷೇತ್ರದಲ್ಲಿಯೂ 1350 ಜನರ ಪ್ರತಿಕ್ರಿಯೆಯನ್ನು ಪಡೆದು ಸಮೀಕ್ಷೆ ನಡೆಸಲಾಗಿದೆ.

Ad Widget

Ad Widget

ಸಮೀಕ್ಷೆಯಲ್ಲಿ ಕಂಡುಬಂದ ಅಂಶಗಳು!
ಸಮೀಕ್ಷೆಯ ವೇಳೆ ಹಲವು ವಿಚಾರಗಳು ಗಮನಕ್ಕೆ ಬಂದಿವೆ ಎಂದು ಲೋಕ್‌ ಪೋಲ್‌ ಸಮೀಕ್ಷೆ ತನ್ನ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಹೇಳಿದೆ. ಪ್ರಮುಖವಾಗಿ ನಿರುದ್ಯೋಗ, ಹಣದುಬ್ಬರ, ಪ್ರಧಾನಿ ಅಭ್ಯರ್ಥಿ, ಕಲ್ಯಾಣ ಯೋಜನೆಗಳು ಮತ್ತು ಕನ್ನಡ ಅಭಿಮಾನದ ಐದು ವಿಷಯಗಳನ್ನು ಜನರು ಮುಖ್ಯವಾಗಿ ಗಮನಿಸಿದ್ದಾರೆ. ಜೊತೆಗೆ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಕಾಂಗ್ರೆಸ್‌ ಪರ ಒಲವು ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ ಎಂದು ಸಮೀಕ್ಷೆ ಹೇಳಿದೆ.

Ad Widget

Ad Widget

ಸದಾನಂದ ಗೌಡ ಹಾಗೂ ಪ್ರತಾಪ್‌ ಸಿಂಹಗೆ ಟಿಕೆಟ್‌ ಮಿಸ್‌ ಆಗಿದ್ದರಿಂದ ಒಕ್ಕಲಿಗ ಮತಗಳು ಕಾಂಗ್ರೆಸ್‌ ಕಡೆ ವಾಲಿವೆ, ಹಲವು ಕ್ಷೇತ್ರಗಳಲ್ಲಿ ಬಿಜೆಪಿ – ಜೆಡಿಎಸ್‌ ಮೈತ್ರಿಯಲ್ಲಿ ಹೊಂದಾಣಿಕೆ ಕೊರತೆಯಿಂದ ಜೆಡಿಎಸ್‌ ನಾಯಕರು ಬಿಜೆಪಿ ಪರ ಕೆಲಸ ಮಾಡುತ್ತಿಲ್ಲ. ಚಿಕ್ಕಬಳ್ಳಾಪುರ, ಮೈಸೂರು, ಚಿತ್ರದುರ್ಗ, ಚಾಮರಾಜನಗರ, ರಾಯಚೂರಿನಲ್ಲಿ ಜೆಡಿಎಸ್‌ ಉತ್ತಮ ಸಂಘಟನೆ ಹೊಂದಿದ್ದು, ಅಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ನಿಲ್ಲಿಸಲಾಗಿದೆ. ಇದರಿಂದ ಬಿಜೆಪಿಗೆ ಹೊಡೆತ ಎನ್ನಲಾಗಿದೆ. ಇನ್ನು, ಅಹಿಂದ ಮತದಾರರು ಕಾಂಗ್ರೆಸ್‌ ಪರ ಇದ್ದು, ಹಲವು ಕ್ಷೇತ್ರಗಳಲ್ಲಿ ಬಿಜೆಪಿಗೆ ಆಂತರಿಕ ಅಸಮಾಧಾನ ಹೊಡೆತ ಕೊಡಲಿದೆ ಎಂದು ಲೋಕ್‌ ಪೋಲ್‌ ಸಮೀಕ್ಷೆ ಹೇಳಿದೆ.

Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading