ಮಂಗಳೂರು ಡಿ.4: ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಖ್ಯಾತ ನಟ ಕಿಚ್ಚ ಸುದೀಪ್ (Actor Kiccha Sudeep) ಡಿ.4 ರಂದು ಬೆಳಗ್ಗೆ ಭೇಟಿ ನೀಡಿ ಪ್ರಾರ್ಥಿಸಿದರು.
ಪತ್ನಿ ಪ್ರಿಯಾ ಜೊತೆ ಆಗಮಿಸಿದ ಸುದೀಪ್ ವಿಶೇಷ ಪೂಜೆ ನೆರವೇರಿಸಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು. ಆ ಸಂದರ್ಭ ದೇವಳದ ಅರ್ಚಕರು ಕಟೀಲು ದೇವಿಯ ಕಥೆಯನ್ನು ಸುದೀಪ್ ದಂಪತಿಗೆ ಹೇಳಿದರು. ಕಟೀಲು ದೇವಿಗೆ ಎಳನೀರು ಪ್ರಿಯಾಳಾಗಿದ್ದು, ದೇವಿಯ ಭ್ರಮಾರ ಸ್ವರೂಪ ಶಾಂತಕ್ಕೆ ಬರಲು ಎಳನೀರು ಅಭಿಷೇಕ ನಡೆಸಲಾಗುತ್ತದೆ ಎಂದು ಅರ್ಚಕರು ಹೇಳಿದರು. ಪ್ರತಿದಿನ 600 ಎಳನೀರು ಬರುತ್ತದೆ ಶುಕ್ರವಾರ 4000 ಎಳನೀರು, ಆದಿತ್ಯವಾರ 2000 ನಷ್ಟು ಎಳನೀರು ಬರುತ್ತದೆ ಎಂದರು. ಅಭಿಷೇಕ ಆಗುವವರೆಗೆ ಯಾರೂ ಎಳನೀರು ಕುಡಿಯಬಾರದು ಆದ ನಂತರ ಅದೇ ಎಳನೀರನ್ನು ಕುಡಿಯಲು ಕೊಡುತ್ತೇವೆ ಎಂದರು.
ಕಟೀಲು ಮತ್ತು ಮುಲ್ಕಿಯಲ್ಲಿ ನಡೆಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿರುವ ಸುದೀಪ್ ದೇವಳಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಈ ವೇಳೆ ಅವರನ್ನು ದೇವಸ್ಥಾನದ ವತಿಯಿಂದ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಉಪಸಿತರಿದ್ದರು. ಖ್ಯಾತ ನಟನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು.