Young Girl Misiing: ಉಡುಪಿ ಡಿ.3 : ಟೈಲರ್ ಬಳಿ ಬಟ್ಟೆ ಹೊಲಿಯಲು ನೀಡುವುದಾಗಿ ತಿಳಿಸಿ ಮನೆಯಿಂದ ಹೋದ ಯುವತಿ ವಾಪಸ್ಸು ಬಾರದೆ ನಾಪತ್ತೆಯಾಗಿರುವ ಘಟನೆ ಉಡುಪಿಯ ಬಡಗುಬೆಟ್ಟುವಿನ ಇಂದಿರಾ ನಗರದಲ್ಲಿ ನಡೆದಿದೆ. 19 ರ ಹರೆಯದ ನಿಖಿತಾ ನಾಪತ್ತೆಯಾದ ಯುವತಿ.
ಇವರು ನ.28 ರಂದು ಉಡುಪಿಯ ಬಡಗುಬೆಟ್ಟು ಗ್ರಾಮದ ಇಂದಿರಾ ನಗರದಲ್ಲಿರುವ ತನ್ನ ಅಜ್ಜಿ ಮನೆಗೆ ಬಂದಿದ್ದರು. ಬಳಿಕ ಬೆಳಿಗ್ಗೆ 10:30 ರ ಸುಮಾರಿಗೆ ಬಟ್ಟೆ ಹೊಲಿಯಲು ಕೊಟ್ಟು ಬರುವುದಾಗಿ ಹೇಳಿ ಮನೆಯಿಂದ ಹೋದವರು ವಾಪಾಸು ಬಾರದೇ ಕಾಣೆಯಾಗಿದ್ದಾರೆ.
ಇವರ ಬಗ್ಗೆ ಸಂಬಂಧಿಕರ ಮನೆಯಲ್ಲಿ ಎಲ್ಲಾ ಕಡೆ ಹುಡುಕಾಡಿದರೂ ಈ ವರೆಗೆ ಪತ್ತೆಯಾಗಿರುವುದಿಲ್ಲ ಎಂಬುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಪೂರ ಶರೀರ, ಗೋದಿ ಮೈಬಣ್ಣ ಹೊಂದಿರುವ ಈಕೆ, ನಾಪತ್ತೆಯಾದ ವೇಳೆ ಪಿಂಕ್ ಚೂಡಿ ದಾರದ ಟಾಪ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದರು. ಇವರು ಕನ್ನಡ, ತುಳು ಭಾಷೆ ಮಾತನಾಡುತ್ತಾರೆ.
Ermai falls ಬೆಳ್ತಂಗಡಿ : ಸ್ನೇಹಿತರ ಜತೆ ಎಮಾ೯ಯಿ ಫಾಲ್ಸ್ ಗೆ ತೆರಳಿದ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಮೃತ್ಯು