ಹೊಸದಿಲ್ಲಿ: ಕಾಂಗ್ರೆಸ್ ನಿಂದ ಬಿಜೆಪಿಗೆ ಪಕ್ಷಾಂತರ ಮಾಡಿರುವ ನಾಯಕರುಗಳಿಗೆ ಬಿಜೆಪಿ ಪ್ರಮುಖ ಹುದ್ದೆ ನೀಡಿದೆ. ಮೂರು ತಿಂಗಳ ಹಿಂದೆಯಷ್ಟೇ ಪಕ್ಷ ತ್ಯಜಿಸಿ ಬಂದಿರುವ ಮಾಜಿ ಕಾಂಗ್ರೆಸ್ ನಾಯಕ ಜೈವೀರ್ ಶೆರ್ಗಿಲ್ Jaiveer Shergill ಅವರನ್ನು ವಕ್ತಾರರನ್ನಾಗಿ ಶುಕ್ರವಾರ ನೇಮಿಸಲಾಗಿದೆ.
ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹಾಗೂ ಮಾಜಿ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸುನೀಲ್ ಜಾಖರ್ ಅವರನ್ನು ಸೇರ್ಪಡೆ ಮಾಡಲಾಗಿದೆ.
ಇತ್ತಿಚೆಗೆಷ್ಟೇ ಶೇರ್ಗಿಲ್ ಕಾಂಗ್ರೇಸ್ ನಲ್ಲಿದ್ದಾಗ ಪತ್ರಿಕಾಗೋಷ್ಠಿ ನಡೆಸಿದ ವಿಡಿಯೋ ವೈರಲ್ ಆಗುತ್ತಿದೆ, ಬಿಜೆಪಿ ಓಟಿಗೆ ಮಾತ್ರ ಗಮನ ಕೊಡ್ತದೆ ರಾಷ್ಟ್ರೀಯತೆಗಲ್ಲ, 26/11 ರ ಪುಲ್ವಾಮ ದಾಳಿ ನಂತರ ಬಿಜೆಪಿ ಅದನ್ನು ಪ್ರಚಾರಕ್ಕಾಗಿ ಬಳಸಿಕೊಂಡಿತು. ಸೈನಿಕರ ರಕ್ತವನ್ನು ಬಿಜೆಪಿ ಚುನಾವಣೆಗೆ ಬಳಸಿಕೊಂಡಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಪುಲ್ವಾಮ ದಾಳಿಯ ಹೆಸರಿನಲ್ಲಿ ಓಟ್ ಕೇಳಲು ಬಿಜೆಪಿಗೆ ನಾಚಿಕೆಯಾಗಬೇಕು ಎಂದಿದ್ದರು.
ರಾಷ್ಟ್ರೀಯ ಭದ್ರತೆಯ ಲಾಭ ಮಾತ್ರ ತೆಗೊಳುತ್ತದೆ , ಭದ್ರತಾ ವೈಫಲ್ಯದ ವಿಷಯದಲ್ಲಿ ಯಾಕೆ ಬಿಜೆಪಿ ಪ್ರಶ್ನೆಗಳನ್ನು ಎದುರಿಸಲು ತಯಾರಿಲ್ಲ..? ಎಂದು ಮೂರು
ಪುಲ್ವಾಮ ದಾಳಿಯ ಭದ್ರತಾ ವೈಫಲ್ಯದ ಹೊಣೆ ಯಾರು ಹೊತ್ತುಕೊಳ್ಳಬೇಕು..?
ಪ್ರಧಾನಿ ಮೋದಿ ತನ್ನ ಸ್ವಂತ ಪ್ರಚಾರಕ್ಕಾಗಿ 4500 ಕೋಟಿ ಖರ್ಚು ಮಾಡಿದೆ, 1.5 ಕೋಟಿ ಮೋದಿ ತನ್ನ ಭದ್ರತೆಗೆ ಪ್ರತಿ ದಿನ ಖರ್ಚು ಮಾಡ್ತಾರೆ ಎಂದಿದ್ದರು. ಬಿಜೆಪಿ ಸರ್ಕಾರ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದವರಿಗೆ ಕೊಟ್ಟ ಆಶ್ವಾಸನೆ ಯಾಕೆ ಈಡೆರಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.
BJP spokesperson @JaiveerShergill has some serious questions for BJP,
— Srinivas BV (@srinivasiyc) December 2, 2022
Prime Minister must answer 👇 pic.twitter.com/5JdCHaSrX2
ಈ ವಿಡಿಯೋ ಇದೀಗ ವೈರಲ್ ಆಗ್ತಿದೆ. ಯುವ ಕಾಂಗ್ರೇಸ್‍ನ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಈ ವಿಡಿಯೋ ಹಾಕಿ ಬಿಜೆಪಿ ವಕ್ತಾರ ಮೋದಿಯನ್ನೇ ಪ್ರಶ್ನಿಸುತ್ತಿದ್ದಾನೆ ಎಂದಿದ್ದಾರೆ.
ಶೇರ್ಗಿಲ್ ಬಿಜೆಪಿ ರಾಷ್ಟ್ರೀಯ ವಕ್ತಾರರಾದ ನಂತರವೂ ತನ್ನ ಫೇಸ್ಬುಕ್ ಖಾತೆಯಲ್ಲಿ ಕಾಂಗ್ರೇಸ್ ನ ಶಾಲು ಹಾಕಿದ ಪೋಟೋ ವನ್ನೇ ಡಿಪಿಯಾಗಿ ಇಟ್ಟುಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ.
